ಮುಂಬೈ: ಪ್ರಥಮ ವರ್ಷದ ಪಿಯು ವ್ಯಾಸಂಗ ಮಾಡುತ್ತಿದ್ದ ಬಾಲಕನಿಗೆ ಬೈಕ್ ರೈಡ್ ಮಾಡಲು ಅನುಮತಿ ನೀಡಲಿಲ್ಲ ಎಂಬ ಕಾರಣಕ್ಕಾಗಿ ತಂದೆಯೊಂದಿಗೆ ಜಗಳ ಮಾಡಿರುವ ಮಗ ಕಾಲೇಜ್ನಲ್ಲಿ ಬೆಂಕಿ ಹಂಚಿಕೊಂಡಿರುವ ಘಟನೆ ನಡೆದಿದೆ.
ಮುಂಬೈನ ಕಲಂಬೋಲಿ ಪ್ರದೇಶದ ಕಾಲೇಜ್ ಬಾತ್ರೂಂನಲ್ಲಿ ಈ ಘಟನೆ ನಡೆದಿದೆ. ವೃತ್ತಿಯಲ್ಲಿ ಪೊಲೀಸ್ ಪೇದೆಯಾಗಿರುವ ಬಾಲಕನ ತಂದೆ ಬೈಕ್ ರೈಡ್ ಮಾಡುವ ವಿಚಾರವಾಗಿ ಮಗನೊಂದಿಗೆ ವಾದ ಮಾಡಿದ್ದಾರೆ. ಇಷ್ಟಕ್ಕೆ ಆಕ್ರೋಶಗೊಂಡಿರುವ ಆತ ಬೆಂಕಿ ಹಚ್ಚಿಕೊಂಡಿದ್ದಾನೆ. ಇದರಿಂದ ಆತ ಶೇ 90 ರಷ್ಟು ಸುಟ್ಟಿದ್ದು, ವೈದ್ಯರು ಮುಂದಿನ 48 ಗಂಟೆಗಳ ಕಾಲ ತೀವ್ರ ನಿಗಾ ಘಟಕದಲ್ಲಿರಿಸಿದ್ದಾರೆ.
ಕಾಲೇಜ್ಗೆ ಬೈಕ್ ತೆಗೆದುಕೊಂಡು ಹೋಗುವುದಾಗಿ ಆತ ಹಠ ಹಿಡಿದಿದ್ದನು. ಆದರೆ, ಅದಕ್ಕೆ ತಂದೆ ನಿರಾಕರಣೆ ಮಾಡಿದ್ದು, ಅದೇ ಆಕ್ರೋಶದಲ್ಲಿ ತಂದೆಯ ಮೋಟಾರ್ ಸೈಕಲ್ನಿಂದ ಪೆಟ್ರೋಲ್ ತೆಗೆದುಕೊಂಡು ಕಾಲೇಜ್ಗೆ ತೆರಳಿದ್ದಾನೆ. ಅಲ್ಲಿನ ಬಾತ್ರೂಂನಲ್ಲಿ ಬಾಗಿಲು ಹಾಕಿಕೊಂಡು ಮೈಮೇಲೆ ಪೆಟ್ರೋಲ್ ಸುರಿದುಕೊಂಡು ಈ ರೀತಿಯಾಗಿ ನಡೆದುಕೊಂಡಿದ್ದಾನೆ.
ಆತನ ದೇಹಕ್ಕೆ ಬೆಂಕಿ ತಗಲುತ್ತಿದ್ದಂತೆ ಕಿರುಚಾಡಲು ಶುರು ಮಾಡಿದ್ದು, ಈ ವೇಳೆ ಕಾಲೇಜ್ ಆಡಳಿತ ಮಂಡಳಿ ಆತನನ್ನು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಇನ್ನು ಆತನ ಬ್ಯಾಗ್ನಲ್ಲಿ ಸೂಸೈಡ್ ನೋಟ್ ಸಿಕ್ಕಿದ್ದು, ಪ್ರಕರಣ ದಾಖಲು ಮಾಡಿಕೊಂಡಿದ್ದಾಗಿ ತಿಳಿದು ಬಂದಿದೆ.