ETV Bharat / bharat

ಅಪ್ಪಾ ಐ ಲವ್​ ಯೂ ಅಪ್ಪಾ: ಮಗಳಿಗಾಗಿ 'ಪೆಡಲ್​ ಆಟೋ'ವನ್ನೇ ವಿನ್ಯಾಸಗೊಳಿಸಿದ ತಂದೆ - ಕಾಸರಗೋಡಿನಲ್ಲಿ ಪೆಡಲ್​ ಮೂಲಕ ಚಲಿಸುವ ಆಟೋ ವಿನ್ಯಾಸ

ತಂದೆ ಮಗಳ ಸಂಬಂಧ ಬೆಲೆಕಟ್ಟಲಾಗದ್ದು, ಮಗಳ ಸಂತೋಷಕ್ಕೋಸ್ಕರ ತಂದೆ ಏನು ಬೇಕಾದರೂ ಮಾಡಬಲ್ಲ. ಹೀಗಾಗಿಯೇ ಇಲ್ಲೊಬ್ಬ ತಂದೆ ಕೊರೊನಾ ಲಾಕ್​ಡೌನ್​ನಲ್ಲಿ ಆಟೋದಲ್ಲಿ ತನ್ನನ್ನು ಹೊರಗೆ ಕರೆದೊಯ್ಯಲು ಆಗದ್ದಕ್ಕೆ ಮಗಳು ಬೇಜಾರಾಗದ್ದನ್ನು ಕಂಡು, ತನ್ನ ವಿಶೇಷ ಚೇತನ ಮಗಳಿಗೆಂದೇ ಪೆಡಲ್​ ಮೂಲಕ ಚಲಿಸುವ ರಿಕ್ಷಾವನ್ನೇ ಅನ್ವೇಷಣೆ ಮಾಡಿ ತಂದೆ - ಮಗಳ ಬಾಂಧವ್ಯಕ್ಕೆ ಸಾಕ್ಷಿಯಾಗಿ ನಿಂತಿದ್ದಾರೆ.

Father designs lifelike autorickshaw for daughter ailing with cerebral palsy
ಅಪ್ಪ ಐ ಲವ್​ ಯೂ ಅಪ್ಪ
author img

By

Published : Oct 26, 2020, 6:51 PM IST

ಕಾಸರಗೋಡು: ಮಕ್ಕಳ ಸಂತೋಷಕ್ಕೋಸ್ಕರ ಹೆತ್ತವರು ಎಷ್ಟೆಲ್ಲ ತ್ಯಾಗ ಮಾಡ್ತಾರೆ. ಮಕ್ಕಳ ನಗುವಿನಲ್ಲೇ ತಮ್ಮ ಜೀವನದ ಖುಷಿಯನ್ನು ಕಂಡುಕೊಳ್ತಾರೆ. ಅದೇ ರೀತಿ ಇಲ್ಲೊಬ್ಬ ತಂದೆ ಕೈಗಳು ಸ್ವಾಧೀನವಿಲ್ಲದ ತಮ್ಮ ವಿಕಲಚೇತನ ಮಗಳಿಗಾಗಿ ಪೆಡಲ್​ ಮೂಲಕ ಚಲಿಸಬಲ್ಲ ಆಟೋ ರಿಕ್ಷಾವನ್ನೇ ಕಂಡು ಹಿಡಿದಿದ್ದಾರೆ.

ವೃತ್ತಿಯಲ್ಲಿ ಆಟೋ ಡ್ರೈವರ್​ ಆಗಿರುವ ಸುರೇಶ್​ ಮೂಲತಃ ಕೇರಳದ ಕಾಸರಗೋಡು ಜಿಲ್ಲೆಯ ಚೆಮ್ಮಟಮ್​​ನ ನಿವಾಸಿ. ಇವರ ಮಗಳು ಸ್ನೇಹ ತನ್ನ ಎರಡೂ ಕೈಗಳು ಸ್ವಾಧೀನ ಕಳೆದುಕೊಂಡು ಅಂಗವೈಲ್ಯಕ್ಕೆ ಒಳಗಾಗಿದ್ದಾಳೆ. ಕೊರೊನಾ ಬಿಕ್ಕಟ್ಟು ಎದುರಾಗುವ ಮೊದಲು ನಿತ್ಯ ಬೆಳಗ್ಗೆ ತಮ್ಮ ಮಗಳನ್ನು ಆಟೋದಲ್ಲಿ ಕೂರಿಸಿಕೊಂಡು ಅಪ್ಪ - ಮಗಳು ಜಾಲಿರೈಡ್​ ಹೋಗುತ್ತಿದ್ರು.

ಆದರೆ, ಕೋವಿಡ್ ಹಿನ್ನೆಲೆ ಲಾಕ್​ಡೌನ್​ ಹೇರಿದ ಪರಿಣಾಮ ಆಟೋ ಸಂಚಾರ ಸ್ತಬ್ಧಗೊಂಡು ಮನೆಯಲ್ಲೇ ಕೂರುವಂತಾಯ್ತು. ಇತ್ತ ಮಗಳನ್ನು ಆಟೋದಲ್ಲಿ ಹೊರಗೆ ಕರೆದುಕೊಂಡ ಹೋಗಲಾರದ ಸ್ಥಿತಿ ಬಂದಿದ್ದಕ್ಕೆ ಸಹಜವಾಗಿ ತಂದೆ ಸುರೇಶ್​ಗೆ ಬೇಸರವಾಯ್ತು. ಈ ವೇಳೆ, ಹೇಗಾದರೂ ಮಾಡಿ ಮಗಳನ್ನು ಮತ್ತೆ ಖುಷಿ ಪಡಿಸಲು ಪರ್ಯಾಯ ಯೋಚನೆ ಮಾಡಿದ ಸುರೇಶ್​ಗೆ ತಲೆಯಲ್ಲಿ ಹೊಸ ಐಡಿಯಾ ಒಂದು ಬಂತು.

ಮಗಳಿಗೆ ಕೈ ಸ್ವಾಧೀನವಿಲ್ಲ. ಆದರೆ, ಕಾಲುಗಳು ಕೆಲಸ ಮಾಡುತ್ತೇವೆ, ನಾನು ಪೆಡಲ್​​ ಮೂಲಕ ಚಲಿಸುವ ಆಟೋ ಕಂಡು ಹಿಡಿದ್ರೆ, ಮಗಳು ತಾನಾಗೇ ಪೆಡಲ್​ ತುಳಿದುಕೊಂಡು ರಿಕ್ಷಾ ಸವಾರಿ ಮಾಡಬಲ್ಲಳು ಎಂದು ಯೋಚಿಸಿದ್ರು. ನಂತರ ತಡ ಮಾಡದೇ ಕಾರ್ಯಪ್ರವೃತ್ತರಾಗಿ ಈ ಮೂರು ಚಕ್ರದ ಪೆಡಲ್​ ಮೂಲಕ ಚಲಿಸುವ ಆಟೋರಿಕ್ಷಾ ವಿನ್ಯಾಸಗೊಳಿಸಿಯೇ ಬಿಟ್ರು.

ಮೊದಲೇ ಆಟೋಮೊಬೈಲ್​ ಕ್ಷೇತ್ರದಲ್ಲಿ ಹಾಗೂ ಕಾರ್ಪೆಂಟರ್​ ಕೆಲಸ ಮಾಡಿದ ಅನುಭವ ಹೊಂದಿದ್ದ ಸುರೇಶ್​, ಲಾಕ್​ಡೌನ್‌ನಿಂದ ಹೊರ ಹೋಗಲಾಗದೇ ಖಿನ್ನತೆಗೊಳಗಾಗಿದ್ದ ಮಗಳು ಸ್ನೇಹಾಳಿಗಾಗಿ ಈ ಹೊಸ ರೀತಿಯ ಆಟೋ ಗಿಫ್ಟ್​ ನೀಡುವ ಮೂಲಕ ಮಗಳು ಕಳೆದುಕೊಂಡಿದ್ದ ಖುಷಿ ಮರಳಿ ನೀಡಿದ್ದಾರೆ.

ಇನ್ನು ಈ ಪೆಡಾಲ್​ ಆಟೋರಿಕ್ಷಾ ತಯಾರಿಸಲು ಫೋಮ್ ಶೀಟ್, ಪ್ಲೈವುಡ್, ಕಬ್ಬಿಣದ ಕೊಳವೆಗಳು, ಸೈಕಲ್​ ಪೆಡಲ್​ಗಳು, ಚಕ್ರಗಳು, ಮರದ ತುಂಡುಗಳು ಮತ್ತು ಪ್ಲಾಸ್ಟಿಕ್ ಹಾಳೆ ಬಳಸಿದ್ದಾರೆ. ಈ ರಿಕ್ಷಾ ತಯಾರಿಸಲು ಒಂದೂವರೆ ತಿಂಗಳು ಸಮಯ ಹಿಡಿದಿದೆ. ಮೊದಲು ಈ ಆಟೋವನ್ನು ಮನೆಯ ಆವರಣದಲ್ಲಿ ಮಗಳು ಓಡಾಡಲು ಅನುಕೂಲವಾಗುವಂತೆ ವಿನ್ಯಾಸಗೊಳಿಸಲು ಸುರೇಶ್​ ಯೋಜಿಸಿದ್ರು.

ಆದರೆ, ಈಗ ಅದರಲ್ಲಿ ರಸ್ತೆಯಲ್ಲಿ ಕೂಡ ಹೋಗಬಹುದು ಅಂತಾರೆ ಈ ತಂದೆ. ಇನ್ನು ಈ ಆಟೋಗೆ ‘ಸ್ನೇಹಮೋಲ್’ಎಂದು ಹೆಸರಿಟ್ಟಿದ್ದು, ಸುರೇಶ್ ಅವರ ನಿಜವಾದ ಆಟೋ ರಿಕ್ಷಾಗೆ ಈ ಆಟೋ ಸೈಡ್​ ಹೊಡೆಯುವಂತೆ ಕಾಣುತ್ತಿದೆ ಎಂದು ತಂದೆ ಸುರೇಶ್​ ಸಂತಸ ವ್ಯಕ್ತಪಡಿಸಿದ್ದಾರೆ. ಈಗ, ಸುರೇಶ್ ಮಗಳು ಸ್ನೇಹಾ ಅಷ್ಟೇ ಅಲ್ಲ, ಅವರ ಪತ್ನಿ ಸರಿತಾ ಕೂಡ ತಮ್ಮ ಮಗಳನ್ನು ಯಾವುದೇ ಸಮಯದಲ್ಲಿ ಅಂಗಳದಲ್ಲಿ ನಿಂತಿರುವ ‘ಸ್ನೇಹಮೋಲ್’ ಆಟೋರಿಕ್ಷಾದಲ್ಲಿ ಜಾಯ್ ರೈಡ್​ಗೆ ಹೋಗಬಹುದು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.