ಶ್ರೀನಗರ: ಜಮ್ಮು-ಕಾಶ್ಮೀರದಲ್ಲಿ ಬದ್ಧವೈರಿ ಹಾಗೂ ಶತ್ರುಪಕ್ಷಗಳಾಗಿದ್ದ ಮೆಹಬೂಬಾ ಮುಫ್ತಿ(ಪಿಡಿಪಿ) ಹಾಗೂ ಫಾರೂಕ್ ಅಬ್ದುಲ್ಲಾ( ಎನ್ಸಿಪಿ) ಇದೀಗ ಮೈತ್ರಿಕೂಟ ಘೋಷಣೆ ಮಾಡಿವೆ. ಕಣಿವೆ ನಾಡಿನಲ್ಲಿ ಆರ್ಟಿಕಲ್ 370 ವಿಧಿ ಪುನಃಸ್ಥಾಪನೆ ಮಾಡುವ ಉದ್ದೇಶದಿಂದ ಈ ನಿರ್ಧಾರ ಕೈಗೊಂಡಿದ್ದಾಗಿ ಹೇಳಿವೆ.
ಫಾರೂಕ್ ಅಬ್ದುಲ್ಲಾ ನಿವಾಸದಲ್ಲಿ ಇಂದು ಸರ್ವ ಪಕ್ಷ ಸಭೆ ನಡೆಸಲಾಯಿತು. ಈ ವೇಳೆ ಫಿಪಲ್ಸ್ ಡೆಮಾಕ್ರಟಿಕ್ ಪಕ್ಷದ ಮೆಹಬೂಬಾ ಮುಫ್ತಿ, ನ್ಯಾಷನಲ್ ಕಾನ್ಫರೆನ್ಸ್ನ ಫಾರೂಕ್ ಅಬ್ದುಲ್ಲಾ ಹಾಗೂ ಒಮರ್ ಅಬ್ದುಲ್ಲಾ ಭಾಗಿಯಾಗಿದ್ದರು. ಮೈತ್ರಿಗೆ ಗುಪ್ಕರ್ ಡಿಕ್ಲೇರೇಷನ್(ನಾಗರಿಕ) ಎಂದು ಹೆಸರಿಡಲಾಗಿದೆ.
ವಿಶೇಷವೆಂದರೆ ಸರ್ವ ಪಕ್ಷ ಸಭೆ ವೇಳೆ ಕಣಿವೆ ರಾಜ್ಯದ ವಿವಿಧ ರಾಜಕೀಯ ಪಕ್ಷಗಳಾದ ಸಜ್ಜದ್ ಲೋನ್ ಸೇರಿ ಅನೇಕ ಸ್ಥಳೀಯ ಪಕ್ಷ ಭಾಗಿಯಾಗಿದ್ದವು. ಈ ವೇಳೆ, ಮಾತನಾಡಿರುವ ಫಾರೂಕ್ ಅಬ್ದುಲ್ಲಾ ರಾಜ್ಯದಲ್ಲಿ ಮತ್ತೊಮ್ಮೆ ಆರ್ಟಿಕಲ್ 370 ಪುನಃ ಸ್ಥಾಪನೆ ಮಾಡುವುದೇ ನಮ್ಮ ಉದ್ದೇಶವಾಗಿದೆ ಎಂದಿದ್ದಾರೆ.
ಕಳೆದ ಒಂದು ವರ್ಷದಿಂದ ಗೃಹ ಬಂಧನದಲ್ಲಿದ್ದ ಮೆಹಬೂಬಾ ಮುಫ್ತಿ ಮೊನ್ನೆ ರಿಲೀಸ್ ಆಗಿದ್ದು, ಅದು ಫಾರೂಕ್ ಅಬ್ದುಲ್ಲಾ ಹಾಗೂ ಒಮರ್ ಅಬ್ದುಲ್ಲಾ ಅವರನ್ನ ಭೇಟಿ ಮಾಡಿದ್ದರು. ಇದರ ಬೆನ್ನಲ್ಲೇ ಇಂದು ಈ ಮೈತ್ರಿ ಘೋಷಣೆ ಮಾಡಿದ್ದಾರೆ.