ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರ ಇತ್ತೀಚಿನ ಮನವಿ ಬಳಿಕ ನಲವತ್ತು ರೈತ ಸಂಘಟನೆಯ ಒಕ್ಕೂಟಗಳು ಇಂದು ಮಧ್ಯಾಹ್ನ 2 ಗಂಟೆಗೆ ಸಭೆ ನಡೆಸಿ, ತಮ್ಮ ಮುಂದಿನ ನಡೆಯ ಬಗ್ಗೆ ಚರ್ಚಿಸಲಿದ್ದಾರೆ.
ಹೊಸ ಕೃಷಿ ಕಾನೂನುಗಳ ಬಗ್ಗೆ ಅವ್ಯವಸ್ಥೆ ಮುಂದುವರಿದಿರುವುದರಿಂದ ಕೇಂದ್ರದೊಂದಿಗೆ ಮಾತುಕತೆ ನಡೆಸಲು ನಿರ್ಧಾರ ತೆಗೆದುಕೊಳ್ಳಲಿದೆ. ನವೆಂಬರ್ ಅಂತ್ಯದಲ್ಲಿ ದೆಹಲಿ ಗಡಿಗಳ ಸಮೀಪ ಪ್ರಾರಂಭವಾದ ಹೋರಾಟ 31ನೇ ದಿನಕ್ಕೆ ಕಾಲಿಟ್ಟಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿಭಟನೆ ಆರಂಭವಾದ ದಿನದಿಂದ ಪ್ರತಿಪಕ್ಷಗಳ ಮೇಲೆ ಪ್ರಬಲ ದಾಳಿ ನಡೆಸಿದರು. ನಿನ್ನೆ ಪಿಎಂ ಕಿಸಾನ್ ನಗದು ವರ್ಗಾವಣೆ ಯೋಜನೆಯಡಿ 18 ಸಾವಿರ ಕೋಟಿ ರೂ. ಸಹಾಯಧನ ಬಿಡುಗೆ ಮಾಡಿ 'ರೈತರ ಭೂಮಿಯನ್ನು ಕಸಿದುಕೊಳ್ಳಲು ಆಗುವುದಿಲ್ಲ. ಕೆಲವು ಜನರು ಈ ಬಗ್ಗೆ ಸುಳ್ಳು ಪ್ರಚಾರ ಮಾಡುತ್ತಿದ್ದಾರೆ.
ಮಾತುಕತೆಗೆ ಬರುವಂತೆ 'ಪ್ರಧಾನಿ ಮನವಿ ಮಾಡಿದ್ದರು. ಈ ನಂತರ ರೈತ ಪ್ರತಿನಿಧಿಗಳು ಹೊಸ ಚರ್ಚೆ ಪ್ರಾರಂಭಿಸಿದ್ದಾರೆ. ಪ್ರತಿಭಟನಾಕಾರರು ಮತ್ತು ಸರ್ಕಾರದ ನಡುವೆ ಕಳೆದ ಕೆಲವು ತಿಂಗಳಲ್ಲಿ ಐದು ಸುತ್ತಿನ ಮಾತುಕತೆ ನಡೆದಿದ್ದರೂ ವಿಫಲವಾಗಿದೆ. ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಹಾಗೂ ಗೃಹ ಸಚಿವ ಅಮಿತ್ ಶಾ ಕೂಡ ರೈತ ಮುಖಂಡರ ಜತೆ ಸಭೆ ನಡೆಸಿದ್ದರು.
ಇದನ್ನೂ ಓದು: ಸಾವಿನಲ್ಲೂ ಸಾರ್ಥಕತೆ: ಉಸಿರು ನಿಂತ ಮೇಲೂ ನಾಲ್ವರ ಪ್ರಾಣ ಉಳಿಸಿದ ನಾರಿ
ಹೊಸ ಕಾನೂನುಗಳನ್ನು ಒಂದು ವರ್ಷ ಅಥವಾ ಅದಕ್ಕಿಂತ ಹೆಚ್ಚು ಕಾಲ ಜಾರಿಯಲ್ಲಿ ಇರಲಿ. ರೈತರಿಗೆ ಪ್ರಯೋಜನಕಾರಿ ಎಂದು ಕಂಡು ಬಂದಲ್ಲಿ ಅವುಗಳನ್ನು ತಿದ್ದುಪಡಿ ಮಾಡಲು ಸರ್ಕಾರ ಸಿದ್ಧವಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಶುಕ್ರವಾರ ರೈತರಿಗೆ ಮನವರಿಕೆ ಮಾಡಿದರು.
ಗುರುವಾರ 40 ರೈತ ಸಂಘಟನೆಗಳ ಪ್ರತಿನಿಧಿಗಳ ನಾಯಕರು, ಸರ್ಕಾರವು ನಮ್ಮ ಬೇಡಿಕೆಗಳ ಬಗ್ಗೆ ಗಂಭೀರವಾಗಿಲ್ಲ. ಹೊಸ ಸಂವಾದದ ಕಾರ್ಯಸೂಚಿಯಲ್ಲಿನ ಕಾನೂನುಗಳನ್ನು ಸರ್ಕಾರ ರದ್ದುಪಡಿಸಬೇಕು ಎಂದು ಹಿರಿಯ ರೈತ ಮುಖಂಡರಾದ ಶಿವಕುಮಾರ್ ಕಕ್ಕಾ ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿದ್ದರು ಎಂದು ಉಲ್ಲೇಖಿಸಲಾಗಿದೆ. ಪಂಜಾಬ್, ದೆಹಲಿ, ಕೇರಳ ಮತ್ತು ಪಶ್ಚಿಮ ಬಂಗಾಳದ ಮುಖ್ಯಮಂತ್ರಿಗಳು ಸಹ ಹೊಸ ಕಾನೂನುಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.