ರಾಯ್ಪುರ(ಛತ್ತೀಸ್ಘಡ): ಲೋಕಸಭೆಯಲ್ಲಿ ಹೊಸ ಕೃಷಿ ಸುಧಾರಣಾ ಮಸೂದೆಗಳು ಅಂಗೀಕಾರಗೊಂಡಿದ್ದು, ಕೆಲವೇ ದಿನಗಳಲ್ಲಿ ದೇಶಾದ್ಯಂತ ರೈತರು ಬೀದಿಗಿಳಿದು ಪ್ರತಿಭಟನೆ ನಡೆಸಲಿದ್ದಾರೆ ಎಂದು ಮುಖ್ಯಮಂತ್ರಿ ಭೂಪೇಶ್ ಬಾಗೆಲ್ ಹೇಳಿದ್ದಾರೆ.
ಕೃಷಿ ಮಸೂದೆಗಳ ಕುರಿತು ಪ್ರತಿಕ್ರಿಯಿಸಿ, ಪ್ರಸ್ತುತ ಪಂಜಾಬ್ ಮತ್ತು ಹರಿಯಾಣದ ರೈತರು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಶೀಘ್ರದಲ್ಲೇ ದೇಶದಾದ್ಯಂತ ಎಲ್ಲಾ ರೈತರು ಬೀದಿಗಿಳಿದು ಪ್ರತಿಭಟನೆ ನಡೆಸಿ ತಮ್ಮ ಆಕ್ರೋಶ ವ್ಯಕ್ತಪಡಿಸಲಿದ್ದಾರೆ ಎಂದರು.
ಈ ಮಸೂದೆಗಳ ಅನುಷ್ಠಾನದ ಮೂಲಕ ಕೇಂದ್ರ ಸರ್ಕಾರ ಖಾಸಗಿ ಮಾರುಕಟ್ಟೆಗಳು ಮುಂದೆ ಬರಲು ಪ್ರೋತ್ಸಾಹಿಸುತ್ತಿದೆ. ಆದ್ರೆ ಇದು ರೈತ ವರ್ಗಕ್ಕೆ ಮಾರಕವಾಗಿದೆ ಎಂದು ಅರೋಪಿಸಿದ್ದಾರೆ.