ETV Bharat / bharat

ಡಿ.29ಕ್ಕೆ ಮತ್ತೊಂದು ಸುತ್ತಿನ ಮಾತುಕತೆಗೆ ರೈತ ಸಂಘಟನೆ ಒಪ್ಪಿಗೆ.. ಆದರೆ, ಪಟ್ಟುಬಿಟ್ಟಿಲ್ಲ..

ರಾಷ್ಟ್ರೀಯ ರೈತ ಆಯೋಗವು ಶಿಫಾರಸು ಮಾಡಿದ ಎಂಎಸ್‌ಪಿಯನ್ನು ಎಲ್ಲಾ ರೈತರು ಮತ್ತು ಎಲ್ಲಾ ಕೃಷಿ ಸರಕುಗಳಿಗೆ ಕಾನೂನು ಬದ್ಧವಾಗಿ ಖಾತರಿಪಡಿಸುವ ಯಾಂತ್ರಿಕ ವ್ಯವಸ್ಥೆಗಳನ್ನು ಅಳವಡಿಸಿಕೊಳ್ಳಬೇಕು ಎಂದು ಪತ್ರದಲ್ಲಿ ಹೇಳಲಾಗಿದೆ..

Farmer unions ask centre to resume talks
ಮತ್ತೊಂದು ಸುತ್ತಿನ ಮಾತುಕತೆಗೆ ರೈತ ಸಂಘಟನೆ ಒಪ್ಪಿಗೆ
author img

By

Published : Dec 27, 2020, 8:23 AM IST

ನವದೆಹಲಿ : ಕೇಂದ್ರ ಸರ್ಕಾರದ ಪತ್ರಕ್ಕೆ ಉತ್ತರಿಸಿರುವ ಸಂಯುಕ್ತ ಕಿಸಾನ್ ಮೋರ್ಚಾ, ಕೃಷಿ ಮತ್ತು ರೈತ ಕಲ್ಯಾಣ ಸಚಿವಾಲಯಕ್ಕೆ ಪತ್ರ ಬರೆದಿದೆ. ಪತ್ರದಲ್ಲಿ ಕೃಷಿ ಕಾನೂನುಗಳಿಗೆ ಸಂಬಂಧಿಸಿದಂತೆ ಡಿಸೆಂಬರ್ 29ರಂದು ಮತ್ತೊಂದು ಸುತ್ತಿನ ಚರ್ಚೆ ನಡೆಸಲು ದಿನಾಂಕ ನಿಗದಿ ಪಡೆಸುವಂತೆ ಪ್ರಸ್ತಾಪಿಸಿದೆ.

ರೈತ ಸಂಘಗಳು ನಾಲ್ಕು ಅಂಶಗಳ ಕಾರ್ಯಸೂಚಿಯನ್ನು ಮುಂದಿಟ್ಟಿವೆ. ರೈತರ ಆಂದೋಲನವನ್ನು ಕೆಣಕಲು ಮತ್ತು ಅಪಚಾರ ಮಾಡಲು ಆಡಳಿತವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದು, ಈಗಾಗಲೇ ಈ ಕೃತ್ಯ ನಿಲ್ಲಿಸಬೇಕು ಎಂದಿದೆ.

ನಾಲ್ಕು ಅಂಶಗಳ ಕಾರ್ಯಸೂಚಿಯ ಭಾಗವಾಗಿ, ಮೂರು ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವ ವಿಧಾನಗಳನ್ನು ಅಳವಡಿಸಿಕೊಳ್ಳಲು ಮತ್ತು ರೈತರ ಹಿತಾಸಕ್ತಿಗಳನ್ನು ಕಾಪಾಡುವ ಸಲುವಾಗಿ ಪ್ರಸಕ್ತ ತಿದ್ದುಪಡಿ ಮಸೂದೆ 2020ರಲ್ಲಿ ಬದಲಾವಣೆಗಳನ್ನು ಮಾಡುವಂತೆ ಸರ್ಕಾರವನ್ನು ಕೇಳಿದೆ.

"ರಾಷ್ಟ್ರೀಯ ರೈತ ಆಯೋಗವು ಶಿಫಾರಸು ಮಾಡಿದ ಎಂಎಸ್‌ಪಿಯನ್ನು ಎಲ್ಲಾ ರೈತರು ಮತ್ತು ಎಲ್ಲಾ ಕೃಷಿ ಸರಕುಗಳಿಗೆ ಕಾನೂನು ಬದ್ಧವಾಗಿ ಖಾತರಿಪಡಿಸುವ ಯಾಂತ್ರಿಕ ವ್ಯವಸ್ಥೆಗಳನ್ನು ಅಳವಡಿಸಿಕೊಳ್ಳಬೇಕು ಎಂದು ಪತ್ರದಲ್ಲಿ ಹೇಳಲಾಗಿದೆ.

ಡಿಸೆಂಬರ್ 24ರಂದು ಚರ್ಚೆಗೆ ಆಗಮಿಸುವಂತೆ ಕೇಂದ್ರ ಸರ್ಕಾರ ರೈತ ಮುಖಂಡರಿಗೆ ಪತ್ರ ಬರೆದಿತ್ತು. ಇದಕ್ಕೆ ಉತ್ತರವಾಗಿ ಮಾತುಕತೆಗೆ ಸಿದ್ದವಿರುವುದಾಗಿ ರೈತ ನಾಯಯಕರು ಕೇಂದ್ರಕ್ಕೆ ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.