ಚಂಡೀಗಡ (ಹರಿಯಾಣ): ಜನವರಿ 4ರಂದು ಕೇಂದ್ರ ಸರ್ಕಾರದೊಂದಿಗೆ ಆಯೋಜನೆಗೊಂಡಿರುವ ಮಹತ್ವದ ಮಾತುಕತೆಯಲ್ಲಿ ರೈತರ ಪರ ನಿಲುವು ತೆಗೆದುಕೊಳ್ಳಲು ಸರ್ಕಾರ ವಿಫಲವಾದರೆ ಶಾಪಿಂಗ್ ಮಾಲ್, ಪೆಟ್ರೋಲ್ ಪಂಪ್ ಬಂದ್ ಮಾಡಲಾಗುವುದು ಎಂದು ರೈತ ಸಂಘಟನೆಗಳು ಎಚ್ಚರಿಸಿವೆ.
ಓದಿ: ಧ್ವಂಸಗೊಂಡ ಹಿಂದೂ ದೇಗುಲವನ್ನು ಕಟ್ಟಿ ಕೊಡುತ್ತೇವೆ: ಪಾಕಿಸ್ತಾನ ಭರವಸೆ
ಐದನೇ ಸುತ್ತಿನ ಮಾತುಕತೆಗೆ ಈಗಾಗಲೇ ಕೇಂದ್ರ ಸರ್ಕಾರ ರೈತ ಸಂಘಟನೆಗಳಿಗೆ ಆಹ್ವಾನ ನೀಡಿದೆ. ಜನವರಿ 4ರಂದು ಈ ಸಭೆ ನಡೆಯಲಿದೆ. ಅಂದಿನ ಸಭೆ ವಿಫಲಗೊಂಡರೆ ನಮ್ಮ ಪ್ರತಿಭಟನೆ ಮತ್ತಷ್ಟು ಉಗ್ರ ಸ್ವರೂಪ ಪಡೆದುಕೊಳ್ಳಲಿದೆ ಎಂದು ರೈತ ಮುಖಂಡ ವಿಕಾಸ್ ತಿಳಿಸಿದರು.
ಹರಿಯಾಣ-ರಾಜಸ್ಥಾನ ಗಡಿಯಲ್ಲಿ ರೈತರು ಕಳೆದ 30 ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ.