ETV Bharat / bharat

ರಕ್ಕಸ ಫಣಿ ಎಫೆಕ್ಟ್​​: ಒಡಿಶಾದಲ್ಲಿ ಏರುತ್ತಲೇ ಇದೆ ಸಾವಿನ ಸಂಖ್ಯೆ!

ಒಡಿಶಾ ಕಡಲ ತೀರಕ್ಕೆ 'ಫಣಿ' ಚಂಡಮಾರುತ ಅಪ್ಪಳಿಸಿ ಅಲ್ಲೋಕಲ್ಲೋಲ ಸೃಷ್ಟಿಸಿದ್ದು ಗೊತ್ತಿದೆ. ಈ ರಕ್ಕಸ ಪ್ರಾಕೃತಿಕ ವಿಕೋಪಕ್ಕೆ ಅಲ್ಲಿನ ಜನತೆ ಅಕ್ಷರಶಃ ತತ್ತರಿಸಿದ್ದಾರೆ. ಪುರಿ, ಕಟಕ್​ ಸೇರಿದಂತೆ ವಿವಿಧೆಡೆ ಒಟ್ಟು 64 ಮಂದಿ ಸಾವನ್ನಪ್ಪಿದ್ದಾರೆ.

author img

By

Published : May 13, 2019, 8:25 AM IST

ಒಡಿಶಾದಲ್ಲಿ 64 ಬಲಿ ಪಡೆದ ರಕ್ಕಸ ಫಣಿ ಚಂಡಮಾರುತ

ಭುವನೇಶ್ವರ್​(ಒಡಿಶಾ): ರಾಜ್ಯದಲ್ಲಿ ಫಣಿ ಚಂಡಮಾರುತದ ಆರ್ಭಟ ಜೋರಾಗಿದೆ. ಭೀಕರ ಚಂಡಮಾರುತವು ಒಡಿಶಾದಲ್ಲಿ ಒಟ್ಟು 64 ಜನರನ್ನು ಬಲಿ ತೆಗೆದುಕೊಂಡಿದೆ.

ಫಣಿ ತನ್ನ ರೌದ್ರಾವತಾರ ತೋರಿಸಿ ಒಡಿಶಾದಲ್ಲಿ ಅಲ್ಲೋಕಲ್ಲೋಲ ಸೃಷ್ಟಿಸಿತ್ತು. ಫಣಿ ಪರಿಣಾಮ ಲಕ್ಷಾಂತರ ಪ್ರಾಣಿ ಪಕ್ಷಿಗಳು ಸಾವನ್ನಪ್ಪಿದ್ದವು. ಅದರಂತೆ ಜನಜೀವನ ಅಸ್ತವ್ಯಸ್ತವಾಗಿದೆ. ಫಣಿ ನಂತರವೂ ಅದರ ಪರಿಣಾಮದಿಂದಾಗಿ ಸಾವಿನ ಸಂಖ್ಯೆ ಏರುತ್ತಲೇ ಇದೆ. ಅಂತೆಯೇ ಪುರಿಯಲ್ಲಿ 39, ಕೇಂದ್ರಪುರಲ್ಲಿ 3, ಮಯಾರ್ಭಂಜ್​ನಲ್ಲಿ 4, ರಾಜ್​ಪುರ್​ದಲ್ಲಿ 3, ಕಟಕ್​ನಲ್ಲಿ 6, ಖೋರ್ಧಾದಲ್ಲಿ 9 ಜನರನ್ನು ಫಣಿ ಬಲಿ ಪಡೆದಿದೆ. ಈವರೆಗೆ ಒಟ್ಟು 64 ಜನರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

Intro:Body:

fani cyclone

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.