ಸಿಮ್ನಾ(ತ್ರಿಪುರ): ಗಂಡ ಹೆಂಡತಿ ಸೇರಿದಂತೆ ಇಬ್ಬರು ಮಕ್ಕಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸಿಮ್ನಾ ನಗರದ ಸೊನಾಯಿ ಬೈರಾಗಿ ಸಾದು ಪರಾ ಪ್ರದೇಶದಲ್ಲಿ ನಡೆದಿದೆ.
ಪರೇಶ್ ತಂತಿ, ಆತನ ಹೆಂಡತಿ ಸಂಧಾ ತಂತಿ ಹಾಗೂ ಇಬ್ಬರು ಮಕ್ಕಳಾದ ಬಿಶಾಲ್ ಮತ್ತು ರೂಪಾಲಿ ಮೃತ ದುರ್ದೈವಿಗಳು. ಮಕ್ಕಳಿಬ್ಬರು ಮನೆಯಲ್ಲಿಯೇ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದ್ದು, ಗಂಡ ಹೆಂಡತಿ ಇಬ್ಬರು ಮನೆ ಬಳಿ ಇರುವ ಮರವೊಂದಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಜಮೀನಿನ ವಿಚಾರವಾಗಿ ಸತಿ ಪತಿಯರ ನಡುವೆ ಹಲವಾರು ಬಾರಿ ಕಲಹ ಉಂಟಾಗಿದ್ದು, ಈ ಕಲಹದಿಂದಾಗಿಯೇ ದಂಪತಿ ಹಾಗೂ ಮಕ್ಕಳು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಸಂಬಂಧಿಕರು ತಿಳಿಸಿದ್ದಾರೆ.
ಇನ್ನು ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದು, ಮೃತ ದೇಹಗಳನ್ನ ಮರೋಣತ್ತರ ಪರೀಕ್ಷೆಗೆ ಕಳುಹಿಸಿದ್ದು, ತನಿಖೆ ಮುಂದುವರೆಸಿದ್ದಾರೆ.