ತಿರುವನಂತಪುರಂ(ಕೇರಳ): ಮೂರು ತಿಂಗಳ ಹಿಂದೆ ಉತ್ತರ ಪ್ರದೇಶ ಪೊಲೀಸರು ಬಂಧಿಸಿರುವ ಕೇರಳ ಪತ್ರಕರ್ತ ಸಿದ್ದೀಕ್ ಕಪ್ಪನ್ ಅವರನ್ನು ಆರೋಪ ಮುಕ್ತಗೊಳಿಸುವಲ್ಲಿ ಸಿಎಂ ಮಧ್ಯಪ್ರವೇಶ ಮಾಡಬೇಕೆಂದು ಸಿದ್ದೀಕ್ ಕುಟುಂಬಸ್ಥರು ಸಚಿವಾಲಯದ ಮುಂದೆ ಧರಣಿ ನಡೆಸಿದ್ದಾರೆ.
'ಅವರು ಬಂಧನಕ್ಕೊಳಗಾದಾಗ ಅವರಿಗೆ ಚಿತ್ರಹಿಂಸೆ ನೀಡಿದರು. ಅವರು ಕೇರಳಿಗರು ಎಂದು ತಿಳಿದು ಮತ್ತಷ್ಟು ಹಿಂಸೆ ನೀಡಿದರು. ಈ ವಿಷಯದಲ್ಲಿ ಸಿಎಂ ಅವರ ಮಧ್ಯಸ್ಥಿಕೆ ಕೋರಿ ನಾವು ಪತ್ರ ಬರೆದಿದ್ದೇವೆ. ಆದರೆ, ಅದು ಹೊರ ರಾಜ್ಯದ ವಿಷಯವಾದ ಕಾರಣ ಸರ್ಕಾರ ಹಸ್ತಕ್ಷೇಪ ಮಾಡಲು ಸಾಧ್ಯವಿಲ್ಲ ಎಂದು ನಮಗೆ ಉತ್ತರ ಸಿಕ್ಕಿತು', ಎಂದು ಕಪ್ಪನ್ ಅವರ ಪತ್ನಿ ರೇಹೇನತ್ ತಮ್ಮ ಅಳಲು ತೋಡಿಕೊಂಡಿದ್ದಾರೆ.
ಇದನ್ನೂ ಓದಿ: ಕೇರಳ ವಲಯರ್ ಪ್ರಕರಣ ಸಿಬಿಐಗೆ ಹಸ್ತಾಂತರಿಸಲು ಸರ್ಕಾರ ನಿರ್ಧಾರ
ಕೇರಳ ಯೂನಿಯನ್ ಆಫ್ ವರ್ಕಿಂಗ್ ಜರ್ನಲಿಸ್ಟ್ಸ್ (ಕೆಯುಡಬ್ಲ್ಯುಜೆ) ದೆಹಲಿ ಘಟಕದ ಕಾರ್ಯದರ್ಶಿ ಕಪ್ಪನ್ ಮತ್ತು ಇತರ ಮೂವರು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಕಾರ್ಯಕರ್ತರನ್ನು ಕಳೆದ ವರ್ಷ ಅಕ್ಟೋಬರ್ 5 ರಂದು ಮಥುರಾದಲ್ಲಿ ದೇಶದ್ರೋಹ ಹಾಗೂ ಇತರ ಗಂಭೀರ ಆರೋಪಗಳ ಮೇಲೆ ಯುಪಿ ಪೊಲೀಸರು ದೂರು ದಾಖಲಿಸಿದ್ದರು. ಹತ್ರಾಸ್‌ಗೆ ತೆರಳುತ್ತಿದ್ದ 19 ವರ್ಷದ ದಲಿತ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ವರದಿ ಮಾಡಲು ತೆರಳಿದ್ದ ಇವರ ಕಾನೂನು ಬಾಹಿರ ಚಟುವಟಿಕೆಗಳ ಆರೋಪದ ಮೇಲೆ ಬಂಧನ ಮಾಡಲಾಗಿತ್ತು.