ETV Bharat / bharat

ಕೆಲಸ ಸಿಗದೆ, 5 ದಿನದಿಂದಲೂ ಅನ್ನವಿಲ್ಲದೆ ಹಸಿದು ನೇಣಿಗೆ ಕೊರಳೊಡ್ಡಿದ ವ್ಯಕ್ತಿ..

ಧೋಲಾನ ಪೊಲೀಸ್​ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಕಸ್ಗನಿಯ ಮಹೇಶ್ಪುರ್​ ರಸ್ತೆಯ ಪ್ರದೇಶದಲ್ಲಿ ಪೂರ್ಣಸಿಂಗ್​ (41) ವಾಸಿಸುತ್ತಿದ್ದು, ಗ್ರಾಮದ ಸಮೀಪದ ಕಿರು ಅರಣ್ಯ ಪ್ರದೇಶದಲ್ಲಿನ ಮರ ಒಂದಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಾಂದರ್ಭಿಕ ಚಿತ್ರ
author img

By

Published : Sep 1, 2019, 8:36 PM IST

ಕಸ್ಗನಿ (ಉತ್ತರ ಪ್ರದೇಶ): ಉತ್ತರಪ್ರದೇಶದ ವ್ಯಕ್ತಿಯೋರ್ವ ಐದು ದಿನಗಳಿಂದ ತಿನ್ನಲು ಆಹಾರ ಸಿಗದೆ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

ಧೋಲಾನ ಪೊಲೀಸ್​ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಕಸ್ಗನಿಯ ಮಹೇಶ್ಪುರ್​ ರಸ್ತೆಯ ಪ್ರದೇಶದಲ್ಲಿ ಪೂರ್ಣ ಸಿಂಗ್​ (41) ವಾಸಿಸುತ್ತಿದ್ದು, ಗ್ರಾಮದ ಸಮೀಪದ ಕಿರು ಅರಣ್ಯ ಪ್ರದೇಶದಲ್ಲಿನ ಮರ ಒಂದಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೃತ ವ್ಯಕ್ತಿಯು ನಿರುದ್ಯೋಗಿಯಾಗಿದ್ದು, ತನ್ನ ಹೆಂಡತಿ ಮತ್ತು ಮೂವರು ಮಕ್ಕಳನ್ನು ಸಾಕಲು ಕಷ್ಟಕರವಾಗಿತ್ತು. ಹಸಿದ ಹೊಟ್ಟೆ ತುಂಬಿಸಿಕೊಳ್ಳಲು ನೆರೆಹೊರೆಯವರನ್ನು ಆಹಾರಕ್ಕಾಗಿ ಆಗಾಗ ಬೇಡಿಕೊಳ್ಳುತ್ತಿದ್ದ. ತನ್ನ ಕುಟುಂಬವನ್ನು ಸಂಕಷ್ಟಕ್ಕೆ ನೂಕಿದ ಪಶ್ಚಾತಾಪಕ್ಕಾಗಿ ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಸ್ಥಳೀಯರು ಹೇಳಿದ್ದಾರೆ.

ನನ್ನ ತಂದೆ ಉದ್ಯೋಗ ಹುಡುಕಿಕೊಂಡು ದೆಹಲಿಗೆ ಹೋಗಿದ್ದರು. ಆದರೆ, ಅಲ್ಲಿ ಯಾವುದೇ ಉದ್ಯೋಗ ಸಿಗಲಿಲ್ಲ. ಶುಕ್ರವಾರ ಮನೆಗೆ ಮರಳಿ ಸ್ನಾನ ಮಾಡಿ ಬರುವುದಾಗಿ ಹೊರಗೆ ಹೋದವರು ಮತ್ತೆ ಬರಲಿಲ್ಲ. ಮರುದಿನ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದರು ಎಂದು ಹೇಳುತ್ತಾ ಒಂಬತ್ತು ವರ್ಷದ ಮಗಳು ಕಣ್ಣೀರು ಹಾಕಿದಳು.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.