ETV Bharat / bharat

87 ಕೋಟಿ ರೂಪಾಯಿ ''ಮೌಲ್ಯ''ದ ನಕಲಿ ನೋಟುಗಳು ವಶಕ್ಕೆ: ಯೋಧ ಸೇರಿ ಆರು ಮಂದಿ ಬಂಧನ - ನಕಲಿ ಡಾಲರ್​

ಕೋಟ್ಯಂತರ ರೂಪಾಯಿ ಮೌಲ್ಯದ ಅಮೆರಿಕದ ಡಾಲರ್ ಹಾಗೂ ಭಾರತದ ನಕಲಿ ಕರೆನ್ಸಿ ನೋಟುಗಳು ಪುಣೆಯ ವಿಮಾನ್​ ನಗರದ ಬಂಗಲೆಯಲ್ಲಿ ಪತ್ತೆಯಾಗಿವೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಯೋಧ ಸೇರಿದಂತೆ ಆರು ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

fake currency notes
ನಕಲಿ ನೋಟುಗಳು ಪತ್ತೆ
author img

By

Published : Jun 11, 2020, 1:18 PM IST

ಪುಣೆ(ಮಹಾರಾಷ್ಟ್ರ): 87 ಕೋಟಿ ರೂಪಾಯಿ ಮುಖಬೆಲೆಯ ಅಮೆರಿಕದ ಡಾಲರ್ ಹಾಗೂ ಭಾರತದ ನಕಲಿ ಕರೆನ್ಸಿ ನೋಟುಗಳು ಪುಣೆಯ ಬಂಗಲೆಯೊಂದರಲ್ಲಿ ಪತ್ತೆಯಾಗಿವೆ. ಈ ಸಂಬಂಧ ಓರ್ವ ಸೇನಾ ಸಿಬ್ಬಂದಿ ಸೇರಿ ಆರು ಮಂದಿಯನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ನಕಲಿ ನೋಟುಗಳು ಪತ್ತೆ

ಪುಣೆ ಪೊಲೀಸ್​ ಹಾಗೂ ಸೇನೆಯ ದಕ್ಷಿಣ ಕಮಾಂಡ್​ ಇಂಟಲಿಜೆನ್ಸ್​ ವಿಂಗ್​ ಜಂಟಿಯಾಗಿ ವಿಮಾನ್​​​ನಗರ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸಿದ್ದು ಜಾಲವನ್ನು ಭೇದಿಸಿದೆ. ಈ ನಕಲಿ ನೋಟುಗಳಲ್ಲಿ ಭಾರತೀಯ ಮಕ್ಕಳ ಬ್ಯಾಂಕ್​ನ ನಕಲಿ ಬಿಲ್​​ಗಳೂ ಕೂಡಾ ಪತ್ತೆಯಾಗಿವೆ. ನೋಟುಗಳ ಗುಣಮಟ್ಟವನ್ನು ಪರೀಕ್ಷಿಸಲಾಗಿದೆ ಎಂದು ಅಪರಾಧ ವಿಭಾಗದ ಉಪ ಪೊಲೀಸ್ ಆಯುಕ್ತ ಬಚ್ಚನ್​ ಸಿಂಗ್​ ಸ್ಪಷ್ಟಪಡಿಸಿದ್ದಾರೆ.

ಇದೇ ವೇಳೆ ಆರು ಮಂದಿಯನ್ನು ವಶಕ್ಕೆ ಪಡೆಯಲಾಗಿದ್ದು, ಇವರಲ್ಲಿ ಶೇಖ್​ ಅಲೀಂ ಗುಲಾಬ್​ ಖಾನ್​ ಎಂಬಾತ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾನೆ. ಇದರ ಜೊತೆಗೆ ಸುನಿಲ್​ ಸರ್ದಾ, ರಿತೇಶ್​ ರತ್ನಾಕರ್​, ತುಫೆಲ್​ ಅಹ್ಮದ್​ ಮೊಹಮದ್​ ಇಶಾಕ್​ ಖಾನ್​, ಅಬ್ದುಲ್​ ಘನಿ ಖಾನ್​ ಹಾಗೂ ಅಬ್ದುಲ್ ರೆಹಮಾನ್ ಅಬ್ದುಲ್ ಘನಿ ಖಾನ್ ಅನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.