ರೋಹ್ಟಕ್: ಕೊರೊನಾ ನಿಯಂತ್ರಿಸಲು ಸರ್ಕಾರ ಲಾಕ್ಡೌನ್ ಹೇರಿದ್ದರಿಂದ ಸಾಕಷ್ಟು ಜನರು ಉದ್ಯೋಗವನ್ನು ಕಳೆದುಕೊಂಡು, ಜೀವನ ನಿರ್ವಹಣೆಗಾಗಿ ಅನ್ಯ ಮಾರ್ಗಗಳನ್ನು ಹುಡುಕಿಕೊಳ್ಳುತ್ತಿದ್ದಾರೆ.
ಅದರಂತೆ ಹರಿಯಾಣ ಮೂಲದ ವ್ಯಕ್ತಿ ರೋಹ್ಟಕ್ನಲ್ಲಿನ ಖಾಸಗಿ ಕಂಪೆನಿಯಲ್ಲಿ ಪ್ಲಾಂಟ್ ಮುಖ್ಯಸ್ಥನಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಆದರೆ ಕೊರೊನಾದಿಂದ ಇವರು ಕೆಲಸ ಕಳೆದುಕೊಂಡರು. ಇದೀಗ ಕುಟುಂಬ ನಿರ್ವಹಣೆಗಾಗಿ ಬೀದಿ ಬದಿ ತರಕಾರಿ ಮಾರಾಟ ಮಾಡಲು ಮುಂದಾಗಿದ್ದಾರೆ.
ಖಾಸಗಿ ವಲಯವು ಸಂಕಷ್ಟದಲ್ಲಿದೆ. ನಮಗೆ ಬೇರೆ ಕೆಲಸಗಳ ಅವಕಾಶಗಳಿಲ್ಲ. ಕುಟುಂಬವನ್ನು ಸಾಗಿಸಲು ತರಕಾರಿ ಮಾರಾಟ ಮಾಡುತ್ತಿರುವುದಾಗಿ ಕೆಲಸ ಕಳೆದುಕೊಂಡ ನೌಕರ ರಿಂಕು ವಿವರಿಸಿದರು. ಜತೆಗೆ ಕೆಲಸ ಕಳದುಕೊಂಡಿರುವ ನನ್ನ ಅನೇಕ ಸ್ನೇಹಿತರು ಇದೇ ಕೆಲಸ ಮಾಡುತ್ತಿರುವುದಾಗಿ ತಿಳಿಸಿದ್ದಾರೆ. ಕೊರೊನಾದಿಂದ ಲಾಕ್ಡೌನ್ ಆರಂಭವಾದಗಿನಿಂದ ಗಣನೀಯ ಸಂಖ್ಯೆಯ ವ್ಯವಹಾರಗಳು ನೆಲಕಚ್ಚಿವೆ. ಇದರಿಂದ ಅನೇಕ ಕಂಪೆನಿಯ ಮಾಲೀಕರು ನಷ್ಟ ಅನುಭವಿಸುತ್ತಿದ್ದಾರೆ.