ETV Bharat / bharat

10 ಲಕ್ಷ ರೂ. ಲೂಟಿ ಮಾಡಿ ಕಾರು ಸಹಿತ ಉದ್ಯಮಿಗೆ ಬೆಂಕಿ ಹಚ್ಚಿ ಕೊಲೆ

ಉದ್ಯಮಿಯೊಬ್ಬರು ಹಣ ತೆಗೆದುಕೊಂಡು ಮನೆಗೆ ಹೋಗುತ್ತಿರುವಾಗ ಬೈಕ್​ ಮತ್ತು ಕಾರಿನಲ್ಲಿ ಹಿಂಬಾಲಿಸಿದ ದುಷ್ಕರ್ಮಿಗಳು, ಹಣ ಲೂಟಿ ಮಾಡಿ ಕಾರು ಸಹಿತ ಉದ್ಯಮಿಗೆ ಬೆಂಕಿ ಹಚ್ಚಿ ಕೊಲೆ ಮಾಡಿದ್ದಾರೆ.

Factory owner robbed of nearly Rs 11 lakhs
ಕಾರು ಸಹಿತ ಉದ್ಯಮಿಗೆ ಬೆಂಕಿ ಹಚ್ಚಿ ಕೊಲೆ
author img

By

Published : Oct 8, 2020, 9:54 AM IST

ಹಿಸಾರ್ (ಹರಿಯಾಣ): ಉದ್ಯಮಿಯೊಬ್ಬರಿಂದ 10.90 ಲಕ್ಷ ರೂಪಾಯಿಗಳನ್ನು ದೋಚಿದ ದರೋಡೆ ಕೋರರು, ಕಾರು ಸಹಿತ ಉದ್ಯಮಿಗೆ ಬೆಂಕಿ ಹಚ್ಚಿ ಕೊಂದಿದ್ದಾರೆ.

ರಾಮ್ ಮೆಹರ್ ದತ್ತಾ ಎಂಬುವವರು ಹಿಸಾರ್ ಜಿಲ್ಲೆಯ ಬಾರ್ವಾಲಾ ಪಟ್ಟಣದಲ್ಲಿ ಕಾರ್ಖಾನೆ ನಡೆಸುತ್ತಿದ್ದರು. ಇದೇ ಜಿಲ್ಲೆಯ ಭಟ್ಲಾ ಬಳಿ ಈ ಘಟನೆ ನಡೆದಿದೆ.

ಮಂಗಳವಾರ ಮುಂಜಾನೆ 12:05 ಕ್ಕೆ ನಮಗೆ ಕರೆ ಮಾಡಿದ ಮಾಜಿ ಸರ್ಪಂಚ್ ಜೈವೀರ್, ನನ್ನ ಚಿಕ್ಕಪ್ಪನ ಮಗ ರಾಮ್​ ಮೆಹರ್​ ಅವರನ್ನು ಇಬ್ಬರು ಬೈಕ್​ ಸವಾರರು ಮತ್ತು ಒಂದು ಕಾರಿನಲ್ಲಿ ದುಷ್ಕರ್ಮಿಗಳು ಹಿಂಬಾಲಿಸುತ್ತಿದ್ದಾರೆ. ಈ ವೇಳೆ 10.90 ಲಕ್ಷ ರೂ.ಗಳನ್ನು ಲೂಟಿ ಮಾಡಿ, ಕಾರು ಸಹಿತ ರಾಮ್​ ಮೆಹರ್​ನನ್ನು ಸುಟ್ಟು ಹಾಕಿದ್ದಾರೆ ಎಂದು ಮಾಹಿತಿ ನೀಡಿದ್ದಾಗಿ ಸದರ್ ಹನ್ಸಿ ಪೊಲೀಸ್ ಠಾಣೆ ಅಧಿಕಾರಿ ಕಾಶ್ಮೀರಿ ಲಾಲ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

'ನನ್ನ ಸಹೋದರ ವ್ಯಾಪಾರದ ಉದ್ದೇಶಗಳಿಗಾಗಿ ಹಣ ಬಿಡಿಸಿಕೊಂಡಿದ್ದು, ಕಾರ್ಖಾನೆಯಿಂದ ಮನೆಗೆ ಹಿಂತಿರುಗುತ್ತಿದ್ದ. ರಾತ್ರಿ ನಮಗೆ ಕರೆ ಮಾಡಿ ದುಷ್ಕರ್ಮಿಗಳು ನನ್ನನ್ನು ಹಿಂಬಾಲಿಸುತ್ತಿದ್ದಾರೆ ಎಂದು ಹೇಳಿದರು. ನಾವು ಅವರು ಹೇಳಿದ ಸ್ಥಳ ತಲುಪಿದಾಗ, ರಾಮ್‌ ಮೆಹರ್‌ ಮತ್ತು ಕಾರನ್ನು ಸುಡಲಾಗಿತ್ತು. ಮತ್ತು ಹಣವನ್ನು ಲೂಟಿ ಮಾಡಲಾಗಿತ್ತು' ಎಂದು ಮೃತ ಉದ್ಯಮಿ ಸಹೋದರ ಅಮಿತ್ ಹೇಳಿದ್ದಾರೆ.

ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಆರೋಪಿಗಳಿಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.