ETV Bharat / bharat

ಅಡುಗೆ ಮನೆಯಲ್ಲಿದೆ ನಿಮ್ಮ ಆರೋಗ್ಯ: ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಇಲ್ಲಿವೆ ಸುಲಭ ಉಪಾಯಗಳು - Nutrition Improves Immunity

ಯಾವುದೇ ಸಾಮಾನ್ಯ ಅಡುಗೆ ಮನೆಯಲ್ಲಿ ಕಂಡುಬರುವ ಕೆಲವು ಪದಾರ್ಥಗಳು ಮತ್ತು ಇತರ ಕೆಲವು ಪೌಷ್ಠಿಕಾಂಶಗಳನ್ನು ಸರಿಯಾದ ಕಾಳಜಿಯೊಂದಿಗೆ ತೆಗೆದುಕೊಂಡರೆ ವ್ಯಕ್ತಿಯ ರೋಗನಿರೋಧಕ ಶಕ್ತಿಯನ್ನು ಸುಧಾರಿಸಲು ಸಹಾಯ ಮಾಡುತ್ತದೆ ಎಂದು ಪೌಷ್ಠಿಕಾಂಶ ತಜ್ಞರಾದ ಸುಜಾತಾ ಸ್ಟೀಫನ್ ವಿವರಿಸುತ್ತಾರೆ.

ಅಡುಗೆಮನೆಯಲ್ಲಿದೆ ನಿಮ್ಮ ಆರೋಗ್ಯ
ಅಡುಗೆಮನೆಯಲ್ಲಿದೆ ನಿಮ್ಮ ಆರೋಗ್ಯ
author img

By

Published : Jul 10, 2020, 5:09 PM IST

ಹೈದರಾಬಾದ್: ನಗರ ಪ್ರದೇಶಗಳಲ್ಲಿ ಕೊರೊನಾ ಪ್ರಕರಣಗಳು ಉಲ್ಬಣಗೊಳ್ಳುತ್ತಿವೆ. ಒಂದು ಕುಟುಂಬದಲ್ಲಿ ಒಬ್ಬ ವ್ಯಕ್ತಿಯು ಸೋಂಕಿಗೆ ಗುರಿಯಾದರೆ, ಕುಟುಂಬದ ಉಳಿದವರು ಸಹ ವೈರಸ್​ಗೆ ತುತ್ತಾಗುವ ಸಾಧ್ಯತೆ ಹೆಚ್ಚಿದೆ. ಪ್ರತಿಯೊಬ್ಬರೂ ಕೋವಿಡ್​ ತಡೆಗಟ್ಟುವ ಕ್ರಮಗಳನ್ನು ತೆಗೆದುಕೊಳ್ಳಬೇಕು ಮತ್ತು ಸ್ವಯಂ ಕಾಳಜಿಯನ್ನು ತೆಗೆದುಕೊಳ್ಳಬೇಕು ಎಂದು ತಜ್ಞರು ಸಲಹೆ ನೀಡಿದ್ದಾರೆ.

ಅನೇಕ ಜನರು ತಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ವಿಟಮಿನ್ ಸಿ, ವಿಟಮಿನ್ ಡಿ-3 ಮತ್ತು ಝಿಂಕ್​ ಅನ್ನು ಹೆಚ್ಚಾಗಿ ಬಳಸುತ್ತಿದ್ದಾರೆ. ಇವುಗಳನ್ನು ನಿಯಮಿತವಾಗಿ ತೆಗೆದುಕೊಳ್ಳಬೇಕಾದರೆ, ಒಬ್ಬ ವ್ಯಕ್ತಿಗೆ ತಿಂಗಳಿಗೆ ಸುಮಾರು 600 - 650 ರೂ. ವ್ಯಯಿಸಬೇಕಾಗುತ್ತದೆ. ಈ ಔಷಧಿಗಳು ಪ್ರಸ್ತುತ ಔಷಧಾಲಯಗಳಲ್ಲಿ ಸುಲಭವಾಗಿ ಲಭ್ಯವಿಲ್ಲ, ಹೆಚ್ಚಿನ ಬೇಡಿಕೆಯಿಂದಾಗಿ ಈ ಸನ್ನಿವೇಶದಲ್ಲಿ, ಯಾವುದೇ ಸಾಮಾನ್ಯ ಅಡುಗೆಮನೆಯಲ್ಲಿ ಕಂಡುಬರುವ ಕೆಲವು ಪದಾರ್ಥಗಳು ಮತ್ತು ಇತರೆ ಕೆಲವು ಪೌಷ್ಠಿಕಾಂಶಗಳು ಸರಿಯಾದ ಕಾಳಜಿಯೊಂದಿಗೆ ತೆಗೆದುಕೊಂಡರೆ ವ್ಯಕ್ತಿಯ ರೋಗನಿರೋಧಕ ಶಕ್ತಿಯನ್ನು ಸುಧಾರಿಸಲು ಸಹಾಯ ಮಾಡುತ್ತವೆ ಎಂದು ಪೌಷ್ಠಿಕಾಂಶ ತಜ್ಞರಾದ ಸುಜಾತಾ ಸ್ಟೀಫನ್ ವಿವರಿಸುತ್ತಾರೆ.

ರೋಗನಿರೋಧಕ ಶಕ್ತಿ ಹೆಚ್ಚಿಸಲು ಈ ಕೆಳಗಿನ ಕ್ರಮಗಳನ್ನು ಅನುಸರಿಸಬಹುದು:

  • ಬೆಳಗ್ಗೆ, ಬಿಸಿ ನೀರಿನಲ್ಲಿ ತುಳಸಿ, ಮೆಣಸು, ದಾಲ್ಚಿನ್ನಿ, ಶುಂಠಿ, ಬೆಲ್ಲ ಮತ್ತು ಅರಿಶಿನ ಸೇರಿಸಿ ಕುದಿಸಿ, ಸೋಸಿ ಕಷಾಯವನ್ನು ತೆಗೆದುಕೊಂಡರೆ ಒಳ್ಳೆಯದು. ಇದು ಕೆಮ್ಮು, ಶೀತ ಮತ್ತು ಗಂಟಲಿನಲ್ಲಿ ತುರಿಕೆಗಳಿಂದ ಸಾಕಷ್ಟು ತೊಂದರೆಗಳಿಗೆ ಪರಿಹಾರ ನೀಡುತ್ತದೆ.
  • ಸುಮಾರು 30 ನಿಮಿಷಗಳ ಕಾಲ ವ್ಯಾಯಾಮ ಮಾಡುವುದು ಅವಶ್ಯಕ. ಈ ಸಮಯದಲ್ಲಿ, ಸಾಕಷ್ಟು ಸೂರ್ಯನ ಬೆಳಕು ದೇಹದಿಂದ ಹೀರಲ್ಪಡುತ್ತದೆ. ಯೋಗ ಮಾಡುವುದು ಮತ್ತು ವೇಗವಾಗಿ ನಡೆಯುವುದು ಬಹಳಷ್ಟು ಸಹಾಯಕವಾಗಿದೆ.
  • ಪ್ರತಿದಿನ ಬೆಳಗ್ಗೆ 8 ಗಂಟೆಯೊಳಗೆ ಬೆಳಗಿನ ಉಪಾಹಾರವನ್ನು ಪೂರ್ಣಗೊಳಿಸಬೇಕು. ಉದ್ದಿನ ಬೇಳೆ ಅಥವಾ ರಾಗಿ ಹಿಟ್ಟಿನಿಂದ ತಯಾರಿಸಿದ ಇಡ್ಲಿ ಉಪಾಹಾರಕ್ಕಾಗಿ ತೆಗೆದುಕೊಳ್ಳಲು ಸೂಕ್ತವಾಗಿದೆ.
  • ಬೆಳಗ್ಗೆ 10.30 ಕ್ಕೆ, ತಾಜಾ ಕತ್ತರಿಸಿದ ಹಣ್ಣುಗಳನ್ನು ಸೇವಿಸುವುದು. ಈ ದಿನಗಳಲ್ಲಿ ಪಪ್ಪಾಯಿ, ದಾಳಿಂಬೆ, ಏಪ್ರಿಕಾಟ್ ಮತ್ತು ಬ್ಲೂಬೆರಿ ಮುಂತಾದ ಹಣ್ಣುಗಳು ವ್ಯಾಪಕವಾಗಿ ಲಭ್ಯವಿದ್ದು, ಅವುಗಳನ್ನು ಸುಲಭವಾಗಿ ಸೇವಿಸಬಹುದು ಮತ್ತು ಆರೋಗ್ಯಕ್ಕೆ ಅಷ್ಟೇ ಒಳ್ಳೆಯದು.
  • ಸಾಮಾನ್ಯ ಊಟವನ್ನು ಹೊರತುಪಡಿಸಿ, ಯಾವುದೇ ಸೊಪ್ಪುಗಳು, ಬೇಯಿಸಿದ ದಾಲ್, ಮೂಲಂಗಿ, ಹೂಕೋಸು, ಎಲೆಕೋಸು ಮತ್ತು ಇತರ ಎಲೆಗಳ ತರಕಾರಿಗಳು ವ್ಯಕ್ತಿಯ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಇವುಗಳಲ್ಲಿ ಆ್ಯಂಟಿ-ಆಕ್ಸಿಡೆಂಟ್‌ಗಳು ಹೇರಳವಾಗಿವೆ. ಇದು ವೈರಲ್ ಮತ್ತು ಬ್ಯಾಕ್ಟೀರಿಯಾದ ಸೋಂಕುಗಳಿಂದ ರಕ್ಷಿಸುತ್ತದೆ.
  • ಒಬ್ಬ ವ್ಯಕ್ತಿಯು ದೇಹಕ್ಕೆ ಸಾಕಷ್ಟು ಪ್ರೊಟೀನ್‌ಗಳನ್ನು ಪಡೆಯಲು ಕನಿಷ್ಠ 150-200 ಗ್ರಾಂ ಕೋಳಿ ಮತ್ತು 75 ಗ್ರಾಂ ಮಟನ್, 100 ಗ್ರಾಂ ಮೀನು ಮತ್ತು 50 ಗ್ರಾಂ ಪನ್ನೀರ್ ಅನ್ನು ಸೇವಿಸಬೇಕು. ವಾರದಲ್ಲಿ ಕನಿಷ್ಠ ಎರಡು ಅಥವಾ ಮೂರು ಬಾರಿ ಸೇವಿಸಬೇಕು. ಸಸ್ಯಾಹಾರಿಗಳು ಅಂತಹ ಪ್ರೊಟೀನ್ ಆಹಾರವನ್ನು ಪಡೆಯಲು ಕಡಲೆಕಾಯಿ, ರಾಗಿ, ಹುರುಳಿ ಇತ್ಯಾದಿಗಳನ್ನು ಸೇವಿಸಬಹುದು.
  • ಸಂಜೆ ಒಣ ಹಣ್ಣುಗಳನ್ನು ಸೇವಿಸಬೇಕು. ರಾಗಿ, ಬಟಾಣಿ, ಕಡಲೆ, ಕಲ್ಲಂಗಡಿ ಮತ್ತು ಕುಂಬಳಕಾಯಿ ಬೀಜಗಳನ್ನು ತೆಗೆದುಕೊಳ್ಳಬಹುದು.
  • ರಾತ್ರಿ 7.30 - 8.00 ರ ಒಳಗೆ ಭೋಜನವನ್ನು ಮಾಡಬೇಕು. ಆದ್ದರಿಂದ ನಿದ್ರೆಗೆ ಮುಂಚಿತವಾಗಿ ಆಹಾರವನ್ನು ಜೀರ್ಣಿಸಿಕೊಳ್ಳಲು ಸಾಕಷ್ಟು ಸಮಯ ಉಳಿಯುತ್ತದೆ. ಜೋಳದ ರೊಟ್ಟಿ ಮತ್ತು ಗೋಧಿ ಚಪಾತಿಯನ್ನು ಸೀಮಿತ ಪ್ರಮಾಣದಲ್ಲಿ ಸೇವಿಸಬೇಕು. ಮಲಗುವ ಮುನ್ನ ಒಂದು ಕಪ್ ಹಾಲಿನಲ್ಲಿ ಒಂದು ಚಿಟಿಕೆ ಅರಿಶಿನವನ್ನು ತೆಗೆದುಕೊಳ್ಳುವುದು ಶ್ವಾಸಕೋಶಕ್ಕೆ ಸಹಾಯ ಮಾಡುತ್ತದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.