ETV Bharat / bharat

ಕೋವಿಡ್‌ ತಡೆಗೆ ಪೋಲಿಯೋ ಲಸಿಕೆ ಸಹಕಾರಿಯೇ?: ಅಧ್ಯಯನ ವರದಿ ಹೇಳುವುದೇನು? - ಅಟೆನ್ಯೂಯೇಟ್

ಅಟೆನ್ಯೂಯೇಟ್ ಮತ್ತು ಪೋಲಿಯೋ ಲಸಿಕೆಗಳು ಕೋವಿಡ್‌ ತಡೆಗೆ ಸಹಕಾರಿಯಾಗಲಿವೆ ಎಂದು ಇತ್ತೀಚಿನ ಅಧ್ಯಯನವೊಂದು ಹೇಳುತ್ತಿದೆ.

existing-polio-vaccine-shows-promise-could-protect-against-covid-19-study
ಕೋವಿಡ್‌-19 ತಡೆಗೆ ಪೋಲಿಯೋ ಲಸಿಕೆ ಸಹಕಾರಿ; ಅಧ್ಯಯನ
author img

By

Published : Jun 13, 2020, 12:44 PM IST

ನವದೆಹಲಿ: ಕೋವಿಡ್‌-19 ತಲ್ಲಣಗೊಳಿಸಿದಾಗಿನಿಂದ ಇದಕ್ಕೆ ಯಾವಾಗ ವ್ಯಾಕ್ಸಿನ್‌(ಔಷಧ) ಕಂಡು ಹಿಡಿಯಲಾಗುತ್ತದೆ ಎಂದು ಇಡೀ ಜಗತ್ತು ಕಾತರದಿಂದ ಕಾಯುತ್ತಿದೆ. ಕೊರೊನಾ ವೈರಸ್‌ಗೆ ಪರಿಣಾಮಕಾರಿ ಆಗುವಂಥ ಔಷಧಿಗಾಗಿ ವಿಜ್ಞಾನಿಗಳು, ತಜ್ಞರು ಹಗಳಿರುಳೆನ್ನದೆ ಸಂಶೋಧನೆಗಳನ್ನು ನಡೆಸುತ್ತಿದ್ದಾರೆ. ಆದ್ರೂ ಎರಡ್ಮೂರು ತಿಂಗಳಿನಿಂದ ಇದಕ್ಕೆ ಸೂಕ್ತ ವ್ಯಾಕ್ಸಿನ್‌ ಮಾತ್ರ ಸಿಕ್ಕಿಲ್ಲ.

ಇತ್ತೀಚಿನ ಕೆಲವೊಂದು ವೈದ್ಯಕೀಯ ವಿಜ್ಞಾನದ ಅಧ್ಯಯನಗಳು ಅಸ್ತಿತ್ವದಲ್ಲಿರುವ ಕೆಲ ವ್ಯಾಕ್ಸಿನ್‌ಗಳೇ ಕೋವಿಡ್‌ ತಡೆಯಲು ಪರಿಣಾಮಕಾರಿ ಆಗಲಿವೆ ಎಂದು ಹೇಳುತ್ತಿವೆ.

ಅಟೆನ್ಯೂಯೇಟ್ ಮತ್ತು ಒರಲ್‌ ಪೋಲಿಯೋ ವ್ಯಾಕ್ಸಿನ್‌(ಒಪಿವಿ) ಇತರೆ ಸೋಂಕುಗಳನ್ನು ಕಡಿಮೆ ಮಾಡಲಿದೆ ಎಂದು ಅಧ್ಯಯನ ಹೇಳುತ್ತಿದೆ. ಇತರೆ ರೋಗಕಾರರಗಳಿಂದ ದೇಹಕ್ಕೆ ರಕ್ಷಣೆ ಕೊಡುವುದರ ಜೊತೆಗೆ ಸೋಂಕು ತಗಲದಂತೆ ನೋಡಿಕೊಳ್ಳುತ್ತದೆ. ಇದು ಸಹಜವಾಗಿ ರೋಗ ನಿರೋಧಕ ಕಾರ್ಯವಿಧಾನಗಳನ್ನು ಹೆಚ್ಚಿಸುತ್ತದೆ ಎಂಬುದನ್ನು ಗುರುತಿಸಲಾಗಿದೆ ಎಂದೂ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಸಂಶೋಧಕರ ಪ್ರಕಾರ, ಅಟೆನ್ಯೂಯೇಟ್ ವ್ಯಾಕ್ಸಿನ್‌ ಮತ್ತು ಒಪಿವಿ ಸಹಜವಾಗಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲಿವೆ. ಹೀಗಾಗಿ ತಾತ್ಕಾಲಿಕವಾಗಿ ಕೋವಿಡ್‌-19 ಸೋಂಕಿತರಿಗೆ ಈ ವ್ಯಾಕ್ಸಿನ್‌ಗಳನ್ನು ನೀಡಬಹುದು ಎಂದು ಸಲಹೆ ನೀಡಿದೆ. ಕ್ಷಯ ರೋಗ ತಡೆಯಲು ವ್ಯಾಕ್ಸಿನ್‌ಗಳು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತವೆ. ಕ್ಷಯ ರೋಗದ ವಿರುದ್ಧ ಅಟೆನ್ಯೂಯೇಟ್, ಬ್ಯಾಸಿಲಸ್ ಕ್ಯಾಲ್ಮೆಟ್ ಗೌರಿನ್‌-(ಬಿಸಿಜಿ)ಯಾಗಿ ಕೆಲಸ ಮಾಡುತ್ತದೆ. ಇದನ್ನು ಹೆಟಿರೊಲಾಜಿಸ್(ವಿಭಿನ್ನಲಿಂಗೀಯ) ಸೋಂಕಿಗೂ ಬಳಸಲಾಗುತ್ತದೆ ಎಂದಿದೆ.

ಕೋವಿಡ್‌-19ಗೆ ರೋಗನಿರೋಧಕ ಶಕ್ತಿ ಹೆಚ್ಚಿಸಲು ಈ ಲಸಿಕೆಗಳು ಫಲಪ್ರದವಾಗಿವೆ ಎಂದು ವೈದ್ಯಕೀಯ ವರದಿಗಳು ಮತ್ತು ವೈಜ್ಞಾನಿಕ ಸಂಸಶೋಧನೆಗಳು ಹೇಳುತ್ತಿವೆ. ಸೆವೆರೆ ಅಕ್ಚುವೆಲ್‌ ರೆಸ್ಪಿರೆಟರಿ ಸಿಂಡ್ರಂ-ಕೊರೊನಾ ವೈರಸ್‌-2(SARS-CoV-2) ಸೋಂಕಿನ ಪ್ರತಿರೋಧಕ್ಕೆ ಇದು ನೆರವಾಗಲಿದೆ ವಿಶ್ವಾಸ ವ್ಯಕ್ತಪಡಿಸಿದೆ.

ಒಂದು ವೇಳೆ ಪ್ರಾಯೋಗಿಕ ಪರೀಕ್ಷೆಯಲ್ಲಿ ಒಪಿವಿ ಸಕಾರಾತ್ಮಕ ಫಲಿತಾಂಶ ನೀಡಿದರೆ ಈ ವ್ಯಾಕ್ಸಿನ್‌ ಅನ್ನು ಕೋವಿಡ್‌ ಸೋಂಕಿತರಿಗೆ ನೀಡಬಹುದು ಎಂದು ಅಧ್ಯಯನ ಹೇಳಿದೆ. ಸದ್ಯಕ್ಕೆ ವಿಶ್ವದಲ್ಲಿ 7 ಮಿಲಿಯನ್‌ ಜನರಿಗೆ ಕೋವಿಡ್‌-19 ಸೋಂಕು ದೃಢಪಟ್ಟಿದ್ದು, 4 ಲಕ್ಷಕ್ಕೂ ಅಧಿಕ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.