ETV Bharat / bharat

#BoycottMadeInChina : ವಿಚಾರವಾದಿ ಸೋನಮ್ ವಾಂಗಚುಕ್ ವಿಶೇಷ ಸಂದರ್ಶನ - india economy

ಭಾರತದ ಗಡಿಯಲ್ಲಿ ಚೀನಾದ ದುಸ್ಸಾಹಸಗಳನ್ನು ಉಗ್ರವಾಗಿ ಖಂಡಿಸುವ ಹಾಗೂ ಚೀನಾದ ಕುತಂತ್ರಗಳನ್ನು ಎಳೆ ಎಳೆಯಾಗಿ ಬಿಚ್ಚಿಡುವ ವಾಂಗ್​​ಚುಕ್ ಮಾತುಗಳನ್ನು ಕೇಳುವುದೇ ಒಂದು ಸೊಗಸು. ಸದ್ಯ ಭಾರತ ಹಾಗೂ ಚೀನಾ ಶೀತಲ ಸಮರದ ಸಮಯದಲ್ಲಿ ಚೀನಾ ನಿರ್ಮಿತ ವಸ್ತುಗಳ ಬಳಕೆಯನ್ನು ಸಂಪೂರ್ಣ ನಿಲ್ಲಿಸುವ ಸಲುವಾಗಿ ಆಂದೋಲನ ಹಮ್ಮಿಕೊಂಡಿರುವ ವಾಂಗ್​​​​​​ ಚುಕ್ ಈಟಿವಿ ಭಾರತ್​ನೊಂದಿಗೆ ಸುದೀರ್ಘವಾಗಿ ಮಾತನಾಡಿದ್ದು, ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ.

Sonam Wangchuk
Sonam Wangchuk
author img

By

Published : Jun 11, 2020, 11:52 AM IST

ನವದೆಹಲಿ: ಥ್ರೀ ಈಡಿಯಟ್ಸ್​ ಹಿಂದಿ ಚಲನಚಿತ್ರ ನೋಡಿದವರು ಅದರಲ್ಲಿನ ಅಮೀರ್ ಖಾನ್ ಪಾತ್ರವನ್ನು ಬಹುವಾಗಿ ಮೆಚ್ಚಿಕೊಂಡಿರುತ್ತಾರೆ. ಚಿತ್ರದಲ್ಲಿ ಅಮೀರ್ ಖಾನ್ ನಿರ್ವಹಿಸಿರುವ ಸೋನಮ್ ವಾಂಗ್​​ಚುಕ್ ಎಂಬ ವ್ಯಕ್ತಿಯ ಪಾತ್ರವು ನಿಜ ಜೀವನದಲ್ಲಿ ಅದೇ ವ್ಯಕ್ತಿಯ ವ್ಯಕ್ತಿತ್ವದಿಂದ ಪ್ರೇರಣೆ ಪಡೆದಿರುವಂಥದ್ದು ಎಂಬುದು ಈಗಿನ ಬಹುತೇಕರಿಗೆ ಗೊತ್ತಿರಲಿಕ್ಕಿಲ್ಲ.

ಹೌದು. ಸೋನಮ್ ವಾಂಗಚುಕ್ ಇತ್ತೀಚೆಗೆ ಭಾರತದಲ್ಲಿ ಅತ್ಯಂತ ಜನಪ್ರಿಯ ವ್ಯಕ್ತಿಯಾಗಿ ಹೊರಹೊಮ್ಮುತ್ತಿದ್ದಾರೆ. ಭಾರತದ ಗಡಿಯಲ್ಲಿ ಚೀನಾದ ದುಸ್ಸಾಹಸಗಳನ್ನು ಉಗ್ರವಾಗಿ ಖಂಡಿಸುವ ಹಾಗೂ ಚೀನಾದ ಕುತಂತ್ರಗಳನ್ನು ಎಳೆ ಎಳೆಯಾಗಿ ಬಿಚ್ಚಿಡುವ ವಾಂಗಚುಕ್ ಮಾತುಗಳನ್ನು ಕೇಳುವುದೇ ಒಂದು ಸೊಗಸು. ಸದ್ಯ ಭಾರತ ಹಾಗೂ ಚೀನಾ ಶೀತಲ ಸಮರದ ಸಮಯದಲ್ಲಿ ಚೀನಾ ನಿರ್ಮಿತ ವಸ್ತುಗಳ ಬಳಕೆಯನ್ನು ಸಂಪೂರ್ಣ ನಿಲ್ಲಿಸುವ ಸಲುವಾಗಿ ಆಂದೋಲನ ಹಮ್ಮಿಕೊಂಡಿರುವ ವಾಂಗ್ಚುಕ್ ಈಟಿವಿ ಭಾರತ್​ನೊಂದಿಗೆ ಸುದೀರ್ಘವಾಗಿ ಮಾತನಾಡಿದ್ದು, ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ. ವಾಂಗ್​​ಚುಕ್ ಅವರ ಪ್ರಬುದ್ಧ ಆಲೋಚನೆಗಳನ್ನು ಅವರು ಮಾತಿನಲ್ಲೇ ಕೇಳೋಣ ಬನ್ನಿ

ಪ್ರಶ್ನೆ: ವ್ಯಾಲೆಟ್​ ವಿರುದ್ಧ ಬುಲೆಟ್ ಎಂಬ ಐಡಿಯಾ ನಿಮಗೆ ಹೊಳೆದಿದ್ದು ಹೇಗೆ?

ಸೋನಮ್ ವಾಂಗ್​ಚುಕ್: ಲಡಾಖ್​ನಲ್ಲಿ ನಾನು ವಾಸಿಸುತ್ತಿರುವಾಗ ಚೀನಾದ ಅನಾಗರಿಕತೆ, ಪ್ರಾಬಲ್ಯ ಮೆರೆಯುವಿಕೆ ಅಥವಾ ಒಳನುಸುಳುವಿಕೆ ಮುಂತಾದ ಎಲ್ಲ ದುರಾಚಾರಗಳನ್ನು ಆಗಾಗ ನೋಡುತ್ತಲೇ ಇದ್ದೆ. ಚೀನಾದ ಈ ದುಸ್ಸಾಹಸಗಳಿಂದ ಲಡಾಖ್​ ಜನತೆ ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ. ಅದರಲ್ಲೂ ಪಶು ಪಾಲನೆ ಮಾಡುವವರಿಗೆ ತಮ್ಮ ಪಶುಗಳನ್ನು ಮೇಯಿಸಲು ಜಾಗವೇ ಇಲ್ಲದಂತಾಗಿದೆ. ಇದ್ದ ಜಾಗವನ್ನೆಲ್ಲ ಕಬಳಿಸಲು ಚೀನಾ ಹುನ್ನಾರ ನಡೆಸುತ್ತಿದೆ. ಇದನ್ನು ತಡೆಯಲು ಏನಾದರೂ ಮಾಡಬೇಕೆಂದು ಹಲವಾರು ದಿನಗಳಿಂದ ನಾನು ಯೋಚಿಸುತ್ತಲೇ ಇದ್ದೆ.

ಕಳೆದ ಕೆಲ ದಿನಗಳ ಹಿಂದೆ ಮತ್ತೆ ಯಾವಾಗ ಅವರು ಒಳನುಸುಳಲಾರಂಭಿಸಿದರೋ ಆವಾಗ, ಅವರ ಉದ್ದೇಶ ಹಾಗೂ ಗುರಿಗಳು ಬೇರೆಯೇ ಇವೆ ಎಂಬುದು ಅರ್ಥವಾಗತೊಡಗಿತು. ಕೇವಲ ಗಡಿ ದಾಟುವುದು ಖಂಡಿತ ಅವರ ಉದ್ದೇಶವಾಗಿರಲಿಕ್ಕಿಲ್ಲ. ಕೋವಿಡ್​-19 ನಂತಹ ಮಹಾಮಾರಿಯಿಂದ ಆಘಾತಗೊಂಡಿರುವ ದೇಶವೊಂದು ಇಂಥ ಕೆಲಸ ಮಾಡಲಾರದು ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು.

ಭಾರತ ಮಾತ್ರವಲ್ಲದೇ ವಿಯೆಟ್ನಾಂ, ತೈವಾನ್ ಸೇರಿದಂತೆ ಅಮೆರಿಕ ನೌಕಾಪಡೆಗಳನ್ನೂ ದಕ್ಷಿಣ ಚೀನಾ ಸಮುದ್ರದಲ್ಲಿ ಚೀನಾ ಸೇನೆ ಕೆಣಕಲಾರಂಭಿಸಿದೆ. ಒಂದೇ ತಿಂಗಳಲ್ಲಿ ಇಷ್ಟೊಂದು ದುಸ್ಸಾಹಸಗಳ ಹಿಂದೆ ಬೇರೆಯೇ ಉದ್ದೇಶ ಅಡಗಿದೆ ಎಂಬುದು ಸ್ಪಷ್ಟ. ತನ್ನ ದೇಶದಲ್ಲಿ ಕೊರೊನಾ ವೈರಸ್​ ಮಹಾಮಾರಿಯನ್ನು ನಿಯಂತ್ರಿಸಲು ವಿಫಲಗೊಂಡ ಚೀನಾ ಆಂತರಿಕವಾಗಿ ಪ್ರಜೆಗಳಿಂದ ತೀವ್ರ ಆಕ್ರೋಶ ಎದುರಿಸುತ್ತಿದೆ. ಅವರ ಅರ್ಥವ್ಯವಸ್ಥೆ ಪಾತಾಳಕ್ಕೆ ಕುಸಿದಿದ್ದು, ಜನರ ಸಹನೆಯ ಕಟ್ಟೆಯೊಡೆದಿದೆ. ಇಂತಹ ಸಮಯದಲ್ಲಿ ಜನತೆಯ ಗಮನವನ್ನು ಬೇರೆಡೆ ತಿರುಗಿಸಲು ಚೀನಾ ಈ ಕಸರತ್ತು ಮಾಡುತ್ತಿದೆ.

ತನ್ನ ಅರ್ಥವ್ಯವಸ್ಥೆಯನ್ನು ಹಳಿಗೆ ತರಲು ಚೀನಾ ಇಷ್ಟೆಲ್ಲ ಸಾಹಸ ಮಾಡುತ್ತಿದೆ ಎಂದಾದರೆ ನಾವು ಮೊದಲಿಗೆ ಅವರ ಅರ್ಥವ್ಯವಸ್ಥೆಯನ್ನೇ ಗುರಿಯಾಗಿಸಿಕೊಳ್ಳಬೇಕಾಗುತ್ತದೆ. ಚೀನಾದ ಕುತಂತ್ರದ ಬಲೆಗೆ ಬಿದ್ದು ನಾವು ಗನ್ ಹಾಗೂ ಬುಲೆಟ್​ಗಳಿಂದ ಅವರಿಗೆ ಉತ್ತರ ಕೊಡಬಾರದು. ಇಂತಹ ಸಮಯದಲ್ಲಿ ಚೀನಾದ ಅರ್ಥವ್ಯವಸ್ಥೆಯನ್ನು ಬುಡಮೇಲು ಮಾಡುವುದೇ ನಮ್ಮ ಗುರಿಯಾಗಬೇಕು.

ಭಾರತೀಯ ಪ್ರಜೆಗಳೇ ಇದನ್ನು ಮಾಡಬಲ್ಲರು ಎಂದು ನಾನು ದೃಢವಾಗಿ ನಂಬಿರುವೆ. ದೇಶದ ಮೂಲೆ ಮೂಲೆಯಲ್ಲಿರುವ ಭಾರತೀಯರು ತಮ್ಮ ಮೊಬೈಲ್​ಗಳಲ್ಲಿನ ಚೀನಾ ಆ್ಯಪ್​ಗಳನ್ನು ಅನ್​ ಇನ್​ಸ್ಟಾಲ್​ ಮಾಡುವುದರ ಮೂಲಕ ಇದನ್ನು ಸಾಧಿಸಬಲ್ಲರು. ನೋಡಲು ಇದು ತೀರಾ ಚಿಕ್ಕ ಕೆಲಸವಾಗಿ ಕಂಡರೂ, ಯಾವಾಗ ಲಕ್ಷ ಹಾಗೂ ಕೋಟಿಗಳ ಲೆಕ್ಕದಲ್ಲಿ ಚೀನಾ ಆ್ಯಪ್​ಗಳು ಅನ್​ ಇನ್​ಸ್ಟಾಲ್​ ಆಗಲಾರಂಭಿಸುತ್ತವೆಯೋ ಆಗ ಅವರಿಗೆ ನಿಜವಾಗಿಯೂ ಆಘಾತ ಉಂಟಾಗಲಿದೆ. ಇದರ ಜೊತೆಗೆ ಕುಸಿಯುತ್ತಿರುವ ಅರ್ಥವ್ಯವಸ್ಥೆಯ ವಿರುದ್ಧ ಜನರ ಆಂತರಿಕ ಆಕ್ರೋಶವೂ ಭುಗಿಲೇಳುತ್ತದೆ.

ಪ್ರಶ್ನೆ: ಚೀನಾದ ಆ್ಯಪ್ ಹಾಗೂ ವಸ್ತುಗಳು ನಮ್ಮ ದಿನನಿತ್ಯದ ಜೀವನದಲ್ಲಿ ಹಾಸುಹೊಕ್ಕಾಗಿವೆ. ಇಂಥ ಪರಿಸ್ಥಿತಿಯಲ್ಲಿ ಅವನ್ನು ನಿರ್ಬಂಧಿಸುವುದು ವಾಸ್ತವಿಕವಾಗಿ ಎಷ್ಟು ಸೂಕ್ತ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಹೀಗೆ ಮಾಡುವುದು ಅಸಾಧ್ಯವಲ್ಲವಾದರೂ ತೀರಾ ಕಷ್ಟಕರ ಎನಿಸುತ್ತದೆ. ಇದರ ಬಗ್ಗೆ ನೀವೇನಂತೀರಿ?

ಸೋನಮ್ ವಾಂಗ್​ಚುಕ್​: ಹೌದು.. ಇದು ಕಷ್ಟಕರವಾದರೂ ಅಸಾಧ್ಯವೇನಲ್ಲ. ಈ ಜಗತ್ತಿನಲ್ಲಿ ಹಲವಾರು ಕೆಲಸಗಳು ತೀರಾ ಕಷ್ಟಕರವಾಗಿವೆ. ಜೈನ ಧರ್ಮೀಯರು ಈರುಳ್ಳಿ, ಬೆಳ್ಳುಳ್ಳಿ ಮತ್ತು ಗಜ್ಜರಿಗಳನ್ನು ತಿನ್ನುವುದೇ ಇಲ್ಲ. ಅವನ್ನೆಲ್ಲ ತಿನ್ನದೇ ಅವರು ಬದುಕಿಲ್ಲವೇ? ಹೀಗಾಗಿ ಯಾವುದೂ ಕಷ್ಟವಲ್ಲ. ವ್ಯಕ್ತಿಯೊಬ್ಬ ಒಂದು ವಿಚಾರಕ್ಕೆ ಸಮರ್ಪಿತನಾದರೆ ಉಳಿದೆಲ್ಲ ವಿಷಯಗಳು ಅದಕ್ಕೆ ತಕ್ಕಂತೆ ತಾನಾಗಿಯೇ ಮಾರ್ಪಾಟಾಗುತ್ತವೆ.

ಜೈನ ಧರ್ಮೀಯರು ಎಲ್ಲಿಗೇ ಹೋದರೂ ಅವರಿಗೆ ಬೇಕಾದ ಆಹಾರ ಸಿಗುತ್ತದೆ. ಶಾಕಾಹಾರಿ ವ್ಯಕ್ತಿಗೆ ಆತ ಬಯಸಿದ ಆಹಾರ ಸಿಕ್ಕೇ ಸಿಗುತ್ತದೆ. ಇನ್ನು ರಕ್ತ ಹೆಪ್ಪುಗಟ್ಟಿಸುವ ಚಳಿಯ ವಾತಾವರಣ ಇರುವ ಚೀನಾ-ಭಾರತ ಗಡಿಯಲ್ಲಿ ಭಾರತದ ಯೋಧರು ದೇಶ ರಕ್ಷಣೆಗಾಗಿ ಹೋರಾಡುತ್ತಿದ್ದಾರೆ. ಅವರ ಶೌರ್ಯದ ಮುಂದೆ ನೀವು ಒಂದು ಆ್ಯಪ್ ಅನ್​ ಇನ್​ಸ್ಟಾಲ್​ ಮಾಡುವುದು ಎಷ್ಟು ಸಣ್ಣ ಕೆಲಸ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಅವರ ತ್ಯಾಗದ ಮುಂದೆ ಒಂದು ಆ್ಯಪ್ ಅನ್​ ಇನ್​ಸ್ಟಾಲ್​ ಮಾಡುವುದು ಏನೇನೂ ಅಲ್ಲ. ನೀವು ಇಷ್ಟನ್ನೂ ಮಾಡಲಾರಿರಿ ಎಂದರೆ ನಾನೇನು ಹೇಳಲಿ?

ಪ್ರಶ್ನೆ: ಸಾಮಾನ್ಯ ಭಾರತೀಯರ "ಚಲ್ತಾ ಹೈ" ಎಂಬ ಧೋರಣೆ ನಿಮಗೆ ಚಿಂತೆ ಮೂಡಿಸುವುದಿಲ್ಲವೇ?

ಸೋನಮ್ ವಾಂಗ್​ಚುಕ್​: ನಿಜ... ಭಾರತೀಯರ ಈ ಧೋರಣೆಯ ಬಗ್ಗೆ ನನಗೆ ಸಾಕಷ್ಟು ಸಿಟ್ಟಿದೆ. ಒಂದು ದೇಶವಾಗಿ ನಾವು ಹಿನ್ನಡೆ ಅನುಭವಿಸಿದ್ದರೆ ಅದಕ್ಕೆ ಈ "ಚಲ್ತಾ ಹೈ" ಧೋರಣೆಯೇ ಕಾರಣವಾಗಿದೆ. ಈ ವಿಷಯದಲ್ಲಿ ಚೀನಾದವರನ್ನು ನಾವು ನೋಡಿ ಕಲಿಯುವುದು ಬಹಳಷ್ಟಿದೆ. ಅವರು ಏನೇ ಮಾಡಿದರೂ ಅದರ ಬಗ್ಗೆ ಖಚಿತತೆಯನ್ನು ಹೊಂದಿರುತ್ತಾರೆ. ಹೀಗಾಗಿಯೇ ಎಲ್ಲದರಲ್ಲೂ ಯಶಸ್ಸು ಕಾಣುತ್ತಾರೆ.

ಆದರೆ ನಮ್ಮಲ್ಲಿ ಮಾತ್ರ ಒಂದು ರೀತಿಯ ನಿರ್ಲಕ್ಷ್ಯದ ವಾತಾವರಣ ಇದೆ. ಕೊರೊನಾ ವೈರಸ್​ ನಿಯಂತ್ರಿಸುವಲ್ಲಿ ಕಳೆದ ಕೆಲ ತಿಂಗಳಲ್ಲಿ ನಾವು ಜಾಗತಿಕವಾಗಿ ಸಾಕಷ್ಟು ಮುಂದೆ ಇದ್ದೆವು. ಆದರೆ ಈಗ ಲಾಕ್​ಡೌನ್​ ಸಡಿಲಿಕೆ ಮಾಡಿದ ನಂತರ ಈ "ಚಲ್ತಾ ಹೈ" ಎಂಬ ಧೋರಣೆ ಎಲ್ಲವನ್ನೂ ನುಂಗಿ ನೀರು ಕುಡಿದಂತೆ ಕಾಣುತ್ತಿದೆ. ಒಂದು ವೇಳೆ ಸಾಕಷ್ಟು ಮುಂಜಾಗರೂಕತೆ ವಹಿಸದಿದ್ದಲ್ಲಿ ಕೊರೊನಾ ವೈರಸ್​ ವಿರುದ್ಧದ ಹೋರಾಟದಲ್ಲಿ ನಾವು ಸೋಲು ಕಾಣಬಹುದಾಗಿದೆ.

ಒಂದೊಮ್ಮೆ ವೈರಸ್​ ನಮ್ಮನ್ನು ಮೀರಿಸಿ ಬೆಳೆದು ಬಿಟ್ಟರೆ ಚೀನಾ ವಿರುದ್ಧ ನಾವು ಹೋರಾಡುವುದಾದರೂ ಹೇಗೆ? ಇನ್ನೊಂದು ಕಡೆ ನೋಡಿದರೆ ಚೀನಾ ನಾಗರಿಕರು ಸಾಕಷ್ಟು ಜವಾಬ್ದಾರಿಯುತವಾಗಿ ವರ್ತಿಸುತ್ತಿದ್ದಾರೆ. ಅದೇ ಕಾರಣಕ್ಕೆ ಚೀನಾ ಕೊರೊನಾ ವೈರಸ್​ ಅನ್ನು ನಿಯಂತ್ರಣದಲ್ಲಿಡಲು ಸಾಧ್ಯವಾಗುತ್ತಿದೆ. ಈ ಸಮಯದಲ್ಲಿ ಭಾರತೀಯರಾದ ನಾವು ಒಂದಿಷ್ಟು ಶಿಸ್ತು ಅಳವಡಿಸಿಕೊಳ್ಳುವುದು ಅನಿವಾರ್ಯ. ಆಗ ಮಾತ್ರ ನಾವು ಈ ಹೋರಾಟದಲ್ಲಿ ಯಶಸ್ಸು ಕಾಣಲು ಸಾಧ್ಯ.

ಪ್ರಶ್ನೆ: ನಾವು ಚೀನಾದಿಂದ 5 ಲಕ್ಷ ಕೋಟಿ ರೂ. ಮೌಲ್ಯದ ವಸ್ತುಗಳನ್ನು ಆಮದು ಮಾಡಿಕೊಳ್ಳುತ್ತೇವೆ. ಅದರಲ್ಲಿ ಶೇ 41 ರಷ್ಟು ಎಲೆಕ್ಟ್ರಿಕಲ್, ಮೆಕ್ಯಾನಿಕಲ್ ಮತ್ತು ಎಲೆಕ್ಟ್ರಾನಿಕ್ ವಸ್ತುಗಳ ಪಾಲಿದೆ. ಇದರ ಬದಲಾಗಿ ಇವನ್ನು ನಾವು ಬೇರೆ ದೇಶಗಳಿಂದ ತರಿಸಿಕೊಳ್ಳುವುದು ಸೂಕ್ತ ಎನ್ನುವಿರಾ? ನಮ್ಮಲ್ಲಿ ಸ್ಥಳೀಯವಾಗಿ ಅವೆಲ್ಲವನ್ನು ತಯಾರಿಸುವುದು ಕಷ್ಟಕರವಾದ್ದರಿಂದ ಬೇರೆ ದೇಶಗಳಿಂದ ತರಿಸಿಕೊಳ್ಳಬೇಕಾಗಬಹುದು ಅಲ್ಲವೇ?

ಸೋನಮ್ ವಾಂಗ್​ಚುಕ್​:: ಖಂಡಿತವಾಗಿಯೂ ಹೌದು. ಮೊದಲಿಗೆ ಆದಷ್ಟೂ ಹೆಚ್ಚು ವಸ್ತುಗಳನ್ನು ಸ್ಥಳೀಯವಾಗಿ ತಯಾರಿಸಲು ಯತ್ನಿಸಬೇಕು. ನಮ್ಮಲ್ಲಿ ತಯಾರಿಸಲಾಗದ ವಸ್ತುಗಳನ್ನು ಮಾತ್ರ ಬೇರೆ ದೇಶಗಳಿಂದ ತರಿಸಿಕೊಳ್ಳಬೇಕು. ಅದರಲ್ಲೂ ಮಾನವ ಹಕ್ಕುಗಳನ್ನು ಗೌರವಿಸುವ, ಪರಿಸರ ಕಾಪಾಡುವ ಮತ್ತು ಭಾರತದೆಡೆಗೆ ಉತ್ತಮ ದೃಷ್ಟಿಕೋನ ಹೊಂದಿರುವ ದೇಶಗಳಿಂದ ಮಾತ್ರ ಆಮದು ಮಾಡಿಕೊಳ್ಳಬೇಕು.

ಮಾನವ ಹಕ್ಕು ಮತ್ತು ಕಾರ್ಮಿಕ ಹಕ್ಕುಗಳನ್ನು ಪಾಲಿಸದಿರುವುದರಿಂದಲೇ ಚೀನಾ ಅಗ್ಗದ ವಸ್ತುಗಳನ್ನು ತಯಾರಿಸಲು ಸಾಧ್ಯವಾಗುತ್ತಿದೆ. ಅಲ್ಲಿ ಕಾರ್ಮಿಕರು ಅತಿ ಕಡಿಮೆ ಸಂಬಳಕ್ಕೆ ಕೆಲಸ ಮಾಡುತ್ತಾರೆ. ಪರಿಸರ ಅಥವಾ ಕಾರ್ಮಿಕರ ಬಗ್ಗೆ ಚೀನಾಕ್ಕೆ ಯಾವುದೇ ಕಾಳಜಿ ಇಲ್ಲ. ಪರಿಸರ ಹಾಗೂ ಕಾರ್ಮಿಕ ಬಲ ಎರಡರ ಮೇಲೂ ದೌರ್ಜನ್ಯ ಎಸಗುತ್ತಿರುವ ಚೀನಾ ಎಷ್ಟಾಗುತ್ತೋ ಅಷ್ಟು ಲಾಭ ಪಡೆಯಲು ಯತ್ನಿಸುತ್ತಿದೆ.

ನಕಲಿ ವಸ್ತುಗಳನ್ನು ತಯಾರಿಸುವುದು, ಕರೆನ್ಸಿಯಲ್ಲಿ ಹಸ್ತಕ್ಷೇಪ ಮಾಡುವುದು ಮುಂತಾದ ಕೆಟ್ಟ ಕೆಲಸಗಳನ್ನು ಮಾಡುವ ಹಿನ್ನೆಲೆ ಹೊಂದಿರುವ ಚೀನಾ ಅವೇ ಮಾರ್ಗಗಳನ್ನು ಬಳಸಿ ಅಗ್ಗದ ವಸ್ತುಗಳನ್ನು ಉತ್ಪಾದಿಸುತ್ತದೆ. ಅಂತಾರಾಷ್ಟ್ರೀಯ ಸಮುದಾಯ ಮಾತ್ರವಲ್ಲದೇ ತನ್ನ ಜನರನ್ನೇ ಕೆಟ್ಡದಾಗಿ ನೋಡಿಕೊಳ್ಳುವ ಚೀನಾಗೆ ನಾವು ಸಹಕರಿಸುವುದು ಎಷ್ಟು ಸರಿ ಎಂದು ನಮ್ಮನ್ನು ನಾವೇ ಪ್ರಶ್ನಿಸಿಕೊಳ್ಳಬೇಕಿದೆ.

ಅವರು ಉತ್ಪಾದಿಸಿರುವ ವಸ್ತುಗಳು ಕಾರ್ಮಿಕರ ಮೇಲಿನ ಅತಿ ಕೆಟ್ಟ ದೌರ್ಜನ್ಯ ಹಾಗೂ ಪರಿಸರ ನಾಶದ ಫಲವಾಗಿರುತ್ತವೆ. ಅವರ ವಸ್ತುಗಳನ್ನು ಬಹಿಷ್ಕರಿಸಲು ಇನ್ನೂ ಹಲವಾರು ಕಾರಣಗಳಿದ್ದರೂ ಇದು ಪ್ರಮುಖ ಕಾರಣವಾಗಿದೆ.

ನಾವು ಚೀನಾ ಜನತೆಯ ವಿರುದ್ಧವಾಗಿಲ್ಲ. ನಮ್ಮದೇನಿದ್ದರೂ ಚೀನಿ ಸರಕಾರದ ವಿರುದ್ಧ ಮಾತ್ರ ಆಕ್ರೋಶ. ಮುಂದಿನ ದಿನಗಳಲ್ಲಿ ಚೀನಾ ಪ್ರಜಾಪ್ರಭುತ್ವ ರಾಷ್ಟ್ರವಾಗಿ ಬದಲಾದಲ್ಲಿ ಆಗ ಬೇಕಾದರೆ ನಾವು ಬಹಿಷ್ಕಾರ ನಿರ್ಧಾರವನ್ನು ಪುನರ್ ಪರಿಶೀಲಿಸಬಹುದು.

ಪ್ರಶ್ನೆ: ಚೀನಾ ವಸ್ತುಗಳನ್ನು ಬಹಿಷ್ಕರಿಸುವಂತೆ ಜನತೆಗೆ ನೀವು ಕರೆ ನೀಡಿರುವಿರಿ. ಆದರೆ ಇದು ಭಾರತದ ಕಂಪನಿಗಳಿಗೂ ಅನ್ವಯಿಸುತ್ತದೆಯಾ?

ಸೋನಮ್ ವಾಂಗ್​ಚುಕ್​:: ನನ್ನ ಕರೆ ಮೊದಲಿಗೆ ಭಾರತೀಯ ನಾಗರಿಕರಿಗೆ ಅನ್ವಯಿಸುತ್ತದೆ. ಜನತೆ ನಿಧಾನವಾಗಿ ಹೊಸ ವ್ಯವಸ್ಥೆಗಳಿಗೆ ಹೊಂದಿಕೊಳ್ಳುತ್ತ ಸಾಗಲಿ. ನಂತರ ದೇಶದಲ್ಲೇ ಬೇಕಾದ ವಸ್ತುಗಳನ್ನು ನಿರ್ಮಿಸುವಂತೆ ಭಾರತ ಸರ್ಕಾರ, ದೊಡ್ಡ ಕಂಪನಿಗಳು ಹಾಗೂ ವ್ಯಾಪಾರಿಗಳಿಗೆ ನಾನೇ ಖುದ್ದಾಗಿ ಮನವಿ ಮಾಡುತ್ತೇನೆ.

ಪ್ರಶ್ನೆ: ಚೀನಾ ನಮ್ಮ ದೇಶದಲ್ಲಿ ಬೃಹತ್ ಪ್ರಮಾಣದಲ್ಲಿ ಬಂಡವಾಳ ಹೂಡಿಕೆ ಮಾಡುತ್ತಿದೆ. ಚೀನಾದಿಂದ ನೇರ ಬಂಡವಾಳ ಹೂಡಿಕೆಯನ್ನು ಪರಿಶೀಲಿಸುವ ಸಲುವಾಗಿ ಭಾರತ ಸರ್ಕಾರ ಹಲವಾರು ಕ್ರಮಗಳನ್ನು ಕೈಗೊಳ್ಳುತ್ತಿದೆ. ನೀವು ಹೇಳುತ್ತಿರುವ ವಿಷಯಗಳು ಕುರಿತಾಗಿ ಸರ್ಕಾರ ಈಗಾಗಲೇ ಎಚ್ಚೆತ್ತುಕೊಂಡು ಕೆಲಸ ಮಾಡುತ್ತಿದೆ ಎನಿಸುತ್ತದೆ ಅಲ್ಲವೇ?

ಸೋನಮ್ ವಾಂಗ್​ಚುಕ್​:: ಸ್ಥಳೀಯ ವ್ಯಾಪಾರೋದ್ಯಮಗಳನ್ನು ರಕ್ಷಿಸಲು ಸರ್ಕಾರ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದಾದಲ್ಲಿ ಅದನ್ನು ನಾನು ಸ್ವಾಗತಿಸುತ್ತೇನೆ. ಭಾರತದ ಸಾರ್ವಭೌಮತೆ ಹಾಗೂ ಗೌರವಕ್ಕೆ ಕುಂದು ತರುವ ರೀತಿಯಲ್ಲಿ ಚೀನಾ ವರ್ತಿಸುವುದನ್ನು ನೋಡಿದ ನಂತರ ನನಗೆ ಚೀನಾ ಕುರಿತು ಹಾಗೆ ಅನ್ನಿಸಲಾರಂಭಿಸಿತು. ಹೊರತು ಚೀನಾ ಬಗ್ಗೆ ನನಗೆ ಯಾವುದೇ ಪೂರ್ವಗ್ರಹ ಪೀಡಿತ ವಿಚಾರಗಳಿಲ್ಲ.

ಪ್ರಶ್ನೆ: ಅವರ ಪ್ರದೇಶದಲ್ಲಿ ನೀರಿನ ಕೊರತೆಯಾಗಿದ್ದರಿಂದ ಚೀನಾ ಇಂಥ ದುಸ್ಸಾಹಸಕ್ಕೆ ಕೈಹಾಕಿದೆ ಅನಿಸುವುದಿಲ್ಲವೇ? ಪೊಂಗೊಂಗ್ ತ್ಸೋ ಲೇಕ್​ನಿಂದ ಹೆಚ್ಚುವರಿ ನೀರನ್ನು ಪಡೆಯುವ ಪ್ರಯತ್ನ ಇದರ ಹಿಂದಿದೆ ಅನಿಸುತ್ತದೆ?

ಸೋನಮ್ ವಾಂಗ್​ಚುಕ್​:: ಏನೇ ಆದರೂ ನಾವು ಆಕ್ರಮಣಕಾರಿಯಾಗಿದ್ದು, ಸದಾ ಎಚ್ಚರವಾಗಿರಬೇಕು. ಅವರು ಪ್ರತಿ ಆಕ್ರಮಣ ಮಾಡಿದರೂ ಮುಂದಿನ ಒಂದು ವರ್ಷಗಳವರೆಗೂ ಅವರು ಮತ್ತೆ ನಮ್ಮ ತಂಟೆಗೆ ಬರಲಾರರು. 1962 ರಲ್ಲಿ ಅವರು ಆಕ್ರಮಿಸಿದ ನಮ್ಮ ಭೂಮಿಯನ್ನು ಈಗ ನಾವು ಮರಳಿ ಕೇಳಬೇಕಿದೆ. 1962 ಕ್ಕೂ ಮುಂಚೆ ಇದ್ದ ಲೈನ್ ಆಫ್ ಕಂಟ್ರೋಲ್ ಸ್ಥಿತಿಯನ್ನು ಮತ್ತೆ ಮರುಕಳಿಸುವಂತೆ ಮಾಡಬೇಕಿದೆ.

ಪ್ರಶ್ನೆ: ಈಟಿವಿ ಭಾರತ್​ನ ಕೋಟ್ಯಂತರ ವೀಕ್ಷಕರಿಗೆ ನೀವು ಯಾವ ಸಂದೇಶ ನೀಡಲು ಇಷ್ಟ ಪಡುವಿರಿ?

ಸೋನಮ್ ವಾಂಗ್​ಚುಕ್​:: ತನ್ನ ದೇಶದ ಅರ್ಥವ್ಯವಸ್ಥೆ ಸುಭದ್ರವಾಗಿರಲಿ ಎಂಬುದು ಪ್ರತಿಯೊಬ್ಬ ಹೆಮ್ಮೆಯ ನಾಗರಿಕನ ಆಸೆಯಾಗಿರುತ್ತದೆ. ಜಾಗತೀಕರಣದ ನೆಪದಲ್ಲಿ ನಾವು ಚಮಚೆ, ಬ್ರೆಡ್, ಬಟರ್ ಮುಂತಾದ ಚಿಕ್ಕ ಪುಟ್ಟ ವಸ್ತುಗಳನ್ನು ಸಹ ಆಮದು ಮಾಡಿಕೊಳ್ಳುತ್ತಿದ್ದೇವೆ. ಸ್ಥಳೀಯವಾಗಿ ಉತ್ಪಾದನೆ ಹೆಚ್ಚಿಸುವುದು ಮತ್ತು ಅದೇ ಕಾಲಕ್ಕೆ ಪರಿಸರ ಸಂರಕ್ಷಣೆಗಳು ನಮ್ಮ ಆದ್ಯತೆಗಳಾಗಬೇಕಿವೆ.

ಪರಿಸರ ಸ್ನೇಹಿಯಾದ ಜಾಗತೀಕರಣದ ವಿಶ್ವ ನಮ್ಮದಾಗಬೇಕಿದೆ. ಇದನ್ನು ಕೇವಲ ಭಾರತೀಯರು ಮಾತ್ರವಲ್ಲದೇ ವಿಶ್ವದ ಎಲ್ಲ ಜನತೆಗೂ ಹೇಳಬಯಸುತ್ತೇನೆ. "ಚೀನಾ ಬದಲಾಯಿಸಲು ನನಗೆ ಸಹಾಯ ಮಾಡಿ" ಎಂಬ ಸಂದೇಶದ ನನ್ನ ವಿಡಿಯೋವನ್ನು ವಿಶ್ವದ ಎಲ್ಲ ಜನರಿಗೂ ತಲುಪುವಂತೆ ಮಾಡಿ. ಈ ಮೂಲಕ ಚೀನಾ ಮೇಲೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಒತ್ತಡ ಹೆಚ್ಚಾಗುವಂತೆ ಮಾಡಿ.

ನೀವೆಲ್ಲ ವ್ಯಾಲೆಟ್​ ಸೋಲ್ಜರ್​ಗಳಾಗಿರುವಿರಿ. ನಿಮ್ಮ ಕರ್ತವ್ಯವನ್ನು ನಿಭಾಯಿಸಲು ಮುಂದಾಗಿ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.