ಶಿಮ್ಲಾ: ಲಾಕ್ಡೌನ್ ನಡುವೆ ಅನುಮತಿ ಇಲ್ಲದೆ ಪ್ರಯಾಣಿಸಿದ ಆರೋಪದ ಮೇಲೆ ಮಾಜಿ ಐಎಎಸ್ ಅಧಿಕಾರಿ ಶಾನನ್ ಮತ್ತು ಅವರ ಮಗಳು, ಸ್ನೇಹಿತರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬುಧವಾರ ಶಿಮ್ಲಾ ಜಿಲ್ಲೆಯ ಸುನ್ನಿ ತಹಸಿಲ್‌ನಲ್ಲಿ ಪೊಲೀಸರು 2 ವಾಹನಗಳನ್ನು ತಡೆದು ಪರಿಶೀಲನೆ ನಡೆಸಿದ್ದು, ಶಾನನ್ ಸೇರಿದಂತೆ 8 ಜನರು ಪ್ರಯಾಣಿಸುತ್ತಿದ್ದರು ಎಂದು ತಿಳಿದುಬಮದಿದೆ.
ಪೊಲೀಸ್ ತನಿಖೆಯ ಪ್ರಕಾರ, ಅವರೆಲ್ಲ ಅನುಮತಿ ಪಡೆಯದೆ ಪ್ರಯಾಣಿಸುತ್ತಿದ್ದರು. ತಹಸಿಲ್ ನಿಂದ 35 ಕಿ.ಮೀ ದೂರದಲ್ಲಿರುವ ಶಾಲಿ ಟಿಬ್ಬಾ ದೇವಸ್ಥಾನದ ಚಾರಣದ ನಂತರ ಹಿಂದಿರುಗುತ್ತಿದ್ದ ವೇಳೆ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ.
ಸದ್ಯ ಶಾನನ್ ಸೇರಿದಂತೆ ಎಲ್ಲ ಎಂಟು ಜನರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ ಎಂದು ಉಪ ಪೊಲೀಸ್ ವರಿಷ್ಟಾಧಿಕಾರಿ ದಿನೇಶ್ ಶರ್ಮಾ ತಿಳಿಸಿದ್ದಾರೆ.