ETV Bharat / bharat

ಪ್ರವಾಹ ಪೀಡಿತ ದಕ್ಷಿಣ ಏಷ್ಯಾ ರಾಷ್ಟ್ರಗಳಿಗೆ 1.65 ದಶಲಕ್ಷ ಯುರೋ ನೆರವು ನೀಡಿದ ಐರೋಪ್ಯ ಒಕ್ಕೂಟ - humanitarian aid

ದಕ್ಷಿಣ ಏಷ್ಯಾದಾದ್ಯಂತ ಮಾನ್ಸೂನ್ ಮಳೆ ಈ ವರ್ಷ ವಿನಾಶಕಾರಿಯಾಗಿದೆ ಮತ್ತು ಈ ತುರ್ತು ಕೊಡುಗೆ ಆಶ್ರಯ, ವಸ್ತುಗಳು ಮತ್ತು ಜೀವನೋಪಾಯದ ಮೂಲಗಳನ್ನು ಕಳೆದುಕೊಂಡವರಿಗೆ ನಿರ್ಣಾಯಕ ಬೆಂಬಲವನ್ನು ನೀಡುವಲ್ಲಿ ಸಹಾಯ ಮಾಡುತ್ತದೆ ಎಂದು ಏಷ್ಯಾ ಮತ್ತು ಪೆಸಿಫಿಕ್ ದೇಶಗಳಲ್ಲಿ ಇಯು ಮಾನವೀಯ ಕಾರ್ಯಕ್ರಮಗಳ ಮೇಲ್ವಿಚಾರಣೆ ನಡೆಸುತ್ತಿರುವ ತಾಹೇನಿ ತಮ್ಮಣ್ಣಗೋಡ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ನೆರವು ನೀಡಿದ ಇಯು
ನೆರವು ನೀಡಿದ ಇಯು
author img

By

Published : Aug 14, 2020, 11:20 PM IST

ನವದೆಹಲಿ: ಭಾರತ, ಬಾಂಗ್ಲಾದೇಶ ಮತ್ತು ನೇಪಾಳದ ಕೆಲವು ಭಾಗಗಳು ಭೀಕರ ಪ್ರವಾಹ ಮತ್ತು ಭೂಕುಸಿತಕ್ಕೆ ತುತ್ತಾಗಿರುವ ಕಾರಣ ಐರೋಪ್ಯ ಒಕ್ಕೂಟ (ಇಯು) ಮಂಗಳವಾರ ದಕ್ಷಿಣ ಏಷ್ಯಾದ ಈ ರಾಷ್ಟ್ರಗಳಿಗೆ 1.65 ದಶಲಕ್ಷ ಯುರೋ ನೆರವು ಘೋಷಿಸಿದೆ.

ಮೇ ತಿಂಗಳಲ್ಲಿ ಭಾರತ ಮತ್ತು ಬಾಂಗ್ಲಾದೇಶಕ್ಕೆ ತೀವ್ರ ಹಾನಿಯುಂಟು ಮಾಡಿದ್ದ ಅಂಫಾನ್ ಚಂಡಮಾರುತ ಸೇರಿದಂತೆ ಪ್ರಕೃತಿ ವಿಕೋಪಕ್ಕೆ ಹಲವಾರು ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ. ಆದ್ದರಿಂದ ಈ ವರ್ಷದ ಆರಂಭದಲ್ಲಿ ಇಯು 1.8 ದಶಲಕ್ಷ ಯುರೋಗಳಷ್ಟು ಸಹಾಯವನ್ನು ಘೋಷಿಸಿತ್ತು. ಇದೀಗ ನೆರೆಯಿಂದ ಹಾನಿಗೊಳಗಾದ ದಕ್ಷಿಣ ಏಷ್ಯಾದ ರಾಷ್ಟ್ರಗಳಿಗೆ 1.65 ದಶಲಕ್ಷ ಯುರೋ ಸಹಾಯ ನೀಡಿದೆ.

ದಕ್ಷಿಣ ಏಷ್ಯಾದಾದ್ಯಂತ ಮಾನ್ಸೂನ್ ಮಳೆ ಈ ವರ್ಷ ವಿನಾಶಕಾರಿಯಾಗಿದೆ ಮತ್ತು ಈ ತುರ್ತು ಕೊಡುಗೆ ಆಶ್ರಯ, ವಸ್ತುಗಳು ಮತ್ತು ಜೀವನೋಪಾಯದ ಮೂಲಗಳನ್ನು ಕಳೆದುಕೊಂಡವರಿಗೆ ನಿರ್ಣಾಯಕ ಬೆಂಬಲವನ್ನು ನೀಡುವಲ್ಲಿ ಸಹಾಯ ಮಾಡುತ್ತದೆ ಎಂದು ಏಷ್ಯಾ ಮತ್ತು ಫೆಸಿಫಿಕ್ ದೇಶಗಳಲ್ಲಿ ಇಯು ಮಾನವೀಯ ಕಾರ್ಯಕ್ರಮಗಳ ಮೇಲ್ವಿಚಾರಣೆ ನಡೆಸುತ್ತಿರುವ ತಾಹೇನಿ ತಮ್ಮಣ್ಣಗೋಡ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಪ್ರವಾಹವು ಸುಮಾರು 17.5 ದಶಲಕ್ಷ ಜನರ ಮೇಲೆ ಪರಿಣಾಮ ಬೀರಿದೆ. ಮನೆಗಳನ್ನು ನಾಶಪಡಿಸಿದೆ. ಜಾನುವಾರು ಮತ್ತು ಕೃಷಿ ಜಮೀನುಗಳಂತಹ ಜೀವನೋಪಾಯ ಮತ್ತು ರಸ್ತೆಗಳು, ಆಸ್ಪತ್ರೆಗಳು, ಶಾಲೆಗಳು ಸೇರಿದಂತೆ ಪ್ರಮುಖ ಮೂಲಸೌಕರ್ಯಗಳಿಗೆ ಹಾನಿಯುಂಟು ಮಾಡಿದೆ.

1.65 ದಶಲಕ್ಷ ಯುರೋಗಳಲ್ಲಿ, 1 ದಶಲಕ್ಷ ಯುರೋಗಳು ಬಾಂಗ್ಲಾದೇಶದ ತುರ್ತು ಮಾನವೀಯ ಅಗತ್ಯಗಳನ್ನು ಪರಿಹರಿಸಲು ಮೀಸಲಿಡಲಾಗುವುದು. ಅಲ್ಲಿ ಎರಡು ದಶಲಕ್ಷಕ್ಕೂ ಹೆಚ್ಚು ಜನರಿಗೆ ಆಹಾರ, ನೀರು, ನೈರ್ಮಲ್ಯ ಮತ್ತು ತುರ್ತು ಆಶ್ರಯದ ಅಗತ್ಯವಿದೆ ಎಂದು ಇಯು ಹೇಳಿದೆ.

ಭಾರತದಲ್ಲಿ ಆಹಾರ ಮತ್ತು ಜೀವನೋಪಾಯದ ನೆರವು, ತುರ್ತು ಪರಿಹಾರ ಸರಬರಾಜು ಮತ್ತು ನೀರು, ನೈರ್ಮಲ್ಯ ಸೇವೆಗಳನ್ನು ಒದಗಿಸಲು 5,00,000 ಯುರೋಗಳನ್ನು ಬಳಸಲಾಗುವುದು ಎಂದು ಹೇಳಿದೆ.

ಇಲ್ಲಿಯವರೆಗೆ, ಈ ವರ್ಷದ ಮಾನ್ಸೂನ್ ಮಳೆ 10.9 ದಶಲಕ್ಷ ನಷ್ಟ ಉಂಟು ಮಾಡಿದೆ ಮತ್ತು ಜಾಗತಿಕ ಕೊರೊನಾ ವೈರಸ್ ಸಾಂಕ್ರಾಮಿಕದ ಪರಿಣಾಮಗಳನ್ನು ನಿಭಾಯಿಸಲು ಹೆಣಗಾಡುತ್ತಿರುವಾಗಲೇ ಬಂದೊದಗಿದ ಪ್ರವಾಹವೂ ಜನರನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡಿದೆ ಎಂದು ತಿಳಿಸಿದೆ.

ನೇಪಾಳದಲ್ಲಿ ಸುರಿದ ಭಾರೀ ಮಳೆಯಿಂದ ದೇಶಾದ್ಯಂತ ಭೂಕುಸಿತವನ್ನು ಉಂಟುಮಾಡಿದೆ. ಪರಿಣಾಮ ಸಾವಿರಾರು ಜನರನ್ನು ಸ್ಥಳಾಂತರಿಸಲಾಗಿದೆ. ಇದರಿಂದಾಗಿ ನೀರು, ನೈರ್ಮಲ್ಯ, ಆಶ್ರಯ ಮತ್ತು ಅಗತ್ಯ ಗೃಹೋಪಯೋಗಿ ವಸ್ತುಗಳ ಅವಶ್ಯಕತೆಯನ್ನು ಪರಿಹರಿಸಲು 1,50,000 ಯುರೋಗಳನ್ನು ಬಳಸಲಾಗುತ್ತದೆ ಎಂದಿದೆ.

ಯುರೋಪಿಯನ್ ಸಿವಿಲ್ ಪ್ರೊಟೆಕ್ಷನ್ ಮತ್ತು ಹ್ಯುಮಾನಿಟೇರಿಯನ್ ಏಡ್ ಆಪರೇಶನ್ಸ್ (ಇಸಿಒಒ) ಮೂಲಕ, ಇಯು ಪ್ರತಿವರ್ಷ ವಿಪತ್ತುಗಳಿಂದ ಹಾನಿಗೊಳಗಾದ 120 ದಶಲಕ್ಷಕ್ಕೂ ಹೆಚ್ಚು ಸಂತ್ರಸ್ತರಿಗೆ ಸಹಾಯ ಮಾಡುತ್ತದೆ.

ಈಟಿವಿ ಭಾರತದ ಪ್ರಶ್ನೆಗಳಿಗೆ ಇ-ಮೇಲ್ ಪ್ರತಿಕ್ರಿಯೆಯಲ್ಲಿ, ಇಯು ಸಹಾಯಕ್ಕಾಗಿ ವಿಸ್ತರಿಸಿದ ಮೊತ್ತವನ್ನು ಈಗಾಗಲೇ ಸರ್ಕಾರೇತರ ಸಂಸ್ಥೆ (ಎನ್‌ಜಿಒ) ಪಾಲುದಾರರ ಮೂಲಕ ಬಳಸಿಕೊಳ್ಳಲಾಗುತ್ತಿದೆ ಎಂದು ಹಿರಿಯ ECHO ಅಧಿಕಾರಿ ತಿಳಿಸಿದ್ದಾರೆ.

ECHO ವಿಶ್ವದಾದ್ಯಂತ ಮಾನವೀಯ ನೆರವು ನೀಡಲು 200 ಕ್ಕೂ ಹೆಚ್ಚು ಪಾಲುದಾರ ಸಂಸ್ಥೆಗಳೊಂದಿಗೆ ಕೆಲಸ ಮಾಡುತ್ತದೆ. ಮಾನವೀಯ ಪಾಲುದಾರರಲ್ಲಿ ಎನ್‌ಜಿಒಗಳು, ಅಂತಾರಾಷ್ಟ್ರೀಯ ಸಂಸ್ಥೆಗಳು, ಯುಎನ್ ಏಜೆನ್ಸಿಗಳು ಮತ್ತು ಇಯು ಸದಸ್ಯ ರಾಷ್ಟ್ರಗಳ ವಿಶೇಷ ಏಜೆನ್ಸಿಗಳು ಸೇರಿವೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.