ETV Bharat / bharat

ಕೋವಿಡ್-19 ಬಗ್ಗೆ ಪಾರದರ್ಶಕತೆಗೆ ಭದ್ರತಾಮಂಡಳಿಯಲ್ಲಿ ಒತ್ತಾಯಿಸಲಿದೆ ಈಸ್ಟೋನಿಯಾ

author img

By

Published : Apr 30, 2020, 11:45 AM IST

ಸಾಂಕ್ರಾಮಿಕ ರೋಗ ಕೊರೊನಾ ವೈರಸ್​ ಉಲ್ಬಣಗೊಂಡ ಬಳಿಕ ಹೆಚ್ಚಳಗೊಂಡ ಸೈಬರ್ ದಾಳಿಗಳು: ತಂತ್ರಜ್ಞಾನ ಹಾಗೂ ದತ್ತಾಂಶ ಖಾಸಗಿತನ ನಡುವಣ ಸಮತೋಲನಕ್ಕೆ ಈಸ್ಟೋನಿಯಾ ರಾಯಭಾರಿ ಆಗ್ರಹಿಸಿದ್ದಾರೆ.

corona news
ಕೊರೊನಾ

ವಿಶ್ವ ಸಂಸ್ಥೆಯ ಭದ್ರತಾ ಮಂಡಳಿಯ ನೇತೃತ್ವನ್ನು ಬಾಲ್ಟಿಕ್ ದೇಶಗಳಲ್ಲೊಂದಾದ ಈಸ್ಟೋನಿಯಾ ಮೇ ತಿಂಗಳಿನಿಂದ ವಹಿಸಿಕೊಳ್ಳಲಿದೆ. ಶಾಶ್ವತ ಸದಸ್ಯ ಅಲ್ಲದ ಸದಸ್ಯ ದೇಶವಾಗಿ 2 ವರ್ಷಗಳ ಅವಧಿಗೆ (2020-22) ಆಯ್ಕೆಗೊಂಡ ಈಸ್ಟೋನಿಯಾ, ಕೋವಿಡ್-19 ಸಾಂಕ್ರಾಮಿಕ ರೋಗಕ್ಕೆ ಸಂಬಂಧಿಸಿದಂತೆ, "ಮುಕ್ತತೆ" ಹಾಗೂ "ಪಾರದರ್ಶಕತೆ"ಗೆ ಭದ್ರತಾ ಮಂಡಳಿಯಲ್ಲಿ ಹೆಚ್ಚಿನ ಒತ್ತು ನೀಡಲಿದೆ ಎನ್ನುತ್ತಾರೆ ಭಾರತದಲ್ಲಿರುವ ಈಸ್ಟೋನಿಯಾ ರಾಯಭಾರಿ. ಹಿರಿಯ ಪತ್ರಕರ್ತೆ ಸ್ಮಿತಾ ಶರ್ಮಗೆ ನೀಡಿದ ಎಕ್ಲೂಸಿವ್ ಸಂದರ್ಶನದಲ್ಲಿ, ಈಸ್ಟೋನಿಯಾ ರಾಯಭಾರಿ ಕತ್ರಿನ್ ಕಿವಿ ಈ ಬಗ್ಗೆ ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ. "ಈಸ್ಟೋನಿಯಾ ಕೋವಿಡ್- 19ರ ಬಗ್ಗೆ ಭದ್ರತಾ ಮಂಡಳಿಯಲ್ಲಿ ಚರ್ಚೆಯಾಗಬೇಕೆಂಬ ಪ್ರಸ್ತಾಪವನ್ನು ಬಹಳ ಪ್ರಬಲವಾಗಿ ಮಂಡಿಸುತ್ತಿತ್ತು. ಅಂತಿಮವಾಗಿ ಮಾರ್ಚ್‍ನಲ್ಲಿ ನಡೆದ ಸಭೆಯಲ್ಲಿ, ಡೊಮಿಕನ್ ರಿಪಬ್ಲಿಕ್‍ನ ಅಧ್ಯಕ್ಷತೆಯಲ್ಲಿ ಈ ಬಗ್ಗೆ ಚರ್ಚೆ ನಡೆಯಿತು.

ವರದಿಗಳ ಪ್ರಕಾರ, ಈ ಸಭೆ ಅಪೂರ್ಣವಾಗಿ ಉಳಿಯಿತು. ಸಭೆಯಲ್ಲಿ ಅಮೇರಿಕ, ಚೀನಾವನ್ನು ತರಾಟೆಗೆ ತೆಗೆದುಕೊಂಡು ಕೋವಿಡ್-19ಗೆ ಸಂಬಂಧಿಸಿದಂತೆ ಪಾರದರ್ಶಕತೆ ಕಾಪಾಡಿಕೊಳ್ಳುವುದರ ಜತೆಗೆ ಸಾರ್ವಜನಿಕ ದತ್ತಾಂಶಗಳನ್ನು ಹಂಚಿಕೊಳ್ಳುವಂತೆ ಆಗ್ರಹಿಸಿತು. ಸಭೆಯಲ್ಲಿ ಬೀಜಿಂಗ್ ಯಾರನ್ನೋ ಬಲಿಪಶುವಾಗಿಸುವುದರ ಬದಲು, ಜಾಗತಿಕ ಸಹಕಾರದೊಂದಿಗೆ ಕೋವಿಡ್-19 ವಿರುದ್ಧ ಹೋರಾಡಬೇಕಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿತು.

"ಮೇ ತಿಂಗಳಿನಲ್ಲಿ ನಾವು ಖಂಡಿತವಾಗಿ ಕೋವಿಡ್-19 ವಿಪತ್ತು ವಿಷಯವನ್ನು ಪ್ರಸ್ತಾಪಿಸಲಿದ್ದೇವೆ. ನಾವು ಈ ಬಗೆಗಿನ ಮಾಹಿತಿಯನ್ನು ಹಂಚಿಕೊಳ್ಳುವಂತೆ ಎಲ್ಲಾ ದೇಶಗಳನ್ನು ಕೋರುತ್ತೇವೆ. ಏಕೆಂದರೆ, ಈ ಹಂತದಲ್ಲಿ, ನಮಗೆ ಸಂಪೂರ್ಣ ಚಿತ್ರಣ ದೊರಕಿಲ್ಲ. ಈ ಕಾರಣದಿಂದಲೇ ಈ ಹಂತದಲ್ಲಿ ಯಾವುದೇ ನಿರ್ಣಯಕ್ಕೆ ಬರಲು ಸಾಧ್ಯವಾಗುತ್ತಿಲ್ಲ. ಈ ಬಗೆಗಿನ ವಿಚಾರಗಳಲ್ಲಿ ನಾವು ತುಂಬಾ ಸೂಕ್ಷ್ಮವಾಗಿರಬೇಕು ಹಾಗೂ ಸೈಬರ್ ಸುರಕ್ಷತೆ ಬಗ್ಗೆ ಹೆಚ್ಚಿನ ಗಮನ ನೀಡಬೇಕಿದೆ. ಈ ಸಾಂಕ್ರಾಮಿಕ ರೋಗ ವಿಶ್ವದಾದ್ಯಂತ ಹಬ್ಬಲು ಆರಂಭವಾದ ಬಳಿಕ ಸೈಬರ್ ಆಕ್ರಮಣಗಳ ಸಂಖ್ಯೆ ಕೂಡಾ ಹೆಚ್ಚಿದೆ," ಎಂದು ಅವರು ತಿಳಿಸಿದರು.

ಮೇ22ರಂದು, ಈಸ್ಟೋನಿಯ ಪ್ರಧಾನಿ ವಿಶ್ವ ಭದ್ರತಾ ಮಂಡಳಿಯ ಅನೌಪಚಾರಿಕ ಸಭೆಯ ಅಧ್ಯಕ್ಷತೆ ವಹಿಸಲಿದ್ದಾರೆ. ಈ ಸಭೆ ನಮ್ಮ ನಡುವಣ ಹಿತಾಸಕ್ತಿಗಳನ್ನು ಬಗೆಹರಿಸುವುದು ಹಾಗೂ ಸೈಬರ್ ಸುರಕ್ಷತೆ ಮೇಲಿನದಾಗಿರುತ್ತದೆ. ವಿಶ್ವ ಸಂಸ್ಥೆಯ ಎಲ್ಲಾ ಸದಸ್ಯ ರಾಷ್ಟ್ರಗಳಿಗೆ ಈ ಸಭೆ ಮುಕ್ತವಾಗಿರುತ್ತದೆ. ವಿಶ್ವಸಂಸ್ಥೆ ಸಭೆಯ ನಡಾವಳಿಗಳ ಬಗ್ಗೆ ಈಗಾಗಲೆ ಈಸ್ಟೋನಿಯಾದ ವಿದೇಶಾಂಗ ಸಚಿವರು, ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಜೈಶಂಕರ್ ಜೊತೆಗೆ ಚರ್ಚಿಸಿದ್ದಾರೆ.

ಚೀನಾ ಪರ ವಾಲಿದ ಆರೋಪಗಳ ಹಿನ್ನೆಲೆಯಲ್ಲಿ ವಿಶ್ವ ಆರೋಗ್ಯ ಸಂಸ್ಥೆ (WHO)ಗೆ ತನ್ನ ಹಣಕಾಸು ನೆರವನ್ನು ಹಿಂತೆಗೆದುಕೊಳ್ಳುವ ಅಮೆರಿಕ ಸಂಯುಕ್ತ ಸಂಸ್ಥಾನದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಿರ್ಧಾರದ ಬಗ್ಗೆ ಪ್ರಶ್ನಿಸಿದಾಗ, ಈ ಸಮಯದಲ್ಲಿ ಎಲ್ಲಾ ರಾಷ್ಟ್ರಗಳು ಪರಸ್ಪರ ಸಹಕಾರದೊಂದಿಗೆ ಕಾರ್ಯನಿರ್ವಹಿಸಬೇಕು ಹಾಗೂ ಪರಸ್ಪರ ದೂಷಣೆಯಲ್ಲಿ ಸಮಯ ಹಾಗೂ ಶಕ್ತಿಯನ್ನು ವ್ಯಯಿಸಬಾರದು ಎಂದು ಅವರು ತಿಳಿಸಿದರು.

ತನ್ನ ಹಣಕಾಸು ನೆರವನ್ನು ಹಿಂತೆಗೆದುಕೊಳ್ಳುವುದಾಗಿ ಅಮೆರಿಕ ಸಂಯುಕ್ತ ಸಂಸ್ಥಾನ ಘೋಷಿಸಿದ ಬಳಿಕ, ಈಸ್ಟೋನಿಯಾ, ವಿಶ್ವ ಆರೋಗ್ಯ ಸಂಸ್ಥೆಗೆ ತನ್ನ ಪಾಲಿನ ಹಣದ ಮೊತ್ತವನ್ನು ಹೆಚ್ಚಿಸಿದೆ.

"ವಿಶ್ವದೆಲ್ಲೆಡೆ, ಘರ್ಷಣೆ ನಡೆಯುತ್ತಿರುವ ಪ್ರದೇಶಗಳಲ್ಲಿ ಕದನ ವಿರಾಮ ಘೋಷಿಸಬೇಕು ಎನ್ನುವ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿಗಳ ಕರೆಯನ್ನು ಕೂಡಾ ನಾವು ಬೆಂಬಲಿಸುತ್ತೇವೆ. ಇದು ಅತಿದೊಡ್ಡ ಪರಿಣಾಮವನ್ನು ಮಾನವೀಯತೆಯ, ಮಾನವ ಕುಲದ ಮೇಲೆ ಬೀರುತ್ತಿದೆ. ನಾವು ಮನುಕುಲವನ್ನು ಈ ಸಾಂಕ್ರಾಮಿಕ ರೋಗದಿಂದ ರಕ್ಷಿಸಬೇಕಿದೆ. ವಿಶ್ವದ ಎಲ್ಲಾ ಸಮಸ್ಯಾತ್ಮಕ ಪ್ರದೇಶಗಳಿಗೂ ನಾವು ತಲುಪಬೇಕಿದೆ," ಎಂದು ರಾಯಭಾರಿ ಕಿವಿ ತಿಳಿಸಿದರು.

"ಸ್ಕೈಪ್​"ಅನ್ನು ವಿಶ್ವಕ್ಕೆ ನೀಡಿದ ರಾಷ್ಟ್ರವಾದ ಈಸ್ಟೋನಿಯಾ ಹಲವಾರು ತಂತ್ರಜ್ಞಾನ ಆಧಾರಿತ ನವೋದ್ಯಮಗಳಿಗೆ ತವರು ಮನೆ. ಕೊರೊನಾ ವೈರಸ್ ಬಿಕ್ಕಟ್ಟು ಮುನ್ನವೇ, ಈಸ್ಟೋನಿಯಾ ಭಾರತದ ಜತಗೆ ಹಲವಾರು ಸವಾಲುಗಳಿಗೆ ಡಿಜಿಟಲ್ ಪರಿಹಾರ ಕಂಡುಹಿಡಿಯಲು ಕೆಲಸ ಮಾಡುತ್ತಿತ್ತು. ಭಾರತ ಹಾಗೂ ಈಸ್ಟೋನಿಯಾ ದೇಶಗಳು ಡಿಜಿಟಲೈಸೇಶನ್ ಹಾಗೂ ಸೈಬರ್ ಸುರಕ್ಷತೆಗೆ ಸಂಬಂಧಿಸಿದಂತೆ, ಮೂರು ಒಪ್ಪಂದಗಳಿಗೆ ಸಹಿ ಹಾಕಿವೆ. ಜೊತೆಗೆ ಇ-ಆಡಳಿತಕ್ಕೆ ಸಂಬಂಧಿಸಿ, ತೆಲಂಗಾಣ ಹಾಗೂ ನಾಗಾಲ್ಯಾಂಡ್ ಸರ್ಕಾರಗಳ ಜೊತೆಗೆ ಈಸ್ಟೋನಿಯಾ ಕೆಲಸ ಮಾಡುತ್ತಿದೆ.

ಸುಮಾರು 13 ಲಕ್ಷ ಜನಸಂಖ್ಯೆ (1.3 ಮಿಲಿಯನ್)ಇರುವ ಈಸ್ಟೋನಿಯಾ ದೇಶದಲ್ಲಿ ಈವರೆಗೆ ಸುಮಾರು 1,000 ಮಂದಿ ಕೋವಿಡ್ ರೋಗಕ್ಕೆ ತುತ್ತಾಗಿದ್ದಾರೆ ಹಾಗೂ 50 ಮಂದಿ ಸಾವನ್ನಪ್ಪಿದ್ದಾರೆ. ಆದರೆ ದೇಶ, ಸೋಂಕಿತರ ಸಂಪರ್ಕ ಪತ್ತೆಗೆ ಯಾವುದೇ ಮೊಬೈಲ್ ಅಪ್ಲಿಕೇಶನ್ ಉಪಯೋಗಿಸುತ್ತಿಲ್ಲ.

"ದತ್ತಾಂಶ ಸುರಕ್ಷತೆಯ ಕಾರಣಕ್ಕಾಗಿ ಹಾಗೂ ವೈಯಕ್ತಿಕ ಮಾಹಿತಿಗಳನ್ನು ಸುರಕ್ಷಿತವಾಗಿಡಲು, ನಾವು ಸೋಂಕಿತರ ಸಂಪರ್ಕ ಪತ್ತೆ ಹಚ್ಚಲು ಮೊಬೈಲ್ ಅಪ್ಲಿಕೇಶನ್‍ಗಳನ್ನು ಬಳಸುತ್ತಿಲ್ಲ. ತಂತ್ರಜ್ಞಾನ ಹಾಗೂ ಕಣ್ಗಾವಲು ನಡುವೆ ಸಮತೋಲನ ಸಾಧಿಸುವ ದೊಡ್ಡ ಸವಾಲಿನ ಪ್ರಶ್ನೆ ನಮ್ಮ ಮುಂದಿದೆ. ನಮ್ಮ ದೇಶದಲ್ಲಿ ನಾವು ಕಾನೂನು ಹಾಗೂ ಖಾಸಗಿ ಮಾಹಿತಿ-ದತ್ತಾಂಶ ರಕ್ಷಣೆಗೆ ಅತಿ ಹೆಚ್ಚಿನ ಗೌರವ ನೀಡುತ್ತೇವೆ. ವಿಶೇಷ ಸಂದರ್ಭಗಳಲ್ಲಿ ಸಂಪರ್ಕಿತರನ್ನು ಪತ್ತೆ ಮಾಡಲು ಅವಕಾಶ ಮಾಡಿಕೊಡಲು ಒಂದು ರೀತಿಯ ಸಮತೋಲನ ಸಾಧಿಸಬೇಕಿದೆ. ಆದರೆ ಈವರೆಗೆ ನಾವು ಇದನ್ನು ಉಪಯೋಗಿಸಿಲ್ಲ," ಎನ್ನುತ್ತಾರೆ ಅವರು.

ಕೋವಿಡ್-19ರ ವಿರುದ್ಧದ ಹೋರಾಟದಲ್ಲಿ ಮಹತ್ವದ ಪಾತ್ರವಹಿಸುತ್ತಿರುವ ಭಾರತ ಸರ್ಕಾರದ ಮಹತ್ವಾಕಾಂಕ್ಷೆಯ ಆರೋಗ್ಯ ಸೇತು ಆ್ಯಪ್ ಬಗ್ಗೆ ವ್ಯಕ್ತವಾಗಿರುವ ಕಳವಳದ ಬಗ್ಗೆ ಪ್ರಶ್ನಿಸಿದದಾಗ ಅವರು ಈ ಬಗ್ಗೆ ಕಾನೂನು ರಕ್ಷಣಾ ಚೌಕಟ್ಟಿನ ಅಗತ್ಯತೆಯನ್ನು ಒತ್ತಿಹೇಳಿದರು. "ಈಸ್ಟೋನಿಯಾದಲ್ಲಿ ನಾವು ಬಲವಾದ ಕಾನೂನು ಚೌಕಟ್ಟುಗಳನ್ನು ಹೊಂದಿದ್ದೇವೆ. ಡಿಜಿಟಲೈಸೇಶನ್ ಪ್ರಕ್ರಿಯೆ ಆರಂಭವಾದಂದಿನಿಂದಲೇ ನಮ್ಮ ಸರ್ಕಾರ ಈ ಬಗ್ಗೆಗಿನ ಕಾನೂನುಗಳನ್ನು ರೂಪಿಸುತ್ತಿದೆ. ಹೊಸ ತಂತ್ರಜ್ಞಾನ ಅವಿಷ್ಕರಿಸುವುದು ಮಾತ್ರವಲ್ಲ; ಡಿಜಿಟಲ್ ದತ್ತಾಂಶಗಳ ರಕ್ಷಣೆ ಹಾಗೂ ಕಾನೂನು ಬದ್ಧ ಬಳಕೆಗೆ ಮಾತ್ರ ಸರ್ಕಾರಗಳು ಅವಕಾಶ ನೀಡಬೇಕು," ಎಂದು ಅವರು ಅಭಿಪ್ರಾಯಪಟ್ಟರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.