ETV Bharat / bharat

ಒಂದು ಗುಂಪು ಮಾಡಿದ ತಪ್ಪಿಗೆ ಇಡೀ ಸಮುದಾಯವನ್ನೇ ದೂಷಿಸುವುದು ಸರಿಯಲ್ಲ: ಸಚಿವ ನಖ್ವಿ

author img

By

Published : Apr 23, 2020, 8:47 PM IST

ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಮುಖ್ತಾರ್​​ ಅಬ್ಬಾಸ್ ಮಾತನಾಡಿ, ಒಂದು ಗುಂಪು ಮಾಡಿದ ತಪ್ಪಿಗೆ ಇಡೀ ಸಮುದಾಯವನ್ನೇ ಹೊಣೆಗಾರರನ್ನಾಗಿ ಮಾಡುವುದು ಸರಿಯಲ್ಲ ಎಂದಿದ್ದಾರೆ.

ಮುಖ್ತಾರ್​​ ಅಬ್ಬಾಸ್​​ ನಖ್ವಿ
ಮುಖ್ತಾರ್​​ ಅಬ್ಬಾಸ್​​ ನಖ್ವಿ

ನವದೆಹಲಿ: ಒಂದು ಗುಂಪು ಮಾಡಿದ ತಪ್ಪಿಗೆ ಇಡೀ ಸಮುದಾಯವನ್ನೇ ಹೊಣೆಗಾರರನ್ನಾಗಿ ಮಾಡುವುದು ಸರಿಯಲ್ಲ ಎಂದು ಅಲ್ಪಸಂಖ್ಯಾತ ವ್ಯವಹಾರಗಳ ಖಾತೆ ಸಚಿವ ಮುಖ್ತಾರ್​​ ಅಬ್ಬಾಸ್​​ ನಖ್ವಿ ಹೇಳಿದ್ದಾರೆ.

ಪವಿತ್ರ ರಂಜಾನ್ ತಿಂಗಳಲ್ಲಿ ಮುಸ್ಲಿಂ ಸಮುದಾಯ ಲಾಕ್​​ಡೌನ್ ಮಾರ್ಗಸೂಚಿ ಅನುಸರಿಸುತ್ತಾರೆ ಎಂದು ಸಂದರ್ಶನವೊಂದರಲ್ಲಿ ನಖ್ವಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಮುಖ್ತಾರ್​​ ಅಬ್ಬಾಸ್​​ ನಖ್ವಿ
ಮುಖ್ತಾರ್​​ ಅಬ್ಬಾಸ್​​ ನಖ್ವಿ

ರಂಜಾನ್ (ಇಸ್ಲಾಮಿಕ್ ಪವಿತ್ರ ತಿಂಗಳು) ಸಮಯದಲ್ಲಿ ಇಸ್ಲಾಂ ಸಮುದಾಯ ಮಸೀದಿ, ಧಾರ್ಮಿಕ ಸ್ಥಳಗಳಲ್ಲಿ ಸಭೆ ಸೇರುವುದಿಲ್ಲ ಮತ್ತು 'ಇಫ್ತಾರ್' (ಉಪವಾಸ ಮುರಿಯುವುದು) ಮತ್ತು 'ತರಾವೀಹ್' ಮುಂತಾದ ಆಚರಣೆಗಳನ್ನು ಮಾಡುವುದಿಲ್ಲ ಎಂದು ಮುಸ್ಲಿಂ ಸಂಘಟನೆಗಳು ಸರ್ವಾನುಮತದಿಂದ ನಿರ್ಧರಿಸಿವೆ ಎಂದು ಅವರು ಹೇಳಿದರು.

ಶುಕ್ರವಾರ ಅಥವಾ ಶನಿವಾರ ಸಂಜೆ ಪ್ರಾರಂಭವಾಗುವ ರಂಜಾನ್ ತಿಂಗಳಲ್ಲಿ ರಾಜ್ಯ ವಕ್ಫ್ ಮಂಡಳಿಯ ಅಧಿಕಾರಿಗಳು, ಸಾಮಾಜಿಕ ಮತ್ತು ಧಾರ್ಮಿಕ ಮುಖಂಡರು, ಲಾಕ್‌ಡೌನ್ ಮತ್ತು ಸಾಮಾಜಿಕ ದೂರ ಮಾರ್ಗಸೂಚಿಗಳನ್ನು ಪಾಲಿಸುವ ಕುರಿತು ಇಮಾಮ್‌ಗಳೊಂದಿಗೆ ಮಾತನಾಡಿದ್ದೇನೆ ಮತ್ತು ಅವರು ಜನರಲ್ಲಿ ಜಾಗೃತಿ ಮೂಡಿಸಲು ಪ್ರಾರಂಭಿಸಿದ್ದಾರೆ ಎಂದು ನಖ್ವಿ ಹೇಳಿದರು.

ನಿಜಾಮುದ್ದೀನ್‌ನಲ್ಲಿ ನಡೆದ ತಬ್ಲೀಘಿ ಜಮಾತ್ ಘಟನೆಯೊಂದಿಗೆ ಹೆಚ್ಚಿನ ಸಂಖ್ಯೆಯ ಪ್ರಕರಣಗಳು ಪತ್ತೆಯಾದ ನಂತರ ಕೆಲವರು ಸಾಂಕ್ರಾಮಿಕ ಹರಡುವಿಕೆಗೆ ಮುಸ್ಲಿಮರನ್ನು ದೂಷಿಸುವ ಬಗ್ಗೆ ಕೇಳಿದಾಗ, ಒಂದು ಸಂಘಟನೆ ಅಥವಾ ಒಬ್ಬ ವ್ಯಕ್ತಿಯ ಅಪರಾಧಕ್ಕೆ ಇಡೀ ಸಮುದಾಯವನ್ನು ಹೊಣೆಗಾರರನ್ನಾಗಿ ಮಾಡಲು ಸಾಧ್ಯವಿಲ್ಲ ಎಂದು ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.