ETV Bharat / bharat

ಜೈಲಿಗೆ ಕಳುಹಿಸಿರುವ ಸಿಟ್ಟು... ಮಕ್ಕಳೆದುರೇ ವಿವಾಹಿತ ಮೇಲೆ ಕೊಡಲಿಯಿಂದ ಹಲ್ಲೆ! ವಿಡಿಯೋ...

ಇತ್ತೀಚೆಗೆ ಜಾಮೀನಿನ ಮೇಲೆ ಬಿಡುಗಡೆಯಾದ ರಾಹುಲ್, ತನ್ನನ್ನು ಜೈಲಿಗೆ ಕಳುಹಿಸಿದ ವಿಮಲಾ ಮೇಲೆ ಕೊಡಲಿಯಿಂದ ಹಲ್ಲೆ ಮಾಡಿ ಪರಾರಿಯಾಗಿದ್ದಾನೆ. ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

axe
axe
author img

By

Published : Feb 3, 2021, 1:00 PM IST

Updated : Feb 4, 2021, 9:44 AM IST

ತೆಲಂಗಾಣ: ರಂಗಾರೆಡ್ಡಿ ಜಿಲ್ಲೆಯ ಗುರಮ್‌ಗುಡ ಶಿಕ್ಷಕರ ಕಾಲೋನಿಯಲ್ಲಿ ಮಹಿಳೆಯೊಬ್ಬಳ ಮೇಲೆ ಕೊಡಲಿಯಿಂದ ಹಲ್ಲೆ ಮಾಡಲಾಗಿದೆ. ಇಲ್ಲಿನ ವಿಮಲಾ ಎಂಬ ವಿವಾಹಿತ ಮಹಿಳೆಯ ಮೇಲೆ ಅಬ್ದುಲ್ಲಾಪುರ ಮೇಟ್‌ನ ರಾಹುಲ್ ಗೌಡ್ ಹಲ್ಲೆ ನಡೆಸಿದ್ದಾನೆ.

ಪೊಲೀಸರಿಗೆ ದೂರು ನೀಡಿದ್ದಕ್ಕೆ ಮಹಿಳೆ ಮೇಲೆ ಕೊಡಲಿಯಿಂದ ಹಲ್ಲೆ..!

ಆರೋಪಿ ರಾಹುಲ್ ಮತ್ತು ಹಲ್ಲೆಗೀಡಾದ ಮಹಿಳೆಯ ಪತಿ ಸ್ನೇಹಿತರಾಗಿದ್ದು, ರಾಹುಲ್ ತನ್ನ ಸ್ನೇಹಿತನ ಆಗಾಗ ಮನೆಗೆ ಭೇಟಿ ನೀಡುತ್ತಿದ್ದ. ಈ ಸಂದರ್ಭದಲ್ಲಿ ರಾಹುಲ್ ಮತ್ತು ವಿಮಲಾ ನಡುವೆ ಸ್ನೇಹ ಬೆಳೆಯಿತು. ಅವರ ಸ್ನೇಹವನ್ನು ಗಮನಿಸಿದ ವಿಮಲಾ ಪತಿ ರವಿಕುಮಾರ್, ರಾಹುಲ್​ನಿಂದ ದೂರವಿರುವಂತೆ ಪತ್ನಿಗೆ ತಿಳಿಸಿದ್ದರು.

ವಿಮಲಾ ಅಂದಿನಿಂದಲೂ ತನ್ನ ಗಂಡನೊಂದಿಗೆ ಶಾಂತಿಯುತವಾಗಿ ಬದುಕುತ್ತಿದ್ದಾಳೆ. ಆದರೆ ರಾಹುಲ್ ಕಿರುಕುಳ ಹೆಚ್ಚಾದ ಕಾರಣ ವಿಮಲಾ ಈ ಕುರಿತು ತನ್ನ ಪತಿಗೆ ತಿಳಿಸಿದ್ದು, ಕಳೆದ ವರ್ಷ ಡಿಸೆಂಬರ್ 27ರಂದು ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ಪ್ರಕರಣ ದಾಖಲಿಸಿ ರಾಹುಲ್​ನನ್ನು ಬಂಧಿಸಿದ್ದರು.

ಇತ್ತೀಚೆಗೆ ಜಾಮೀನಿನ ಮೇಲೆ ಬಿಡುಗಡೆಯಾದ ರಾಹುಲ್, ತನ್ನನ್ನು ಜೈಲಿಗೆ ಕಳುಹಿಸಿದ ವಿಮಲಾ ಮೇಲೆ ಕೊಡಲಿಯಿಂದ ಹಲ್ಲೆ ಮಾಡಿ ಪರಾರಿಯಾಗಿದ್ದಾನೆ. ಸ್ಥಳೀಯರು ಕೂಡಲೇ ಆಕೆಯನ್ನು ಬಿಎನ್ ರೆಡ್ಡಿ ಖಾಸಗಿ ಆಸ್ಪತ್ರೆಗೆ ಸೇರಿಸಿದ್ದು, ಪ್ರಸ್ತುತ ಅವರ ಸ್ಥಿತಿ ಸ್ಥಿರವಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಪೊಲೀಸರು ನಾಲ್ಕು ಗುಂಪುಗಳನ್ನು ರಚಿಸಿ, ರಾಹುಲ್​ಗಾಗಿ ಹುಡುಕಾಟ ನಡೆಸಿ, ಬಂಧಿಸಿದ್ದಾರೆ.

Last Updated : Feb 4, 2021, 9:44 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.