ಬಿಹಾರವು ಮೊದಲಿನಿಂದಲೂ ತನ್ನ ಅವಕಾಶವಾದಿ ರಾಜಕೀಯಗಳಿಗೆ ಮಾತ್ರವಲ್ಲದೆ ಚುನಾವಣಾ ಸಮಯದಲ್ಲಿ ತಾವು ಬೆಂಬಲಿಸುವ ಅಭ್ಯರ್ಥಿಗಳನ್ನು ಗೆಲ್ಲಿಸುವ ಸಲುವಾಗಿ, ಯಾವುದೇ ಮಟ್ಟಕ್ಕೆ ಹೋಗುವ ಹತಾಶವಾದಿ ಗುಂಪುಗಳಿಗೂ ಹೆಸರುವಾಸಿಯಾಗಿದೆ.
ಈ ಬಾರಿ ಕೋವಿಡ್-19 ಸಾಂಕ್ರಾಮಿಕ ರೋಗದ ನಡುವೆ ಚುನಾವಣೆ ನಡೆಸುವುದು 'ನಿರ್ವಚನ ಸದನ್'ಗೆ (ಚುನಾವಣಾ ಆಯೋಗ) ಅದರ ಸಾಮರ್ಥ್ಯ ಪರೀಕ್ಷೆಯ ಸಮಯವಾಗಲಿದೆ. ಈ ವರ್ಷ ಮುಕ್ತ ಮತ್ತು ಪಾರದರ್ಶಕ ಚುನಾವಣಾ ಕಾರ್ಯತಂತ್ರ ನಡೆಸಲು ಎಷ್ಟರಮಟ್ಟಿಗೆ ಸಾಧ್ಯವಾಗಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.
243 ಆಸನಗಳಿರುವ ಬಿಹಾರ ವಿಧಾನಸಭೆಯ ಅವಧಿ 2020ರ ನವೆಂಬರ್ ವೇಳೆಗೆ ಕೊನೆಯಾಗಲಿದೆ. ರಾಜ್ಯ ಪ್ರಸ್ತುತ ಒಟ್ಟು ಶೇ. 7.20 ಮತದಾರರ ಸಾಮರ್ಥ್ಯವನ್ನು ಹೊಂದಿದೆ. ಈಗಾಗಲೇ ಕೊರೊನಾ ಹಾವಳಿ ಕಡಿಮೆಯಾಗುವವರೆಗೆ ಚುನಾವಣೆಯನ್ನು ಮುಂದೂಡುವ ಸಾಧ್ಯತೆಯನ್ನು ಪರಿಶೀಲಿಸುವಂತೆ ವಿವಿಧ ರಾಜಕೀಯ ಪಕ್ಷಗಳು ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸಿವೆ.
ಇತ್ತೀಚಿನ ವರದಿಗಳ ಪ್ರಕಾರ, ಕೋವಿಡ್ ಈಗಾಗಲೇ ಸರಿಸುಮಾರು 17 ಸಾವಿರ ಸೋಂಕಿತರು ಇದ್ದು, 500 ಸೋಂಕಿತರು ಬಲಿಯಾಗಿದ್ದಾರೆ. ಚುನಾವಣೆ ನಡೆಸಲು ಇದು ಸರಿಯಾದ ಸಮಯವಲ್ಲ ಅದಕ್ಕಾಗಿ ಚುನಾವಣೆ ಪ್ರಕ್ರಿಯೆಯನ್ನು ಮುಂದೂಡಬೇಕು ಎಂದು ಎಲ್ಲಾ ವಿರೋಧ ಪಕ್ಷಗಳು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿವೆ.
ರಾಜ್ಯ ಚುನಾವಣಾ ಆಯೋಗವು ಅಂತಹ ಎಲ್ಲಾ ಅನುಮಾನಗಳನ್ನು ತಿಳಿಗೊಳಿಸುತ್ತಿದೆ. ಚುನಾವಣಾ ಪ್ರಕ್ರಿಯೆಯನ್ನು ಕಾರ್ಯಗತಗೊಳಿಸುವಾಗ ಸೂಕ್ತ ಕ್ರಮಗಳು ಮತ್ತು ಮುನ್ನೆಚ್ಚರಿಕೆಗಳನ್ನು ಕೈಗೊಳ್ಳುವ ಮೂಲಕ ಈ ಪ್ರಜಾಪ್ರಭುತ್ವದ ಅತಿಮುಖ್ಯ ಕಾರ್ಯವಿಧಾನವನ್ನು ನಡೆಸಲು ಒಲವು ತೋರಿಸುತ್ತಿದೆ. ಕಳೆದ ವರ್ಷ ಸೆಪ್ಟೆಂಬರ್ 8ರಂದು ಅಧಿಸೂಚನೆ ಹೊರಡಿಸುವುದರೊಂದಿಗೆ ಐದು ಹಂತದ ಚುನಾವಣಾ ನಿರ್ವಹಣಾ ನಡವಳಿಕೆಯನ್ನು ಪೂರ್ಣಗೊಳಿಸಿದ ಚುನಾವಣಾ ಆಯೋಗವು ಪ್ರಸ್ತುತ ಕೊರೊನಾ ಸಾಂಕ್ರಾಮಿಕದಂತಹ ಚಂಡಮಾರುತದ ಸಂದರ್ಭದಲ್ಲಿ ವಿಶಿಷ್ಟವಾದ ಚುನಾವಣಾ ಸಂಹಿತೆಯನ್ನು ಅನಾವರಣಗೊಳಿಸಿದೆ.
ಚುನಾವಣಾ ಆಯೋಗ ಸಾಮಾನ್ಯ ಚುನಾವಣಾ ನೀತಿ ಸಂಹಿತೆಯನ್ನು ಈಗಾಗಲೇ ಬಹಿರಂಗಪಡಿಸಿದ್ದು, ನಾಮನಿರ್ದೇಶನ ಕಾರ್ಯಕ್ರಮ, ಪ್ರಚಾರ, ರಸ್ತೆ ಪ್ರದರ್ಶನಗಳು, ರ್‍ಯಾಲಿಗಳು, ಸ್ಪಷ್ಟ ಕರ್ತವ್ಯ ನಿಷೇಧ ಮತ್ತು ಸಾರ್ವಜನಿಕ ಸಭೆ ಆವರಣಗಳಲ್ಲಿ ಕಟ್ಟುನಿಟ್ಟಾಗಿ ಪಾಲಿಸಬೇಕಾದ ದೈಹಿಕ ಅಂತರದ ನಿಯಮಗಳನ್ನು ಕ್ರೋಢೀಕರಿಸಿದೆ. ಎಲ್ಲಾ ಮತದಾರರಿಗೂ ಕೈಗವಸುಗಳ ಕಡ್ಡಾಯ ಬಳಕೆ, ಕೊರೊನಾ ಸೋಂಕಿತರಿಗೆ ಪ್ರತ್ಯೇಕವಾಗಿ ಮತದಾನದ ಸಮಯದ ನಿಗದಿಪಡಿಸುವುದು, ನಿಯಮಗಳನ್ನು ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮಗಳನ್ನು ಹೊಸ ನಿಯಮ ಪುಸ್ತಕದಲ್ಲಿ ಸೇರಿಸಲಾಗುವುದು ಎಂದು ಚುನಾವಣೆ ಆಯೋಗ ತಿಳಿಸಿದೆ.
ಬಿಹಾರದ ಚುನಾವಣಾ ಆಯೋಗವು ಕೈಗೆತ್ತಿಕೊಳ್ಳುತ್ತಿರುವ ಇಂತಹ ಕ್ರಮಗಳ ಯಶಸ್ಸಿಗೆ ಎಲ್ಲಾ ರಾಜಕೀಯ ಪಕ್ಷಗಳ ಸಕ್ರಿಯ ಬೆಂಬಲ ಅತ್ಯಗತ್ಯ. ಪ್ರತಿ ಮತಗಟ್ಟೆಯಲ್ಲಿನ ಮತದಾರರ ಸಂಖ್ಯೆಯನ್ನು ಕೇವಲ ಒಂದು ಸಾವಿರಕ್ಕೆ ಇಳಿಸುವುದು ಮತ್ತು ಬೂತ್‌ಗಳ ಸಂಖ್ಯೆಯನ್ನು ಒಂದು ಲಕ್ಷಕ್ಕೆ ಹೆಚ್ಚಿಸುವಂತಹ ಮುಂದಿನ ಕ್ರಮಗಳು ಅಂತಹ ಕ್ರಮಗಳಲ್ಲಿ ಒಂದಾಗಿದ್ದು, ಇದು ‘ಸಾಮಾಜಿಕ ಅಂತರ' ಕಾಪಾಡುವ ಮುನ್ನೆಚ್ಚರಿಕೆ ಕ್ರಮವನ್ನು ಅನುಸರಿಸಲಾಗಿದೆಯೆ ಎಂಬುದನ್ನೂ ಹೊಂದಿದೆ.
ಕೊರೊನಾ ಸಾಂಕ್ರಾಮಿಕ ಪಿಡುಗು ಕಾಳ್ಗಿಚ್ಚಿನಂತೆ ಹರಡುತ್ತಿರುವುದರ ಹೊರತಾಗಿಯೂ ನಿಶ್ಚಿತ ಸಮಯಕ್ಕೆ ಸರಿಯಾಗಿ ವಿಶ್ವದ 34 ದೇಶಗಳಲ್ಲಿ ಚುನಾವಣೆಗಳು ನಡೆದವು. 10,000ಕ್ಕೂ ಹೆಚ್ಚು ಪ್ರಕರಣಗಳು ಮತ್ತು 220 ಸಾವುಗಳ ನಡುವೆಯೂ ಸಹ, ದಕ್ಷಿಣ ಕೊರಿಯಾ ತನ್ನ ಸಾರ್ವತ್ರಿಕ ಚುನಾವಣೆಯನ್ನು ಸಾಕಷ್ಟು ಯಶಸ್ವಿಯಾಗಿ ನಡೆಸಿದೆ. ಆದರೆ, ಶ್ರೀಲಂಕಾ ಇತ್ತೀಚೆಗೆ ತನ್ನ ಸಂಸತ್ ಚುನಾವಣೆಯನ್ನು ಸಾಕಷ್ಟು ಸೌಹಾರ್ದಯುತವಾಗಿ ನಡೆಸಿದೆ.
ವಿದೇಶಿ ಆಕ್ರಮಣ ಅಥವಾ ಆಂತರಿಕ ದಂಗೆಯಂತಹ ವಿಪರೀತ ಸಂದರ್ಭಗಳನ್ನು ಹೊರತುಪಡಿಸಿ ಚುನಾವಣೆಗಳನ್ನು ಮುಂದೂಡಬಾರದು ಎಂಬ ಸಾಂವಿಧಾನಿಕ ನಿಯಮವು ಕೋವಿಡ್ ಬಿಕ್ಕಟ್ಟಿನ ಪ್ರಸ್ತುತ ಪರಿಸ್ಥಿತಿಯನ್ನು ಎದುರಿಸುವ ಅನಿವಾರ್ಯತೆಯನ್ನು ಬೋಧಿಸುತ್ತಿದೆ. ಎಲೆಕ್ಟ್ರಾನಿಕ್ ಮತದಾನ ಯಂತ್ರಗಳ ಬದಲು ಬ್ಯಾಲೆಟ್ ಪೇಪರ್ ಮೂಲಕ ಚುನಾವಣೆ ನಡೆಸುವುದು, ಸಾಮೂಹಿಕ ರ್‍ಯಾಲಿಗಳಿಗೆ ಅವಕಾಶ ನೀಡುವುದು ಮತ್ತು ಪ್ರಚಾರ ಕಾರ್ಯದ ಖರ್ಚಿನ ಮಿತಿ ಹೆಚ್ಚಿಸುವುದರ ಜೊತೆಗೆ ರಾಜ್ಯಾದ್ಯಂತ ಏಕಕಾಲದಲ್ಲಿ ಚುನಾವಣೆ ನಡೆಸುವುದರೊಂದಿಗೆ ಮತದಾರರಿಗೆ ನೀಡುವ ಸುರಕ್ಷತಾ ಉಪಕರಣಗಳ ವೆಚ್ಚವನ್ನು ಅಭ್ಯರ್ಥಿಯ ಚುನಾವಣಾ ಖರ್ಚಿನಲ್ಲಿ ಸೇರಿಸಬಾರದು ಎಂದು ಹಲವು ರಾಜಕೀಯ ಪಕ್ಷಗಳು ಆಯೋಗವನ್ನು ಒತ್ತಾಯಿಸುತ್ತಿವೆ.
ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಲ್ಲಿ ಬಿಜೆಪಿ ವರ್ಚುವಲ್ ರ್‍ಯಾಲಿಗಳನ್ನು ಹೆಚ್ಚಿಸುತ್ತಿದ್ದರೂ, ಅಂತರ್ಜಾಲ ಮತದಾನದ ಸೌಲಭ್ಯವು ಬಿಹಾರದ ಕೇವಲ 36 ಪ್ರತಿಶತದಷ್ಟು ಜನರಿಗೆ ಮಾತ್ರ ಲಭ್ಯವಿರುವುದು ಮತ್ತು ಒಟ್ಟು ಜನಸಂಖ್ಯೆಯ ಶೇ. 24ರಷ್ಟು ಜನರಿಗೆ ಮಾತ್ರ ಮೊಬೈಲ್ ಸೇವೆಗಳ ಲಭ್ಯತೆಯಿರುವುದು ಪಕ್ಷದ ಪ್ರಚಾರಕ್ಕೆ ಅನಾನುಕೂಲವಾಗಿದೆ ಎನ್ನುವುದು ಸಾಬೀತಾಗಿದೆ.
ಚುನಾವಣಾ ಆಯೋಗವು ಈ ಪರಿಸ್ಥಿತಿಯಲ್ಲಿ ಗ್ರಾಮೀಣ ಮತ್ತು ಅರೆ ನಗರ ಪ್ರದೇಶಗಳಲ್ಲಿ ಭೌತಿಕ ವಿಧಾನಗಳ ಮೂಲಕ ಪ್ರಚಾರಕ್ಕೆ ಸ್ಪಷ್ಟ ಮಿತಿಗಳನ್ನು ನಿಗದಿಪಡಿಸಿದೆ. ಅದು ಬಿಜೆಪಿಗೆ ಆ ಪ್ರದೇಶಗಳಲ್ಲಿ ತಾನು ನಡೆಸಲು ಉದ್ದೇಶಿಸಿರುವ ಭೌತಿಕ ರ್‍ಯಾಲಿಗಳನ್ನು ನಡೆಸಲು ಅಷ್ಟೇನೂ ಸಹಕಾರಿಯಾಗಿಲ್ಲ. ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಲ್ಲಿ ವರ್ಚುವಲ್ ರ್‍ಯಾಲಿಗಳಿಗೆ ಅನುಮತಿ ನೀಡುವುದರಿಂದ ಬಿಜೆಪಿಗೆ ಮಾತ್ರ ಲಾಭವಾಗುತ್ತದೆ ಎಂಬ ಆಕ್ಷೇಪಣೆಯನ್ನು ಗಮನಿಸಿದರೆ, ಅದು ತನ್ನ ಸಂಪನ್ಮೂಲಗಳನ್ನು ಪೂರ್ಣ ಸಾಮರ್ಥ್ಯಕ್ಕೆ ಬಳಸಿಕೊಳ್ಳಬಲ್ಲದು, ಟಿವಿ ಮತ್ತು ಇತರೆ ಮಾಧ್ಯಮಗಳ ಮೂಲಕ ವಿಶಾಲ ಅಭಿಯಾನವನ್ನು ಸಾಮಾನ್ಯ ರ್‍ಯಾಲಿಗಳಿಗೆ ಬದಲಿಯಾಗಿ ಬಳಸಬಹುದು.
ಹೊಸ ನಿಯಮ ಪುಸ್ತಕದಲ್ಲಿ ಚುನಾವಣಾ ಆಯೋಗವು ನಿಗದಿಪಡಿಸಿರುವ ಕೋವಿಡ್ ನಿಯಮಗಳನ್ನು ಉಲ್ಲಂಘಿಸುವವರ ವಿರುದ್ಧ ರಾಜ್ಯ ಪೊಲೀಸರು ಕ್ರಮ ಕೈಗೊಳ್ಳುವುದರಿಂದ, ಆದೇಶದ ಮೇರೆಗೆ ಕಾರ್ಯನಿರ್ವಹಿಸುವ ಪೊಲೀಸರು ಪ್ರಸ್ತುತ ರಾಜ್ಯ ಸರ್ಕಾರದ ಆಶಯಗಳಿಗೆ ತಕ್ಕಂತೆ ಕೆಲಸ ಮಾಡಲು ತಮ್ಮ ಮೇಲೆ ಸುಳ್ಳು ಆರೋಪ ಹೊರಿಸುವ ಸಾಧ್ಯತೆಯಿದೆ ಎಂದು ಪ್ರತಿಪಕ್ಷಗಳು ಕಳವಳ ವ್ಯಕ್ತಪಡಿಸಿವೆ.
ಅಂತಿಮವಾಗಿ, ಮುಖ್ಯವಾದುದು ಯಾವುದೆಂದರೆ ಬಿಹಾರದ ‘ಚುನಾವಣಾ ಕಣ’ದಲ್ಲಿ ಅನುಸರಿಸಬೇಕಾದ ಚುನಾವಣಾ ಕಾರ್ಯ ವಿಧಾನದ ಭಾಗವಾಗಿ ಹೊಸ ನಿಯಮ ಪುಸ್ತಕವನ್ನು ಶೀಘ್ರದಲ್ಲೇ ಅನಾವರಣಗೊಳಿಸಲಾಗುವುದು.