ನವದೆಹಲಿ: ರಸಗೊಬ್ಬರ ಹಗರಣದಲ್ಲಿ ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ಸಹೋದರ ಅಗ್ರಸೇನ್ ಗೆಹ್ಲೋಟ್ಗೆ ಜಾರಿ ನಿರ್ದೇಶನಾಲಯ ಸಮನ್ಸ್ ನೀಡಿದ್ದು, ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ.
ಮೂಲಗಳ ಪ್ರಕಾರ ಇಂದು ದೆಹಲಿಯ ಜಾರಿ ನಿರ್ದೇಶನಾಲಯ ಕಚೇರಿಗೆ ಅಗ್ರಸೇನ್ ಗೆಹ್ಲೋಟ್ ಹಾಜರಾಗಲಿದ್ದು, ಅಧಿಕಾರಿಗಳು ವಿಚಾರಣೆ ನಡೆಸಲಿದ್ದಾರೆ.
ಹಿಂದಿನ ವಾರ ರಾಜಸ್ಥಾನ ಹಾಗೂ ವಿವಿಧ ರಾಜ್ಯಗಳ 13 ಪ್ರದೇಶಗಳಲ್ಲಿನ ಅಗ್ರಸೇನ್ ಗೆಹ್ಲೋಟ್ ಅವರ ಆಸ್ತಿಯ ಮೇಲೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಳಿ ನಡೆಸಿದ್ದರು. ರಾಜಸ್ಥಾನ, ಪಶ್ಚಿಮ ಬಂಗಾಳ, ಗುಜರಾತ್, ದೆಹಲಿಯಲ್ಲಿ ಅಗ್ರಸೇನ್ಗೆ ಸಂಬಂಧಿಸಿದ ಆಸ್ತಿ ಇತ್ತು.
ಅಕ್ರಮ ಹಣ ಸಾಗಣೆ ನಿಯಂತ್ರಣ ಕಾಯ್ದೆ (ಪಿಎಂಎಲ್ಎ) ಅಡಿ ಜಾರಿ ನಿರ್ದೇಶನಾಲಯ ತನಿಖೆ ಕೈಗೊಂಡಿತ್ತು. ರಸಗೊಬ್ಬರ ಹಗರಣದ ಆರೋಪದಲ್ಲಿ ತೆರಿಗೆ ಇಲಾಖೆಯ ದೂರು ಆಧರಿಸಿ ಜಾರಿ ನಿರ್ದೇಶನಾಲಯ ತನಿಖೆ ನಡೆಸುತ್ತಿದೆ.
ಜಾರಿ ನಿರ್ದೇಶನಾಲಯದ ಅಧಿಕಾರಿ ಅನುಪಮ್ ಕೃಷಿ ಹೇಳುವಂತೆ ಅಗ್ರಸೇನ್ ಗೆಹ್ಲೋಟ್ ಒಡೆತನಕ್ಕೆ ಸೇರಿದ ಕಂಪನಿಯೊಂದು ನಿಷೇಧಿತ ರಸಗೊಬ್ಬರವನ್ನು ರಫ್ತು ಮಾಡಿರುವ ಆರೋಪ ಹೊಂದಿದ್ದಾರೆ.
ಮತ್ತೊಂದು ಮೂಲದ ಪ್ರಕಾರ ಅಗ್ರಸೇನ್ ಗೆಹ್ಲೋಟ್ 2007 - 09ರಲ್ಲಿ ಐಪಿಎಲ್ನ ಅಧಿಕೃತ ಡೀಲರ್ ಕೂಡಾ ಆಗಿದ್ದರು ಎಂದು ಹೇಳಲಾಗುತ್ತಿದೆ.