ನವದೆಹಲಿ: ವಿಡಿಯೋಕಾನ್ ಸಂಸ್ಥೆಗೆ ನಿಯಮ ಬಾಹಿರವಾಗಿ ನೀಡಿದ ಸಾಲ ಪ್ರಕರಣ ಸಂಬಂಧ ಐಸಿಐಸಿಐ ಬ್ಯಾಂಕ್ನ ಮಾಜಿ ಸಿಇಒ ಹಾಗೂ ವ್ಯವಸ್ಥಾಪಕ ನಿರ್ದೇಶಕಿ ಚಂದಾ ಕೊಚ್ಚರ್ ಅವರಿಗೆ ಸೇರಿದ ₹ 78 ಕೋಟಿ ಮೌಲ್ಯದ ಆಸ್ತಿಯನ್ನು ಜಾರಿ ನಿರ್ದೇಶನಾಲಯ (ಇಡಿ) ಮುಟ್ಟುಗೋಲು ಹಾಕಿಕೊಂಡಿದೆ.
ಮುಂಬೈನಲ್ಲಿ ಪ್ರಸ್ತುತ ವಾಸವಿರುವ ಕೊಚ್ಚರ್ ಅವರ ಮೂರು ಪ್ಲಾಟ್ಗಳನ್ನು ಹಾಗೂ ಪತಿಗೆ ಸೇರಿದ ಫಾರ್ಮ್ಹೌಸ್ ಅನ್ನು ಇಡಿ ಅಧಿಕಾರಿಗಳು ಶುಕ್ರವಾರ ಜಪ್ತಿ ಮಾಡಿದ್ದಾರೆ.
-
Enforcement Directorate has attached properties of former MD & CEO of ICICI Bank Chanda Kochhar and her family. Total assets worth Rs. 78 crore (book value) have been attached. This includes her flat in Mumbai and some properties of the company of his husband. pic.twitter.com/Hbxtu0CHhr
— ANI (@ANI) January 10, 2020 " class="align-text-top noRightClick twitterSection" data="
">Enforcement Directorate has attached properties of former MD & CEO of ICICI Bank Chanda Kochhar and her family. Total assets worth Rs. 78 crore (book value) have been attached. This includes her flat in Mumbai and some properties of the company of his husband. pic.twitter.com/Hbxtu0CHhr
— ANI (@ANI) January 10, 2020Enforcement Directorate has attached properties of former MD & CEO of ICICI Bank Chanda Kochhar and her family. Total assets worth Rs. 78 crore (book value) have been attached. This includes her flat in Mumbai and some properties of the company of his husband. pic.twitter.com/Hbxtu0CHhr
— ANI (@ANI) January 10, 2020
ಅಧಿಕಾರಿಗಳು ಜಪ್ತಿ ಮಾಡಿಕೊಂಡಿರುವ ಆಸ್ತಿ ಬೆಲೆ ₹ 78 ಕೋಟಿಯಾದರೆ, ಅದರ ಮಾರುಕಟ್ಟೆ ಮೌಲ್ಯ ₹ 600 ಕೋಟಿಗೂ ಹೆಚ್ಚಿದೆ. ಮುಂಬೈನ ಚರ್ಚ್‌ಗೇಟ್‌ನ ಸಿಸಿಐ ಚೇಂಬರ್ಸ್‌ನಲ್ಲಿರುವ ಫ್ಲಾಟ್ ಅನ್ನು ಅವರು ಅಕ್ರಮವಾಗಿ ಸಂಪಾದನೆ ಮಾಡಿದ್ದಾರೆ ಎಂದು ಇಡಿ ಹೇಳಿದೆ. ಕೊಚ್ಚರ್ ಅವರು 1997ರಿಂದ ಇಲ್ಲಿಯೇ ವಾಸಿಸುತ್ತಿದ್ದಾರೆ.
ಪ್ರಕರಣ ಏನು?
2012ರಲ್ಲಿ ವಿಡಿಯೋಕಾನ್ ಸಂಸ್ಥೆಗೆ ₹ 3,250 ಕೋಟಿ ಸಾಲ ನೀಡುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ ಎಂಬ ಆರೋಪ ಚಂದಾ ಕೊಚ್ಚರ್ ಮೇಲಿದೆ. ಇದಾದ ಹತ್ತು ತಿಂಗಳ ನಂತರ ಅಂದರೆ ಸಿಬಿಐ ಪ್ರಾಥಮಿಕ ತನಿಖೆ ಕೈಗೊಂಡಿತ್ತು. ಭ್ರಷ್ಟಾಚಾರ ಮತ್ತು ಅಕ್ರಮ ಹಣ ವರ್ಗಾವಣೆ ಆರೋಪದಲ್ಲಿ ಕೊಚ್ಚರ್ ಅವರನ್ನು ಸಿಬಿಐ ಮತ್ತು ಇಡಿ ತನಿಖೆ ನಡೆಸುತ್ತಿವೆ. ಸಿಬಿಐ ಸಲ್ಲಿಸಿರುವ ಎಫ್‌ಐಆರ್‌ನಲ್ಲಿ ಪತಿ ದೀಪಕ್ ಕೊಚ್ಚರ್ ಹೆಸರೂ ಒಳಗೊಂಡಿದೆ.
ಚಂದಾ ಕೊಚ್ಚರ್ ಮೇಲೆ ಈ ಆರೋಪ ಕೇಳಿ ಬರುತ್ತಿದ್ದಂತೆ 2018ರ ಅಕ್ಟೋಬರ್ 4ರಂದು ಐಸಿಐಸಿಐ ಬ್ಯಾಂಕ್ನ ಸಿಇಒ ಹಾಗೂ ಎಂಡಿ ಸ್ಥಾನದಿಂದ ಕೆಳಗಿಳಿದರು. ವಿಡಿಯೋಕಾನ್ ಸಂಸ್ಥೆಗೆ ಸಾಲ ನೀಡಲು ತನ್ನ ಪತಿಯ ಪಾತ್ರವಿಲ್ಲ ಎಂದು 2019ರ ಮಾರ್ಚ್ನಲ್ಲಿ ಆಕೆ ಹೇಳಿದ್ದರು.
ಕೊಚ್ಚರ್ ಅವರ ಪತಿ ಮತ್ತು ವಿಡಿಯೋಕಾನ್ ಸಂಸ್ಥೆಯ ವೇಣುಗೋಪಾಲ್ ಧೂತ್ ಹೊರದೇಶಕ್ಕೆ ಪರಾರಿಯಾಗಬಾರದು ಎಂಬ ಕಾರಣಕ್ಕೆ ಅವರ ವಿರುದ್ಧ ಕಳೆದ ವರ್ಷ ಎಲ್ಲಾ ವಿಮಾನ ನಿಲ್ದಾಣಗಳಿಗೆ ಸಿಬಿಐ ಲುಕ್ ಔಟ್ ಸುತ್ತೋಲೆಯನ್ನು ಹೊರಡಿಸಿತ್ತು.