ETV Bharat / bharat

ಪಾಕಿಸ್ತಾನದ ಕುರಿತು ಆರ್ಥಿಕ ಕಾರ್ಯ ಪಡೆ ಸಭೆ - ಎಫ್ಎಟಿಎಫ್ ಸುದ್ದಿ

ಆರ್ಥಿಕ ಕಾರ್ಯಪಡೆಯ ಪ್ರಾಥಮಿಕ ಸಭೆ ಜೂನ್ ನಲ್ಲಿ ಅದರ ಮುಖ್ಯ ಕಚೇರಿ ಪ್ಯಾರಿಸ್ ನಲ್ಲಿ ನಡೆಯಲಿದೆ. ಈ ಮೊದಲು ಅಂದರೆ ಜೂನ್ 2018 ರಂದು ಪಾಕಿಸ್ತಾನವನ್ನು ಗ್ರೇ ಪಟ್ಟಿಗೆ ಸೇರಿಸಿ , ಆರ್ಥಿಕ ಕಾರ್ಯಪಡೆ ಮಾರ್ಗಸೂಚಿಗಳಿಗೆ ಅನುಸಾರವಾಗಿ ಕಟ್ಟುನಿಟ್ಟಾಗಿ ಕಾರ್ಯನಿರ್ವಹಿಸುವುದರಲ್ಲಿ ಸ್ಪಷ್ಟ ಪ್ರಗತಿಯನ್ನು ಸಾಬೀತುಪಡಿಸಲು 2019 ರ ಅಕ್ಟೋಬರ್ ವರೆಗೆ ಸಮಯವನ್ನು ನೀಡಲಾಗಿತ್ತು.

economic-forces-meeting-on-pakistan
ಪಾಕಿಸ್ತಾನದ ಕುರಿತು ಆರ್ಥಿಕ ಕಾರ್ಯ ಪಡೆಯ ಸಭೆ
author img

By

Published : Feb 26, 2020, 11:43 PM IST

ಆರ್ಥಿಕ ಕಾರ್ಯಪಡೆ (ಎಫ್ಎಟಿಎಫ್)ಪಾಕಿಸ್ತಾನವನ್ನು ಜೂನ್ 2020 ರ ತನಕ ಇತರ ಮೇಲ್ವಿಚಾರಣೆ ನ್ಯಾಯವ್ಯಾಪ್ತಿ ಪಟ್ಟಿಗೆ ಸೇರಿಸಲು ನಿರ್ಧಾರ ಕ್ಯೆಗೊಂಡಿತ್ತು. ಇದನ್ನು ಸಾಮಾನ್ಯವಾಗಿ ಗ್ರೇ ಪಟ್ಟಿ ಎಂದು ಕರೆಯಾಗುತ್ತದೆ. ಆರ್ಥಿಕ ಕಾರ್ಯಪಡೆಯ ಪ್ರಾಥಮಿಕ ಸಭೆ ಜೂನ್ ನಲ್ಲಿ ಅದರ ಮುಖ್ಯ ಕಚೇರಿ ಪ್ಯಾರಿಸ್ ನಲ್ಲಿ ನಡೆಯಲಿದೆ. ಈ ಮೊದಲು ಅಂದರೆ ಜೂನ್ 2018 ರಂದು ಪಾಕಿಸ್ತಾನವನ್ನು ಗ್ರೇ ಪಟ್ಟಿಗೆ ಸೇರಿಸಿ , ಆರ್ಥಿಕ ಕಾರ್ಯಪಡೆ ಮಾರ್ಗಸೂಚಿಗಳಿಗೆ ಅನುಸಾರವಾಗಿ ಕಟ್ಟುನಿಟ್ಟಾಗಿ ಕಾರ್ಯನಿರ್ವಹಿಸುವುದರಲ್ಲಿ ಸ್ಪಷ್ಟ ಪ್ರಗತಿಯನ್ನು ಸಾಬೀತುಪಡಿಸಲು 2019 ರ ಅಕ್ಟೋಬರ್ ವರೆಗೆ ಸಮಯವನ್ನು ನೀಡಲಾಗಿತ್ತು.

ಪಾಕಿಸ್ತಾನದ ಮೇಲೆ ಇತ್ತೀಚಿನ ನಿರ್ಧಾರದ ಪ್ರಭಾವವನ್ನು ಅರ್ಥಮಾಡಿಕೊಳ್ಳಲು, ನಾವು ಆರ್ಥಿಕ ಕಾರ್ಯಪಡೆ, ಅದರ ಸದಸ್ಯತ್ವ, ಕೆಲಸ ಮತ್ತು ಕಾರ್ಯವಿಧಾನಗಳ ಬಗ್ಗೆ ಒಂದು ಕಲ್ಪನೆಯನ್ನು ಹೊಂದಿರಬೇಕಾಗುತ್ತದೆ. ಅಂತಾರಾಷ್ಟ್ರೀಯ ಹಣಕಾಸು ವ್ಯವಸ್ಥೆಯ ಸಮಗ್ರತೆಗೆ ಧಕ್ಕೆ ತರುವ ಹಣ ವರ್ಗಾವಣೆ, ಭಯೋತ್ಪಾದಕ ಕೃತ್ಯಕ್ಕೆ ಹಣಕಾಸು ಪೂರೈಕೆ ಮತ್ತು ಇತರ ಸಂಬಂಧಿತ ಬೆದರಿಕೆಗಳನ್ನು ಹತ್ತಿಕ್ಕಲು, ಪರಿಣಾಮಕಾರಿ ಕಾನೂನು, ನಿಯಂತ್ರಕ ವ್ಯವಸ್ಥೆ ಅನುಷ್ಠಾನ ಗೊಳಿಸುವ ಉದ್ದೇಶದಿಂದ 1989 ರಲ್ಲಿ ಆರ್ಥಿಕ ಕಾರ್ಯಪಡೆಯನ್ನು ಸ್ಥಾಪಿಸಲಾಯಿತು. ಇದರ ಮುಖ್ಯ ಉದ್ದೇಶ, ಅಕ್ರಮ ಹಣಕಾಸು ವರ್ಗಾವಣೆ (ಎಎಮ್ ಎಲ್ ) ಮತ್ತು ಭಯೋತ್ಪಾದನೆಗೆ ಹಣಕಾಸು ಪೂರೈಕೆ ನಿಷೇಧಕ್ಕೆ (ಸಿಎಫ್ ಟಿ ) ಸದಸ್ಯ ರಾಷ್ಟ್ರಗಳು ಕೈಗೊಂಡ ಪರಿಣಾಮಕಾರಿ ಕ್ರಮಗಳ ಬಗ್ಗೆ ಮೇಲ್ವಿಚಾರಣೆ ಮಾಡುವುದಾಗಿರುತ್ತದೆ. ಹಾಗೆಯೇ ಇದು ವಿಶ್ವ ಸಮುದಾಯಕ್ಕೆ ಬಲವಾದ ಶಿಫಾರಸುಗಳನ್ನು ಮಾಡುವ ನೀತಿ ರೂಪಿಸುವ ಸಂಸ್ಥೆಯಾಗಿದೆ. ಪ್ರಸ್ತುತ, ಇದು 39 ಸದಸ್ಯರನ್ನು ಹೊಂದಿದೆ (37 ದೇಶಗಳು ಮತ್ತು ಎರಡು ಪ್ರಾದೇಶಿಕ ಸಂಸ್ಥೆಗಳು- ಐರೋಪ್ಯ ಆಯೋಗ ಮತ್ತು ಗಲ್ಫ್ ಸಮನ್ವಯ ಸಮಿತಿ) . ಎಲ್ಲಾ ಪ್ರಮುಖ ಆರ್ಥಿಕವಾಗಿ ಪ್ರಗತಿ ಹೊಂದಿರುವ ರಾಷ್ಟ್ರಗಳು ಇದರ ಸದಸ್ಯರಾಗಿದ್ದಾರೆ.

ಪಾಕಿಸ್ತಾನ ಹೊರತು ಪಡಿಸಿ ಏಷ್ಯಾದಿಂದ ಜಪಾನ್, ಭಾರತ ಮತ್ತು ಮಲೇಷ್ಯಾ ಮಾತ್ರ ಆರ್ಥಿಕ ಕಾರ್ಯಪಡೆಯ ಸದಸ್ಯರಾಗಿವೆ. ಆರ್ಥಿಕ ಕಾರ್ಯಪಡೆ ಎಂಟು ಸಹ ಸದಸ್ಯರನ್ನು ಹೊಂದಿದ್ದು, ಅವುಗಳು ಅಕ್ರಮ ಹಣಕಾಸು ವರ್ಗಾವಣೆ ಮತ್ತು ಭಯೋತ್ಪಾದಕ ನಿಧಿಯ ಪೂರೈಕೆ ಸಮಸ್ಯೆಗಳನ್ನು ಪರಿಹರಿಸಲು ಅಧಿಕಾರ ಪಡೆದ ಪ್ರಾದೇಶಿಕ ಸಂಸ್ಥೆಗಳಾಗಿವೆ. ಭಾರತ ಮತ್ತು ಪಾಕಿಸ್ತಾನ ಕೂಡ ಇದರ ಸಹ ಸದಸ್ಯ ರಾಷ್ಟ್ರ ಗಳಾಗಿವೆ. ಏಷ್ಯಾ ಪೆಸಿಫಿಕ್ ಗ್ರೂಪ್ (ಎಪಿ ಜಿ). ಇದರ ಜತೆಗೆ ಆರ್ಥಿಕ ಕಾರ್ಯಪಡೆ ಹತ್ತು ವೀಕ್ಷಕ ಸಂಸ್ಥೆಗಳನ್ನು ಹೊಂದಿದೆ. ಅವುಗಳಲ್ಲಿ ಹೆಚ್ಚಿನವು ಪ್ರಾದೇಶಿಕ ಬ್ಯಾಂಕಿಂಗ್ ಅಥವಾ ವಿಶ್ವ ಬ್ಯಾಂಕ್ ಸೇರಿದಂತೆ ಆರ್ಥಿಕ ಸಂಸ್ಥೆಗಳು. ಇದರ ಅಧ್ಯಕ್ಷ ರಾಗಿ ಒಂದು ವರ್ಷ ಅವಧಿಗೆ ಆಯ್ಕೆ ಮಾಡಲಾಗುತ್ತದೆ. ನಂತರ ಇನ್ನೊಂದು ದೇಶ ಅಧ್ಯಕ್ಷೀಯ ಜವಾಬ್ಧಾರಿಯನ್ನು ನಿರ್ವಹಿಸುತ್ತದೆ. ಸದ್ಯ ಜುಲೈನಿಂದ ಜೂನ್ ವರೆಗೆ ಚೀನಾ ಅಧ್ಯಕ್ಷ ರಾಷ್ಟ್ರವಾಗಿ ಆಯ್ಕೆಯಾಗಿದೆ. ಸದಸ್ಯ ರಾಷ್ಟ್ರ ಗಳು ಆದೇಶವನ್ನು ಪಾಲಿಸಿರುವ ಬಗ್ಗೆ ಚರ್ಚಿಸಲು ಮತ್ತು ನಿರ್ಧಾರ ಕ್ಯೆಗೊಳ್ಳಲು ಪ್ರತಿ ವರ್ಷ, ಆರ್ಥಿಕ ಕಾರ್ಯ ಪಡೆ ಮೂರು ಸರ್ವ ಸದಸ್ಯರ ಸಭೆಗಳನ್ನು ಫೆಬ್ರವರಿ, ಜೂನ್ ಮತ್ತು ಅಕ್ಟೋಬರ್‌ನಲ್ಲಿ ನಡೆಸುತ್ತದೆ. ಅಕ್ರಮ ಹಣಕಾಸು ವರ್ಗಾವಣೆ ಮತ್ತು ಭಯೋತ್ಪಾದಕ ನಿಧಿಯ ಪೂರೈಕೆ ಮಾಡಿತ್ತಿದೆ ಎಂಬ ಕಾರಣಕ್ಕಾಗಿ (ಎಎಂಎಲ್ / ಸಿಟಿಎಫ್ ) ದೇಶಗಳನ್ನು ಮೇಲ್ವಿಚಾರಣೆ ಮಾಡುವ ಸಲುವಾಗಿ ನಲವತ್ತು "ಅಗತ್ಯ ಮಾನದಂಡಗಳು" ಮತ್ತು ಒಂಬತ್ತು "ಹೆಚ್ಚುವರಿ ಮಾನದಂಡಗಳು" ರೂಪಿಸಲಾಗಿದೆ. ಸದಸ್ಯ ರಾಷ್ಟ್ರ ಗಳು ಅಗತ್ಯ ಮಾನದಂಡಗಳನ್ನು ಪೂರೈಸುವುದು ಕಡ್ಡಾಯವಾಗಿದ್ದು, ಹೆಚ್ಚುವರಿ ಮಾನದಂಡಗಳು ಐಚ್ಚಿಕ ವಾಗಿದೆ ಮತ್ತು ಇದು ಅಗತ್ಯ ನಿರ್ಧಾರ ಕೈಗೊಳ್ಳಲು ಆರ್ಥಿಕ ಕಾರ್ಯ ಪಡೆ ಮಾತ್ರ ಸಹಾಯ ಮಾಡುತ್ತದೆ. ಎಂಎಲ್ / ಎಫ್ ಟಿ ಅಪರಾಧಗಳಾದ ಗ್ರಾಹಕನ ಶ್ರದ್ಧೆ, ಹಣಕಾಸಿನ ವಹಿವಾಟಿನ ಪಾರದರ್ಶಕತೆ, ಸರಿಯಾದ ದಾಖಲೆಗಳನ್ನು ಇಟ್ಟುಕೊಳ್ಳುವುದು ಮತ್ತು ಆರ್ಥಿಕ ಅಪರಾಧಗಳ ತನಿಖೆ ನಡೆಸುವ ರಾಷ್ಟ್ರೀಯ ಅಧಿಕಾರಿಗಳಿಗೆ ಸಂಶಯಾಸ್ಪದ ವಹಿವಾಟುಗಳನ್ನು ವರದಿ ಮಾಡುವುದು ಸಾಮಾನ್ಯವಾಗಿ ಅಗತ್ಯ ಮಾನದಂಡಗಳಾಗಿರುತ್ತವೆ.

ಮೇಲೆ ತಿಳಿಸಿದಂತೆ, ಅಗತ್ಯ ಮಾನದಂಡಗಳ ನಿಯತಾಂಕಗಳ ಮೇಲೆ ತೀರ್ಮಾನಿಸಲ್ಪಟ್ಟ ಅನುಸರಣೆಯ ಆಧಾರದ ಮೇಲೆ, ರಾಷ್ಟ್ರವನ್ನು “ಇತರ ಮೇಲ್ವಿಚಾರಣೆ ವ್ಯಾಪ್ತಿ” ಪಟ್ಟಿಯಲ್ಲಿ (ಗ್ರೇ ಪಟ್ಟಿ) ಅಥವಾ “ಕ್ರಮಕ್ಕಾಗಿ ಕರೆ” ಪಟ್ಟಿಯಲ್ಲಿ (ಕಪ್ಪು ಪಟ್ಟಿ) ಸೇರಿಸಬೇಕೆ ಎಂದು ಆರ್ಥಿಕ ಕಾರ್ಯ ಪಡೆ ನಿರ್ಧರಿಸಬೇಕು. ಪ್ರಸ್ತುತ, ಗ್ರೇ ಪಟ್ಟಿಯಲ್ಲಿ ಪಾಕಿಸ್ತಾನ ಸೇರಿದಂತೆ ಹದಿನಾಲ್ಕು ದೇಶಗಳಿದ್ದರೆ, ಕಪ್ಪು ಪಟ್ಟಿಯಲ್ಲಿ ಕೇವಲ ಎರಡು-ಇರಾನ್ ಮತ್ತು ಉತ್ತರ ಕೊರಿಯಾ ದೇಶಗಳಿವೆ. ಯಾವುದೇ ದೇಶವನ್ನು ಗ್ರೇ ಪಟ್ಟಿಗೆ ಸೇರಿಸಲು ಅಥವಾ ಪಟ್ಟಿಯಿಂದ ಅಳಿಸಲು, ಕನಿಷ್ಠ ಹನ್ನೆರಡು ದೇಶಗಳ ಮತ ಅಗತ್ಯವಿದೆ. ಆದಾಗ್ಯೂ, ಗ್ರೇ ಪಟ್ಟಿಯಿಂದ ಅಳಿಸಲು, ದೇಶಕ್ಕೆ ಭೇಟಿ ನೀಡಿ ಪ್ರತ್ಯಕ್ಷ ಪರಿಶೀಲನೆ ಮತ್ತು ಆರ್ಥಿಕ ಕಾರ್ಯ ಪಡೆ ಅನುಕೂಲಕರ ವರದಿಯ ಅಗತ್ಯವಿರುತ್ತದೆ. ಈಗಾಗಲೇ ಗ್ರೇ ಪಟ್ಟಿಯಲ್ಲಿರುವ ಯಾವುದೇ ದೇಶವನ್ನು ಕಪ್ಪು ಪಟ್ಟಿಗೆ ಸ್ಥಳಾಂತರಿಸಲು, ಕನಿಷ್ಠ 37 ಸದಸ್ಯ ರಾಷ್ಟ್ರಗಳ ಮತ ಅಗತ್ಯವಿದೆ. ಇದಕ್ಕಾಗಿಯೇ ಪಾಕಿಸ್ತಾನವು ಕಪ್ಪು ಪಟ್ಟಿಗೆ ಸೇರುವುದನ್ನು ತಪ್ಪಿಸಿಕೊಂಡಿದೆ ಏಕೆಂದರೆ ಅಕ್ಟೋಬರ್, 2019 ಮತ್ತು ಫೆಬ್ರವರಿ, 2020 ಎರಡೂ ಸಂದರ್ಭಗಳಲ್ಲಿ, ಚೀನಾ, ಮಲೇಷ್ಯಾ ಮತ್ತು ಟರ್ಕಿ ಕಪ್ಪು ಪಟ್ಟಿಗೆ ಪಾಕಿಸ್ತಾನ ಹೋಗುವುದನ್ನು ವಿರೋಧಿಸಿ ಮತ ಚಲಾಯಿಸಿವೆ.

ಅಕ್ಟೋಬರ್, 2019 ರಲ್ಲಿ ಪಾಕಿಸ್ತಾನವು ನಲವತ್ತು ಮಾನದಂಡಗಳ ಆಧಾರದ ಮೇಲೆ 27 ಕಾರ್ಯಾಂಶಗಳಲ್ಲಿ 22 ಅಂಶಗಳಿಗೆ ಕಾರ್ಯ ಬದ್ಧವಾಗಬೇಕಿತ್ತು. ಆರ್ಥಿಕ ಕಾರ್ಯಪಡೆ ಈ ಬಾರಿ ಗಮನಿಸಿದಂತೆ ಕೊಟ್ಟಿರುವ 27 ಕಾರ್ಯಾಂಶಗಳಲ್ಲಿ 14 ಅಂಶಗಳಿಗೆ ಪಾಕಿಸ್ತಾನವು ಹೆಚ್ಚಿನ ಗಮನ ಹರಿಸಿದೆ. ಉಳಿದ ಕ್ರಿಯಾ ಯೋಜನೆಯಲ್ಲಿ ವಿವಿಧ ಹಂತದ ಪ್ರಗತಿಯನ್ನು ಸಾಧಿಸಿದೆ. ಎಫ್‌ಎಟಿಎಫ್ ಪಾಕಿಸ್ತಾನವನ್ನು “ಜೂನ್ 2020 ರೊಳಗೆ ತನ್ನ ಸಂಪೂರ್ಣ ಕ್ರಿಯಾ ಯೋಜನೆಯನ್ನು ಶೀಘ್ರವಾಗಿ ಪೂರ್ಣಗೊಳಿಸಬೇಕು” ಎಂದು ಬಲವಾಗಿ ಒತ್ತಾಯಿಸಿದೆ. ಇದರೊಂದಿಗೆ, “ವಿಚಾರಣೆಗೆ ಒಳಪಡಿಸುವಲ್ಲಿ ಮತ್ತು ದಂಡ ವಿಧಿಸುವಲ್ಲಿ ಮಹತ್ವದ ಮತ್ತು ಸುಸ್ಥಿರ ಪ್ರಗತಿಯಾಗದಿದ್ದರೆ ಮುಂದಿನ ಸಮಗ್ರ ಕಾರ್ಯಯೋಜನೆಯನ್ನು ಮಾಡಲಾಗುವುದಿಲ್ಲ. ಅದಲ್ಲದೇ ಆರ್ಥಿಕ ಕಾರ್ಯಪಡೆ ತನ್ನ ಸದಸ್ಯ ರಾಷ್ಟ್ರಗಳ ಹಣಕಾಸು ಸಂಸ್ಥೆಗಳಿಗೆ ಪಾಕಿಸ್ತಾನದೊಂದಿಗಿನ ವಾಣಿಜ್ಯ ಹಾಗೂ ವ್ಯಾವಹಾರಿಕ ಸಂಬಂಧಗಳ ಕಡೆಗೆ ವಿಶೇಷ ಗಮನ ಹರಿಸುವಂತೆ ಸೂಚಿಸುತ್ತದೆ”.

ಇದರರ್ಥ ಇನ್ನೂ ಪಾಕಿಸ್ತಾನದ ಮೇಲೆ ತೂಗುಗತ್ತಿ ತೂಗಾಡುತ್ತಿದೆ ಮತ್ತು ಮುಂದಿನ ಆರ್ಥಿಕ ಕಾರ್ಯ ಪಡೆಯ ಸರ್ವ ಸದಸ್ಯರ ಸಭೆಯ ವೇಳೆಗೆ ಪಾಕಿಸ್ತಾನ ನಿಗದಿ ಪಡಿಸಿದ ಕಾರ್ಯಗಳನ್ನು ಪೂರ್ಣಗೊಳಿಸಲು ವಿಫಲವಾದರೆ, ಅದರ ವ್ಯಾಪಾರ ಮತ್ತು ವ್ಯವಹಾರ ವಹಿವಾಟುಗಳು ಸಂಪೂರ್ಣ ದಿವಾಳಿತನ ಮತ್ತು ಅವ್ಯವಸ್ಥೆಗೆ ತಲುಪಲಿದೆ. ಇದಕ್ಕಾಗಿಯೇ ಪಾಕಿಸ್ತಾನ ತನ್ನ ಮೂರು ಸ್ನೇಹಿತ ರಾಷ್ಟ್ರಗಳ ಸಹಾಯದಿಂದ ತನ್ನ್ನಾವರಿಸಿದ ತೊಂದರೆಯ ನೀರಿನಿಂದ ಹೊರಬರಲು ತೀವ್ರವಾಗಿ ಪ್ರಯತ್ನಿಸುತ್ತಿದೆ. ಪಾಕಿಸ್ತಾನ ಮಾಡಿತ್ತಿರುವ ಮಹಾ ಅಪರಾದವೆಂದರೆ ಅದರ ಸಶಸ್ತ್ರ ಪಡೆಗಳು ಮತ್ತು ಭಯೋತ್ಪಾದಕ ಸಂಘಟನೆಗಳ ನಡುವೆ ಇರುವ ಕೆಟ್ಟ ಸಂಪರ್ಕ ಹಾಗೂ ಹೊಂದಾಣಿಕೆ. ಭಯೋತ್ಪಾದನೆಯನ್ನು ಸ್ಥಾಪಿಸಿ, ಪ್ರಾಯೋಜಿಸಿ ಮತ್ತು ಭಾರತದ ಗಡಿಯುದ್ದಕ್ಕೂ ಕಳುಹಿಸಲಾಗುತ್ತಿದೆ. ಜೈಶ್-ಎ-ಮೊಹಮ್ಮದ್ ಸಂಸ್ಥಾಪಕ ಮುಖ್ಯಸ್ಥ ಅಜರ್ ಮಸೂದ್ ಕಾಣೆಯಾಗಿದ್ದಾನೆ ಮತ್ತು ಪಾಕಿಸ್ತಾನದಲ್ಲಿ ಅವನು ಇರಲು ಸಾಧ್ಯವಿಲ್ಲ ಎಂದು ಸರ್ವ ಸದಸ್ಯರ ಸಭೆಯಲ್ಲಿ ಸಬೂಬು ಹೇಳಿರುವುದು ಪಾಕಿಸ್ತಾನ ಬಾಲಿಶ ವರ್ತನೆ. ಪಾಕಿಸ್ತಾನದ ಸುಳ್ಳನ್ನು ಭಾರತ ಎತ್ತಿ ಹಿಡಿದು ತೋರಿಸಿತು. ಯುಎಸ್ಎ ಸೇರಿದಂತೆ ಇತರ ಎಲ್ಲ ದೊಡ್ಡ ಸದಸ್ಯ ರಾಷ್ಟ್ರಗಳು ಭಾರತದ ಜೊತೆ ನಿಂತಿದ್ದರೆ, ಪಾಕಿಸ್ತಾನವು ಇನ್ನೂ ಒಂದು ಅವಕಾಶಕ್ಕೆ ಅರ್ಹವಾಗಿದೆ ಎಂಬ ನೆಪದಲ್ಲಿ ಚೀನಾ ಇಷ್ಟವಿಲ್ಲದಿದ್ದರೂ ಪಾಕಿಸ್ತಾನವನ್ನು ಬೆಂಬಲಿಸಿತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.