ETV Bharat / bharat

ಮೇ.28ರೊಳಗೆ ಪರಿಷತ್‌ಗೆ ಚುನಾವಣೆ: ಉದ್ಧವ್​ ಠಾಕ್ರೆಗೆ ಚುನಾವಣಾ ಆಯೋಗದ ಅಭಯ - ಉದ್ಧವ್​ ಠಾಕ್ರೆ

ಕೊರೊನಾ ವೈರಸ್​ ಹಾಗೂ ಲಾಕ್​ಡೌನ್​ನಿಂದ ಉಂಟಾದ ವಿಚಿತ್ರ ಪರಿಸ್ಥಿತಿಯಲ್ಲಿ ಶಾಸನ ಸಭೆಗೆ ಪ್ರವೇಶ ಪಡೆಯಲು ಅವರು ವಿಫಲರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಸಿಎಂ ಹುದ್ದೆ ಉಳಿಸಿಕೊಳ್ಳಲು ಇನ್ನಿಲ್ಲದ ಕಸರತ್ತು ಮಾಡುತ್ತಿದ್ದಾರೆ.

EC to hold Maha legislative council polls

author img

By

Published : May 1, 2020, 12:38 PM IST

ನವದೆಹಲಿ: ದೇಶದಲ್ಲಿ ಕೊರೊನಾ ವೈರಸ್​ ಪ್ರಕರಣ ದಿನದಿಂದ ದಿನಕ್ಕೆ ಹೆಚ್ಚು ಜನರಲ್ಲಿ ವ್ಯಾಪಿಸುತ್ತಿರುವ ಕಾರಣ ಲಾಕ್​ಡೌನ್​ ಹೇರಿಕೆ ಮಾಡಲಾಗಿದೆ. ಹೀಗಾಗಿ ಎಲ್ಲ ಕಾರ್ಯಕ್ರಮಗಳೂ ಮುಂದೂಡಿಕೆಯಾಗಿವೆ. ಇದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆಗೆ ಇನ್ನಿಲ್ಲದ ತೊಂದರೆಗೊಳಗಾಗುವಂತೆ ಮಾಡಿದೆ.

ನವೆಂಬರ್​ ತಿಂಗಳಲ್ಲಿ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡಿರುವ ಉದ್ಧವ್​ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡಿಲ್ಲ. ಹೀಗಾಗಿ ರಾಜ್ಯ ವಿಧಾನಸಭೆಯಲ್ಲಿ ಸದಸ್ಯರಾಗಲು ಅವರಿಗೆ 6 ತಿಂಗಳ ಕಾಲಾವಕಾಶವಿತ್ತು. ಅದರ ಗಡುವು ಮೇ 28ರಂದು ಕೊನೆಗೊಳ್ಳಲಿದೆ. ಹೀಗಾಗಿ ವಿಧಾನ ಪರಿಷತ್​ನ 9 ಸ್ಥಾನಗಳಿಗೆ ಚುನಾವಣೆ ನಡೆಯಬೇಕಾಗಿದೆ.

ಹೀಗಾಗಿ ಪ್ರಧಾನಿ ಮೋದಿಗೆ ದೂರವಾಣಿ ಕರೆ ಮಾಡಿ ಮಾತನಾಡಿದ್ದ ನಮೋ ಇದೇ ತಿಂಗಳೊಳಗೆ ಚುನಾವಣೆ ನಡೆಸುವಂತೆ ಮನವಿ ಮಾಡಿಕೊಂಡಿದ್ದರು. ಇದೀಗ ಮಹಾರಾಷ್ಟ್ರ ಮುಖ್ಯಮಂತ್ರಿ ಮನವಿಗೆ ಸ್ಪಂದಿಸಿರುವ ನಮೋ ಚುನಾವಣಾ ಆಯೋಗಕ್ಕೆ ಸೂಚನೆ ನೀಡಿದ್ದು, ಅದರಂತೆ ಮೇ. 28ರೊಳಗೆ ಚುನಾವಣೆ ನಡೆಸುವುದಾಗಿ ಆಯೋಗ ಅಭಯ ನೀಡಿದೆ.

ಮಹಾರಾಷ್ಟ್ರದಲ್ಲಿ ರಾಜ್ಯಪಾಲರ ಕೋಟಾದಲ್ಲಿರುವ ಎರಡು ಸ್ಥಾನಗಳ ಪೈಕಿ ಒಂದು ಸ್ಥಾನಕ್ಕೆ ಉದ್ಧವ್​ ಠಾಕ್ರೆ ಹೆಸರು ನಾಮ ನಿರ್ದೇಶನ ಮಾಡುವಂತೆ ಈಗಾಗಲೇ ಸಂಪುಟ ಸಚಿವರು ಶಿಫಾರಸು ಮಾಡಿದ್ದು, ಅದನ್ನು ಅಂಗೀಕರಿಸಿಲು ರಾಜ್ಯಪಾಲ ಭಗತ್​ ಸಿಂಘ್​ ಕೋಶ್ಯಾರಿ ಮನಸ್ಸು ಮಾಡಿಲ್ಲ. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಜತೆ ಉದ್ಧವ್ ಠಾಕ್ರೆ ನಿನ್ನೆ ಮಾತುಕತೆ ನಡೆಸಿದ್ದರು.

ಏಪ್ರಿಲ್‌ 24ರಂದು ವಿಧಾನ ಪರಿಷತ್‌ನ 9 ಸ್ಥಾನಗಳಿಗೆ ಚುನಾವಣೆ ನಡೆದು ಉದ್ಧವ್‌ ಠಾಕ್ರೆ ಇದರಲ್ಲಿ ಸ್ಪರ್ಧಿಸಬೇಕಾಗಿತ್ತು. ಕೊರೊನಾ ವೈರಸ್‌ ಹಿನ್ನೆಲೆಯಲ್ಲಿ ಚುನಾವಣೆಯನ್ನು ಆಯೋಗ ಚುನಾವಣೆ ಮುಂದೂಡಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.