ನವದೆಹಲಿ: ಲೋಕಸಭೆಯ ಒಂದು ಕ್ಷೇತ್ರ ಹಾಗೂ ವಿವಿಧ ರಾಜ್ಯಗಳ 56 ವಿಧಾನಸಭಾ ಕ್ಷೇತ್ರಗಳಿಗೆ ನವೆಂಬರ್ 3 ಮತ್ತು 7ರಂದು ಉಪಚುನಾವಣೆ ನಡೆಯಲಿದ್ದು, ನವೆಂಬರ್ 10ರಂದು ಫಲಿತಾಂಶ ಬಹಿರಂಗಗೊಳ್ಳಲಿದೆ ಎಂದು ಕೇಂದ್ರ ಚುನಾವಣಾ ಆಯೋಗ ಪ್ರಕಟಣೆ ಹೊರಡಿಸಿದೆ.
ಪ್ರಮುಖವಾಗಿ ಕರ್ನಾಟಕ, ತೆಲಂಗಾಣ ಸೇರಿ 11 ರಾಜ್ಯಗಳ 56 ವಿಧಾನಸಭಾ ಕ್ಷೇತ್ರಗಳಿಗೆ ಮತದಾನ ನಡೆಯಲಿದ್ದು, ಬಿಹಾರದ ಲೋಕಸಭಾ ಕ್ಷೇತ್ರಕ್ಕೆ ನವೆಂಬರ್ 7ರಂದು ಚುನಾವಣೆ ನಿಗದಿಯಾಗಿದೆ.
ಮಣಿಪುರದ ಎರಡು ಕ್ಷೇತ್ರಗಳಿಗೆ ನವೆಂಬರ್ 7ರಂದು ಮತದಾನ ನಡೆಯಲಿದ್ದು, ಉಳಿದ ಎಲ್ಲ ಕ್ಷೇತ್ರಗಳಿಗೆ ನವೆಂಬರ್ 3ರಂದು ವೋಟಿಂಗ್ ನಡೆಯಲಿದೆ. ಇದರ ಫಲಿತಾಂಶ ನವೆಂಬರ್ 10ಕ್ಕೆ ನಡೆಯಲಿದೆ.
-
By-poll on 1 Parliamentary constituency of Bihar & 2 Assembly constituencies of Manipur to be held on Nov 7. By-poll on 54 assembly constituencies in Chhattisgarh, Gujarat, Jharkhand, Karnataka, MP, Nagaland, Odisha, Telangana, UP to be held on Nov 3. Counting of votes on Nov 10. pic.twitter.com/ZdAjXjthti
— ANI (@ANI) September 29, 2020 " class="align-text-top noRightClick twitterSection" data="
">By-poll on 1 Parliamentary constituency of Bihar & 2 Assembly constituencies of Manipur to be held on Nov 7. By-poll on 54 assembly constituencies in Chhattisgarh, Gujarat, Jharkhand, Karnataka, MP, Nagaland, Odisha, Telangana, UP to be held on Nov 3. Counting of votes on Nov 10. pic.twitter.com/ZdAjXjthti
— ANI (@ANI) September 29, 2020By-poll on 1 Parliamentary constituency of Bihar & 2 Assembly constituencies of Manipur to be held on Nov 7. By-poll on 54 assembly constituencies in Chhattisgarh, Gujarat, Jharkhand, Karnataka, MP, Nagaland, Odisha, Telangana, UP to be held on Nov 3. Counting of votes on Nov 10. pic.twitter.com/ZdAjXjthti
— ANI (@ANI) September 29, 2020
ಯಾವೆಲ್ಲ ರಾಜ್ಯಗಳಲ್ಲಿ ಬೈ ಎಲೆಕ್ಷನ್!?
ಕರ್ನಾಟಕ(2 ಕ್ಷೇತ್ರ), ತೆಲಂಗಾಣ(1), ಛತ್ತೀಸ್ಗಢ(1), ಗುಜರಾತ್(8), ಜಾರ್ಖಂಡ್(2), ಹರಿಯಾಣ(1), ಮಧ್ಯಪ್ರದೇಶ(28), ಮಣಿಪುರ(2), ನಾಗಲ್ಯಾಂಡ್(2),ಒಡಿಶಾ(2) ಮತ್ತು ಉತ್ತರಪ್ರದೇಶ(7 ಕ್ಷೇತ್ರ) ರಾಜ್ಯಗಳಾಗಿವೆ.
ಈ ರಾಜ್ಯಗಳಲ್ಲಿ ನಡೆಯಲ್ಲ ಉಪಚುನಾವಣೆ
ಇದರ ಜತೆಗೆ ನಾಲ್ಕು ರಾಜ್ಯಗಳಲ್ಲಿನ ಏಳು ವಿಧಾನಸಭಾ ಕ್ಷೇತ್ರಗಳಲ್ಲಿ ಕೇಂದ್ರ ಚುನಾವಣಾ ಆಯೋಗ ಮತದಾನ ನಡೆಸುತ್ತಿಲ್ಲ. ಕೇರಳ, ತಮಿಳುನಾಡು, ಅಸ್ಸೋಂ ಹಾಗೂ ಪಶ್ಚಿಮ ಬಂಗಾಳ ರಾಜ್ಯಗಳು ಇವಾಗಿವೆ.