ETV Bharat / bharat

ರಾಜ್ಯಸಭೆ 6 ಸ್ಥಾನಗಳಿಗೆ ಉಪ ಚುನಾವಣೆ: ಕಾಂಗ್ರೆಸ್​ ಪ್ಲಾನ್​ ಠುಸ್​! - undefined

ರಾಜ್ಯಸಭಾ ಸದಸ್ಯರಾಗಿದ್ದ ಅಮಿತ್ ಶಾ ಹಾಗೂ ಸ್ಮೃತಿ ಇರಾನಿ ಲೋಕಸಭೆಗೆ ಆಯ್ಕೆಯಾದ ಬಳಿಕ ತೆರವಾದ ಸೇರಿದಂತೆ ಒಟ್ಟಾರೆ 6 ಸ್ಥಾನಗಳಿಗೆ ಜುಲೈ 5ರಂದು ಚುನಾವಣೆ ನಡೆಯಲಿದೆ. ಅಂದೇ ಫಲಿತಾಂಶ ಹೊರಬೀಳಲಿದೆ.

Rajya Sabha
author img

By

Published : Jun 15, 2019, 10:27 PM IST

ನವದೆಹಲಿ: ರಾಜ್ಯಸಭೆಯ 6 ಸ್ಥಾನಗಳಿಗಾಗಿ ಜುಲೈ 5ರಂದು ಉಪಚುನಾವಣೆ ನಡೆಸಲಾಗುವುದು ಎಂದು ಚುನಾವಣಾ ಆಯೋಗ ಇಂದು ಘೋಷಿಸಿದೆ.

ರಾಜ್ಯಸಭಾ ಸದಸ್ಯರಾಗಿದ್ದ ಅಮಿತ್ ಶಾ ಹಾಗೂ ಸ್ಮೃತಿ ಇರಾನಿ ಲೋಕಸಭೆ ಚುನಾವಣೆ ಬಳಿಕ ಲೋಕಸಭೆ ಪ್ರವೇಶಿಸಿ, ಕೇಂದ್ರ ಸಚಿವ ಸಂಪುಟ ಸೇರಿರುವುದರಿಂದ ಅವರ ಸ್ಥಾನ ತೆರವಾಗಿದೆ. ಒಟ್ಟಾರೆ 6 ಸ್ಥಾನಗಳಿಗೆ ಜುಲೈ 5ರಂದು ಚುನಾವಣೆ ನಡೆಯಲಿದ್ದು, ಅಂದೇ ಫಲಿತಾಂಶವೂ ಹೊರಬೀಳಲಿದೆ. ಈ ಸಂಬಂಧ ಜೂನ್ 18ಕ್ಕೆ ಅಧಿಕೃತ ಪ್ರಕಟಣೆ ಹೊರಡಿಸಲಿದೆ.

ಅಮಿತ್ ಶಾ ಹಾಗೂ ಸ್ಮೃತಿ ಇರಾನಿ ಅವರ ಸ್ಥಾನಗಳು ತೆರವಾಗಿದ್ದರಿಂದ ಗುಜರಾತ್​ನಲ್ಲಿ ಎರಡೂ ಸ್ಥಾನಗಳಿಗೂ ಒಟ್ಟಿಗೆ ಮತದಾನ ನಡೆಸುವಂತೆ ಕಾಂಗ್ರೆಸ್​ ಆಗ್ರಹಿಸಿತ್ತು. ಎರಡು ಸ್ಥಾನಗಳಿಗೆ ಪ್ರತ್ಯೇಕ ಚುನಾವಣೆ ನಡೆದರೆ ಆಡಳಿತಾರೂಢ ಬಿಜೆಪಿ ಗೆದ್ದುಬಿಡುತ್ತೆ ಎಂಬುದು ಕಾಂಗ್ರೆಸ್​ನ ಲೆಕ್ಕಾಚಾರವಾಗಿತ್ತು. ಆದರೆ ಆಯೋಗ ಇದಕ್ಕೆ ಮಾನ್ಯತೆ ನೀಡಿಲ್ಲ.

ರಾಜ್ಯಸಭೆಯಲ್ಲಿ ರವಿಶಂಕರ್​ ಪ್ರಸಾದ್​ (ಬಿಹಾರ), ಅಚ್ಯುತಾನಂದ ಸಮಂತ (ಒಡಿಶಾ), ಪ್ರತಾಪ್​ ಕೇಸರಿ ದೆಬ್​ (ಒಡಿಶಾ), ಸೌಮ್ಯ ರಂಜನ್​ ಪಟ್ನಾಯಕ್​ (ಒಡಿಶಾ)ರ ಸ್ಥಾನಗಳು ತೆರವಾದ ಕಾರಣ ಉಪಚುನಾವಣೆ ನಡೆಸಲಾಗ್ತಿದೆ.

Intro:Body:

Rajya Sabha 

Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.