ETV Bharat / bharat

ಉತ್ತರಾಖಂಡ, ಒಡಿಶಾದಲ್ಲಿ ಲಘು ಭೂಕಂಪ - Earthquake in Uttarkashi in Uttarakhand

ಉತ್ತರಾಖಂಡದ ಉತ್ತರಕಾಶಿ ಹಾಗೂ ಒಡಿಶಾದ ಕಂಧಮಾಲ್ ಮತ್ತು ಗಂಜಮ್​ ಜಿಲ್ಲೆಯಲ್ಲಿ ಲಘು ಭೂಕಂಪ ಸಂಭವಿಸಿದೆ.

Earthquake hits Uttarakhand and Odisha
ಉತ್ತರಾಖಂಡ, ಒಡಿಶಾದಲ್ಲಿ ಲಘು ಭೂಕಂಪ
author img

By

Published : Jan 9, 2021, 12:58 PM IST

ಉತ್ತರಕಾಶಿ/ಕಂಧಮಾಲ್: ಉತ್ತರಾಖಂಡ, ಒಡಿಶಾ ರಾಜ್ಯಗಳಲ್ಲಿ ಇಂದು ಲಘು ಭೂಕಂಪ ಸಂಭವಿಸಿರುವುದಾಗಿ ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (ಎನ್‌ಸಿಎಸ್) ತಿಳಿಸಿದೆ.

ಉತ್ತರಾಖಂಡದ ಉತ್ತರಕಾಶಿಯಲ್ಲಿ ಇಂದು ಬೆಳಗ್ಗೆ 11.27ಕ್ಕೆ ಭೂಮಿ ಕಂಪಿಸಿದ್ದು, ರಿಕ್ಟರ್​ ಮಾಪಕದಲ್ಲಿ 3.3 ರಷ್ಟು ತೀವ್ರತೆ ದಾಖಲಾಗಿದೆ. ಭೂಮಿಯಿಂದ 10 ಕಿ.ಮೀ ಆಳದಲ್ಲಿ ಭೂಕಂಪನದ ಕೇಂದ್ರ ಬಿಂದುವಿದೆ.

ಒಡಿಶಾದ ಕಂಧಮಾಲ್ ಮತ್ತು ಗಂಜಮ್​ ಜಿಲ್ಲೆಯಲ್ಲಿ 3.2 ತೀವ್ರತೆಯ ಭೂಕಂಪ ಉಂಟಾಗಿದೆ. 5 ಕಿ.ಮೀ ಆಳದಲ್ಲಿ ಭೂಕಂಪನದ ಕೇಂದ್ರಬಿಂದು ದಾಖಲಾಗಿದೆ. ಘಟನೆಯಲ್ಲಿ ಯಾವುದೇ ಸಾವು-ನೋವು ವರದಿಯಾಗಿಲ್ಲ.

ಇದನ್ನೂ ಓದಿ - ಮಂಡ್ಯ: ದೇವಸ್ಥಾನಕ್ಕೆ ಅರ್ಚಕನನ್ನು ನೇಮಿಸಿ ಪವಾಡ ಮೆರೆದ ಬಸಪ್ಪ

ನಿನ್ನೆಯಷ್ಟೇ ಉತ್ತರಾಖಂಡದ ಬಾಗೇಶ್ವರದಲ್ಲಿ 3.3 ತೀವ್ರತೆಯ ಭೂಕಂಪನ ಸಂಭವಿಸಿತ್ತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.