ETV Bharat / bharat

ದುಶ್ಯಂತ್ ಚೌಟಾಲ ಹರಿಯಾಣದ ಮುಂದಿನ ಮುಖ್ಯಮಂತ್ರಿ: ಮಾಜಿ ಕಾಂಗ್ರೆಸ್​ ಅಧ್ಯಕ್ಷ

ಹರಿಯಾಣದಲ್ಲಿ ಸರ್ಕಾರ ರಚನೆಯಲ್ಲಿ ಜೆಜೆಪಿ ನಿರ್ಣಾಯಕ ಪಾತ್ರ ವಹಿಸುವುದು ಭಾಗಶಃ ಖಚಿತವಾಗಿದೆ. ಪ್ರಬಲ ಪಕ್ಷಗಳಾದ ಕಾಂಗ್ರೆಸ್​ ಹಾಗೂ ಬಿಜೆಪಿ ರಾಜ್ಯದಲ್ಲಿ ಬಹುಮತ ಗಳಿಸುವಲ್ಲಿ ವಿಫಲಗೊಂಡಿದೆ. ಈ ನಡುವೆ ರಾಜ್ಯ ಮಾಜಿ ಕಾಂಗ್ರೆಸ್​ ಅಧ್ಯಕ್ಷ ಅಶೋಕ್​ ತನ್ವರ್​​ ಭವಿಷ್ಯ ನುಡಿದಿದ್ದು, ದುಶ್ಯಂತ್ ಚೌಟಾಲ ಮುಂದಿನ ಮುಖ್ಯಮಂತ್ರಿಯಾಗಲಿದ್ದಾರೆ ಎಂದಿದ್ದಾರೆ.

author img

By

Published : Oct 24, 2019, 7:05 PM IST

Updated : Oct 24, 2019, 7:43 PM IST

ಮಾಜಿ ಕಾಂಗ್ರೆಸ್​ ಅಧ್ಯಕ್ಷ ಅಶೋಕ್​ ತನ್ವಾರ್

ನವದೆಹಲಿ: ಜೆಜೆಪಿ ನಾಯಕ ದುಶ್ಯಂತ್ ಚೌಟಾಲ, ಹರಿಯಾಣದ ಮುಂದಿನ ಮುಂಖ್ಯಮಂತ್ರಿ ಎಂದು ರಾಜ್ಯ ಮಾಜಿ ಕಾಂಗ್ರೆಸ್​ ಅಧ್ಯಕ್ಷ ಅಶೋಕ್​ ತನ್ವಾರ್​ ಭವಿಷ್ಯ ನುಡಿದಿದ್ದಾರೆ.

ನಗರದಲ್ಲಿ ಮಾತನಾಡಿದ ಅವರು, ಹರಿಯಾಣದ ಜನತೆ ರಾಜ್ಯದಲ್ಲಿ ಅಸ್ತಿತ್ವದಲ್ಲಿರುವ ಬಿಜೆಪಿ ಸರ್ಕಾರವನ್ನು ತಿರಸ್ಕರಿಸಿದ್ದಾರೆ. ಜೆಜೆಪಿಯಿಂದ ಓರ್ವ ಮುಖ್ಯಮಂತ್ರಿಯಾಗೋದು ನಿಶ್ಚಿತ. ಹೀಗಾಗಿ ಕಾಂಗ್ರೆಸ್​ ಹಾಗೂ ಬಿಜೆಪಿ, ಚೌಟಾಲಾಗೆ ಮುಖ್ಯಮಂತ್ರಿಯಾಗಲು ಸಹಾಯ ಮಾಡಬೇಕು ಎಂದು ಅಶೋಕ್​ ತನ್ವಾರ್​ ಹೇಳಿದ್ದಾರೆ.

ದುಶ್ಯಂತ್ ಚೌಟಾಲ ನನ್ನ ತಮ್ಮನಂತೆ. ಹೀಗಾಗಿ ಅವರನ್ನು ನಾನು ಬೆಂಬಲಿಸುತ್ತೇನೆ. ಜೆಜೆಪಿ ಮುಖಂಡರು ಸಮರ್ಥ ಅಭ್ಯರ್ಥಿಗಳಿಗೆ ರಾಜ್ಯದಲ್ಲಿ ಟಿಕೆಟ್​ ನೀಡಿದ್ದಾರೆ. ಈ ಮೂಲಕ ಸಮರ್ಥ ಯುವ ನಾಯಕರನ್ನು ರಾಜಕೀಯಕ್ಕೆ ತರುವ ಪ್ರಯತ್ನ ಮಾಡಿದ್ದಾರೆ ಎಂದರು.

Intro:Body:

haryana

Conclusion:
Last Updated : Oct 24, 2019, 7:43 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.