ETV Bharat / bharat

ಗುಂಡು ಹಾರಿಸಿ ಯುವಕನ ಕೊಲೆ: ವಿಡಿಯೋ ಮಾಡಿದ ದುಷ್ಕರ್ಮಿಗಳು - Uttar Pradesh Durgesh Murder

ಯುವಕನೋರ್ವನನ್ನು ಕೆಲ ದುಷ್ಕರ್ಮಿಗಳ ತಂಡ ಗುಂಡು ಹಾರಿಸಿ ಕೊಲೆ ಮಾಡಿರುವ ಘಟನೆ ಉತ್ತರಪ್ರದೇಶದ ಬರೌಲಿಯಲ್ಲಿ ನಡೆದಿದೆ.

ಯುವಕನಿಗೆ ಥಳಿಸಿದ ದುಷ್ಕರ್ಮಿಗಳು
ಯುವಕನಿಗೆ ಥಳಿಸಿದ ದುಷ್ಕರ್ಮಿಗಳು
author img

By

Published : Sep 3, 2020, 12:06 PM IST

ಲಖನೌ: ಇಂದು ಬೆಳಗ್ಗೆ ಯುವಕನೋರ್ವನನ್ನು ಕೆಲ ದುಷ್ಕರ್ಮಿಗಳ ತಂಡ ಗುಂಡು ಹಾರಿಸಿ ಕೊಲೆ ಮಾಡಿರುವ ಘಟನೆ ಬರೌಲಿಯಲ್ಲಿ ನಡೆದಿದೆ. ಇನ್ನು ಕೊಲೆ ಮಾಡುವ ಮುನ್ನ ಆತನಿಗೆ ಥಳಿಸಿದ್ದು, ಅದರ ವಿಡಿಯೋ ಮಾಡಿದ್ದಾರೆ.

ದುರ್ಗೇಶ್ ಯಾದವ್ ಎಂಬ ವ್ಯಕ್ತಿಯನ್ನು ಮನೀಶ್ ಯಾದವ್ ಮತ್ತು ಅವರ ಕೆಲವು ಸಹಚರರು ಗುಂಡಿಕ್ಕಿ ಕೊಂದಿದ್ದು, ಚಿಕಿತ್ಸೆಯ ಸಮಯದಲ್ಲಿ ದುರ್ಗೇಶ್ ಯಾದವ್ ಮೃತಪಟ್ಟಿದ್ದಾನೆ.

ಯುವಕನಿಗೆ ಥಳಿಸಿದ ದುಷ್ಕರ್ಮಿಗಳು

ಘಟನೆ ಸಂಬಂಧ ಪೊಲೀಸರು ಎಫ್​ಐಆರ್​ ದಾಖಲಿಸಿದ್ದು, ತನಿಖೆ ಕೈಗೊಂಡಿದ್ದಾರೆ. ದುರ್ಗೇಶ್ ಯಾದವ್ ಗೋರಖ್‌ಪುರದ ನಿವಾಸಿಯಾಗಿದ್ದು, ಈತನ ಹೆಸರು ರೌಡಿಶೀಟ್​ನಲ್ಲಿತ್ತು. ಇನ್ನು ದುರ್ಗೇಶ್​ಗೆ ಮನೀಶ್ ಯಾದವ್ ಮತ್ತು ಅವರ ಸಹಚರರೊಂದಿಗೆ ಹಣದ ವ್ಯವಹಾರದಲ್ಲಿ ಘರ್ಷಣೆ ನಡೆದಿತ್ತು. ಇದೇ ದ್ವೇಷದ ಹಿನ್ನೆಲೆಯಲ್ಲಿ ಕೊಲೆ ನಡೆದಿದೆ ಎಂದು ಅನುಮಾನ ವ್ಯಕ್ತವಾಗಿದೆ.

ದುರ್ಗೇಶ್ ಯಾದವ್ ಹತ್ಯೆಗೆ ಮುನ್ನ ವಿಡಿಯೋ ಮಾಡಲಾಗಿದ್ದು, ಇದರಲ್ಲಿ ಮನೀಶ್ ಯಾದವ್ ಮತ್ತು ಆತನ ಸಹಚರರು ದುರ್ಗೇಶ್ ಯಾದವ್​ನನ್ನು ಅಮಾನುಷವಾಗಿ ಥಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.