ಆದಾಯ ತೆರಿಗೆ ದಿನಾಂಕ ವಿಸ್ತರಣೆ: ನವೆಂಬರ್ 30ರವರೆಗೆ ತೆರಿಗೆ ಕಟ್ಟಲು ಅವಕಾಶ - ನಿರ್ಮಲಾ ಸೀತಾರಾಮನ್
ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿರುವ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಆದಾಯ ತೆರಿಗೆ ಕಟ್ಟಲು ನೀಡಲಾಗಿದ್ದ ದಿನಾಂಕ ವಿಸ್ತರಣೆ ಮಾಡಿದ್ದಾರೆ.

ನವದೆಹಲಿ: ಕೊರೊನಾ ವಿರುದ್ಧದ ಹೋರಾಟದಲ್ಲಿರುವ ಭಾರತೀಯರಿಗೆ ಇದೀಗ ಕೇಂದ್ರ ಸರ್ಕಾರ ಮತ್ತೊಂದು ಗುಡ್ನ್ಯೂಸ್ ನೀಡಿದ್ದು, ಆದಾಯ ತೆರಿಗೆ ಕಟ್ಟಲು ನೀಡಲಾಗಿದ ದಿನಾಂಕ ಇದೀಗ ವಿಸ್ತರಣೆ ಮಾಡಿದೆ.
ಟಿಡಿಎಸ್/ಟಿಸಿಎಸ್ನಲ್ಲಿ ಶೇ. 25ರಷ್ಟು ಕಡಿತ:
2019-20 ನೇ ಸಾಲಿನ ಆದಾಯ ತೆರಿಗೆ ಕಟ್ಟಲು ಜುಲೈ 31 ಕೊನೆ ದಿನವಾಗಿತ್ತು. ಆದರೆ ಇದೀಗ ಇದನ್ನು ಅಕ್ಟೋಬರ್ 31ರಿಂದ ನವೆಂಬರ್ 30ರವರೆಗೆ ವಿಸ್ತರಣೆ ಮಾಡಿದೆ. ಇದರ ಜತೆಗೆ ಟಿಡಿಎಸ್/ಟಿಸಿಎಸ್ನಲ್ಲಿ ಶೇ. 25ರಷ್ಟು ಕಡಿತಗೊಳಿಸಲಾಗಿದೆ. ಇದರಿಂದ ಇದರಿಂದ 50 ಸಾವಿರ ಕೋಟಿ ಉಳಿತಾಯವಾಗಲಿದೆ ಎಂದರು.
ಇಪಿಎಫ್ ಪಾವತಿ ಮಾಡಲು ಕೇಂದ್ರ ಸರ್ಕಾರ ನಿರ್ಧಾರ:
15 ಸಾವಿರಕ್ಕಿಂತ ಕಡಿಮೆ ಸಂಬಳ ಪಡೆಯುವರಿಗೆ ಇಪಿಎಫ್ ಪಾವತಿ ಮಾಡಲು ಕೇಂದ್ರ ಸರ್ಕಾರ ನಿರ್ಧಾರ ಮಾಡಿದ್ದು, 75.2 ಲಕ್ಷ ಕಾರ್ಮಿಕರಿಗೆ ಇಪಿಎಫ್ ಭರಿಸಲು ಕೇಂದ್ರ ಸರ್ಕಾರ ಮುಂದಾಗಿದ್ದು, ಕಂಪನಿ ಮತ್ತು ಕಾರ್ಮಿಕರ ಪಾಲಿನ ಪಿಎಫ್ ಹಣವನ್ನು ಮುಂದಿನ 3 ತಿಂಗಳು ಕೇಂದ್ರವೇ ಭರಿಸಲಿದೆ ಎಂದರು. 15 ಸಾವಿರ ರೂ. ಒಳಗಿರುವ ಸಂಬಳ ಪಡೆಯುವವರಿಗೆ ತಕ್ಷಣವೇ ಇಪಿಎಫ್ ಪಾವತಿ ಮಾಡಲಾಗುವುದು ಎಂದು ತಿಳಿಸಿದ್ದಾರೆ. ಇದರ ಜತೆಗೆ ಜೂನ್, ಜುಲೈ ಮತ್ತು ಅಗಸ್ಟ್ ತಿಂಗಳ ಪಿಎಫ್ ಹಣವನ್ನ ಪಾವತಿಸಲು ನಿರ್ಧರಿಸಿದೆ.