ETV Bharat / bharat

ಇಂದಿನಿಂದ ದೇಶದ ನಾಲ್ಕು ರಾಜ್ಯಗಳಲ್ಲಿ ಕೊರೊನಾ ‘ವ್ಯಾಕ್ಸಿನ್ ಡ್ರೈ ರನ್’ - ಜನವರಿ ತಿಂಗಳಿನಲ್ಲಿ ದೇಶಾದ್ಯಂತ ಕೊರೊನಾ ಲಸಿಕೆ ನೀಡುವ ಅಭಿಯಾನ

ಜನವರಿ ತಿಂಗಳಿನಲ್ಲಿ ದೇಶಾದ್ಯಂತ ಕೊರೊನಾ ಲಸಿಕೆ ನೀಡುವ ಅಭಿಯಾನಕ್ಕೆ ಚಾಲನೆ ನೀಡಲು ಕೇಂದ್ರ ಸರ್ಕಾರ ಸಿದ್ಧತೆ ನಡೆಸಿದೆ. ಇದರ ಪೂರ್ವಭಾವಿಯಾಗಿ ನಾಲ್ಕು ರಾಜ್ಯಗಳ ತಲಾ 2 ಜಿಲ್ಲೆಗಳಲ್ಲಿ ಡಿಸೆಂಬರ್ 28 ಮತ್ತು 29 ರಂದು ವ್ಯಾಕ್ಸಿನ್ ಡ್ರೈ ರನ್ ನಡೆಯಲಿದೆ.

Dry run of Covid-19 vaccination exercise begins today
ಇಂದಿನಿಂದ ದೇಶದ ನಾಲ್ಕು ರಾಜ್ಯಗಳಲ್ಲಿ ಕೊರೊನಾ ‘ವ್ಯಾಕ್ಸಿನ್ ಡ್ರೈ ರನ್’
author img

By

Published : Dec 28, 2020, 10:30 AM IST

ನವದೆಹಲಿ: 2020 ರಲ್ಲಿ ಇಡೀ ಜಗತ್ತನ್ನೇ ಬೆಚ್ಚಿ ಬೀಳಿಸಿದ ಮಹಾಮಾರಿ ಕೊರೊನಾ ತಡೆಗೆ ಕೊನೆಗೂ ಲಸಿಕೆ ದೊರೆತಿದೆ. ಕೋವಿಡ್​ನಿಂದ ಕಂಗಾಲಾಗಿದ್ದ ಜನರಿಗೆ ಹೊಸ ವರ್ಷಕ್ಕೆ ಸಂತಸದ ಸುದ್ದಿ ಸಿಗುವ ನಿರೀಕ್ಷೆಯಿದೆ. 2021ರ ಜನವರಿ ತಿಂಗಳಿನಲ್ಲಿ ದೇಶಾದ್ಯಂತ ಕೊರೊನಾ ಲಸಿಕೆ ನೀಡುವ ಅಭಿಯಾನಕ್ಕೆ ಚಾಲನೆ ನೀಡಲು ಕೇಂದ್ರ ಸರ್ಕಾರ ಸಿದ್ಧತೆ ನಡೆಸಿದೆ. ಇದರ ಪೂರ್ವಭಾವಿಯಾಗಿ ನಾಲ್ಕು ರಾಜ್ಯಗಳಲ್ಲಿ ಸೋಮವಾರ ಮತ್ತು ಮಂಗಳವಾರ 2 ದಿನ ವ್ಯಾಕ್ಸಿನ್ 'ಡ್ರೈ ರನ್' ನಡೆಸಲಿದೆ.

ಆಂಧ್ರಪ್ರದೇಶ, ಗುಜರಾತ್, ಪಂಜಾಬ್, ಅಸ್ಸೋಂ ರಾಜ್ಯಗಳ ತಲಾ 2 ಜಿಲ್ಲೆಗಳಲ್ಲಿ ಡಿಸೆಂಬರ್ 28 ಮತ್ತು 29 ರಂದು ವ್ಯಾಕ್ಸಿನ್ 'ಡ್ರೈ ರನ್' ನಡೆಯಲಿದೆ. ಕೋವಿಡ್ ಲಸಿಕೆ ಅಭಿಯಾನಕ್ಕೆ ಲಸಿಕೆ ಫಲಾನುಭವಿಗಳ ಹೆಸರು ನೊಂದಣಿ, ಲಸಿಕೆ ಸಾಗಣೆಯ ಆನ್​ಲೈನ್ ಮೇಲ್ವಿಚಾರಣೆ, ಲಸಿಕೆ ಪಡೆಯುವವರ ಆಯ್ಕೆ, ಲಸಿಕೆ ಕೇಂದ್ರಗಳಲ್ಲಿ ಫಲಾನುಭವಿಗಳಿಗೆ ಅಣಕು ಲಸಿಕೆ ಹಾಕುವುದು ಸೇರಿದಂತೆ ಇನ್ನಿತರ ಪ್ರಕ್ರಿಯೆಗಳನ್ನು ಕೋ-ವಿನ್ ಆ್ಯಪ್ ನಲ್ಲಿ ದಾಖಲಿಸಲಾಗುತ್ತದೆ.

ಇದನ್ನೂ ಓದಿ: ಕೋವಿಡ್ ಸಮಯದಲ್ಲಿ ಫಲಾನುಭವಿಗಳ ಖಾತೆಗಳಿಗೆ ಹಣ ವರ್ಗಾವಣೆ : ಬಿಹಾರಕ್ಕೆ ಡಿಜಿಟಲ್ ಇಂಡಿಯಾ ಪ್ರಶಸ್ತಿ

ಆರೋಗ್ಯ ಸಚಿವಾಲಯದ ಪ್ರಕಾರ, ನಾಲ್ಕು ರಾಜ್ಯಗಳ ಎರಡು ಜಿಲ್ಲೆಗಳಲ್ಲಿ ಜಿಲ್ಲಾ ಆಸ್ಪತ್ರೆ, ನಗರ ತಾಣ, ಖಾಸಗಿ ಆರೋಗ್ಯ ಸೌಲಭ್ಯ, ಗ್ರಾಮೀಣ ಪ್ರದೇಶ ಸೇರಿದಂತೆ ಅನೇಕ ಕಡೆ ವ್ಯಾಕ್ಸಿನ್ 'ಡ್ರೈ ರನ್' ಯೋಜಿಸಿದೆ. ಈ ನಾಲ್ಕು ರಾಜ್ಯಗಳಲ್ಲಿ ವ್ಯಾಕ್ಸಿನ್ ಡ್ರೈ ರನ್ ನಡೆಸಲು ವಿವರವಾದ ಪರಿಶೀಲನಾಪಟ್ಟಿಯನ್ನು ಕೇಂದ್ರ ಆರೋಗ್ಯ ಸಚಿವಾಲಯ ಸಿದ್ಧಪಡಿಸಿದ್ದು, ನಾಲ್ಕು ರಾಜ್ಯಗಳಿಗೂ ಮಾರ್ಗದರ್ಶನ ನೀಡಿದೆ.

ಭಾರತದಲ್ಲಿ ಇದುವರೆಗೆ ಯಾವುದೇ ಕಂಪನಿಯ ಕೊರೊನಾ ಲಸಿಕೆಯ ತುರ್ತು ಬಳಕೆಗೆ ಅನುಮೋದನೆ ದೊರೆತಿಲ್ಲ. ಆದರೆ, ಭಾರತದಲ್ಲಿ ಲಸಿಕೆಯ ಸಂಗ್ರಹ, ಸಾಗಾಟ ಮತ್ತು ಲಸಿಕೆ ನೀಡಲು ಸಿದ್ಧತೆಗಳು ನಡೆಯುತ್ತಿವೆ. ಭಾರತವು 8 ಕೋವಿಡ್ -19 ಲಸಿಕೆ ಅಭ್ಯರ್ಥಿಗಳನ್ನು ಹೊಂದಿದೆ. ಇದರಲ್ಲಿ ಮೂರು ಸ್ಥಳೀಯ ಲಸಿಕೆಗಳು ಸೇರಿವೆ. ಕ್ಲಿನಿಕಲ್ ಪ್ರಯೋಗಗಳ ವಿವಿಧ ಹಂತಗಳಲ್ಲಿರುವ ಈ ಲಸಿಕೆಗಳು ಭವಿಷ್ಯದಲ್ಲಿ ಅನುಮೋದನೆಗೊಳ್ಳುವ ನಿರೀಕ್ಷೆಯಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.