ಇತ್ತೀಚಿನ ದಿನಗಳಲ್ಲಿ ಮಾನವ ರಹಿತ ವೈಮಾನಿಕ ವಾಹನ (ಡ್ರೋಣ್)ನಿಂದಲೇ ಭದ್ರತಾ ಸಮಸ್ಯೆಗಳು ಹೆಚ್ಚಾಗುತ್ತಿವೆ. ಇತ್ತೀಚೆಗೆ ಸೌದಿ ಅರೇಬಿಯಾದ ಪ್ರಮುಖ ತೈಲ ಘಟಕಗಳ ಮೇಲೆ ನಡೆದ ಡ್ರೋನ್ ದಾಳಿ ನಡೆಸಿ ತೈಲಾಗಾರ ಹೊತ್ತಿ ಉರಿಯುವಂತೆ ಮಾಡಿ ಇಡೀ ಜಗತ್ತನ್ನೇ ಬೆಚ್ಚಿ ಬೀಳುವಂತೆ ಮಾಡಿತ್ತು. ಈ ಘಟನೆ ಮೆರೆಯುವ ಮುನ್ನವೇ ಪಂಜಾಬ್ ಗಡಿಯಲ್ಲಿ ಡ್ರೋನ್‌ಗಳ ಸಹಾಯದಿಂದ ಪಾಕಿಸ್ತಾನ ಶಸ್ತ್ರಾಸ್ತ್ರ ದಾಳಿ ನಡೆಸಿತು. ಅತ್ಯಾಧುನಿಕ ತಂತ್ರಜ್ಞಾನದ ಮೂಲಕ ಸಾಮಾಜಿಕ ಶಕ್ತಿಗಳು ದೇಶ-ದೇಶಗಳ ನಡುವೆ ಅರಾಜಕತೆ ಸೃಷ್ಟಿಸುತ್ತಿವೆ. ಇಂತಹ ಉದ್ವಿಗ್ನ ಪರಿಸ್ಥಿತಿಯಲ್ಲಿ ದೇಶಗಳು ತಮ್ಮ ಮೇಲ್ಮೈಯನ್ನು ಹೇಗೆ ರಕ್ಷಿಸಿಕೊಳ್ಳುತ್ತವೆ ಎಂಬುದು ಈಗ ಸವಾಲಾಗಿ ಪರಿಣಮಿಸಿದೆ.
ಡ್ರೋನ್ ಹೆಚ್ಚು ಉಪಯೋಗಿಸುವುದು ರಕ್ಷಣಾ ದಳಗಳೇ. ಸಮೀಕ್ಷೆ, ಡಾಕ್ಯುಮೆಂಟರಿ, ಕಾರ್ಯಕ್ರಮಗಳ ಚಿತ್ರೀಕರಣಕ್ಕೆ ಸೇರಿದಂತೆ ವಿಧ ವಿಧವಾಗಿ ಅದರ ಬಳಕೆ ಈಗ ಹೆಚ್ಚಾಗುತ್ತಲೇ ಇದೆ. ದೇಶದಲ್ಲಿ ಒಟ್ಟು 6 ಲಕ್ಷ ಡ್ರೋಣ್ಗಳು (ಅನುಮತಿ/ಅನಿಯಂತ್ರಿತ) ಕಾರ್ಯಾಚರಣೆ ನಡೆಸುತ್ತಿವೆ. ಇನ್ನು ಜಗತ್ತಿನಲ್ಲಿ ಎಷ್ಟಿರಬಹುದು. 2021ರ ವೇಳೆಗೆ ವಿಶ್ವದಾದ್ಯಂತ ಮಾನವ ರಹಿತ ವಿಮಾನ ಮಾರುಕಟ್ಟೆ ವ್ಯವಸ್ಥೆ ₹ 2,200 ಕೋಟಿ ಡಾಲರ್ಸ್ ತಲುಪಲಿದ್ದು, ಭಾರತದಲ್ಲೇ ₹ 88.6 ಕೋಟಿ ಡಾಲರ್ಸ್ ವಹಿವಾಟು ನಡೆಯುವ ಸಾಧ್ಯತೆ ಇದೆ ಎನ್ನಲಾಗ್ತಿದೆ.
ಅನಧಿಕೃತ ಡ್ರೋನ್‌ಗಳನ್ನು ಎದುರಿಸಲು ಶಸ್ತ್ರಸಜ್ಜಿತ ರಾಡಾರ್ ವ್ಯವಸ್ಥೆಯನ್ನು ಸರ್ಕಾರ ಮತ್ತು ರಕ್ಷಣಾ ಸಂಸ್ಥೆಗಳು ಸ್ಥಾಪಿಸಿದ್ದರೂ ಶಂಕಿತ ಡ್ರೋನ್‌ಗಳ ಪತ್ತೆ ಹಚ್ಚಲು ಮತ್ತು ಹೊಡೆದುರುಳಿಸಲು ವಿಫಲವಾದದ್ದು ಮತ್ತೊಂದು ಗಂಭೀರ ಸಮಸ್ಯೆಯಾಗಿದೆ. ಸೌದಿ ಅರೇಬಿಯಾದ ತೈಲ ಘಟಕಗಳ ಮೇಲೆ ದಾಳಿ, ಪಂಜಾಬ್ ಗಡಿಯಲ್ಲಿ ದಾಳಿ, ಅಮೆರಿಕದಲ್ಲಿ ಮಾಹಿತಿ ಕಳುವು ಸೇರಿದಂತೆ ಹಲವು ಘಟನೆಗಳ ಜರುಗಿದ ಉದಾಹರಣೆಗಳು ನಮ್ಮ ಕಣ್ಣಮುಂದಿವೆ. ಈ ಬಗ್ಗೆ ಎಲ್ಲ ದೇಶಗಳು ಮುಂಜಾಗ್ರತೆ ಕ್ರಮ ಕೈಗೊಳ್ಳಬೇಕಾಗುವುದು ಅನಿವಾರ್ಯ. ಪ್ರಸ್ತುತ ನಿಷೇಧಿತ ಪ್ರದೇಶಗಳಿಗೆ ಡ್ರೋಣ್ ಹಾರಬಿಟ್ಟು ಕೆಲವು ಪ್ರತ್ಯೇಕ ಕಂಪ್ಯೂಟರ್ ಅಪ್ಲಿಕೇಷನ್ಸ್ ಮೂಲಕ ವಿವಿಧ ದೇಶಗಳ ಗುಪ್ತ ಮಾಹಿತಿ ಚೀನಾ ಸಂಗ್ರಹಿಸುತ್ತಿದೆ ಎಂಬ ಆರೋಪ ಬಲವಾಗಿ ಕೇಳಿಬರುತ್ತಿದೆ.
ಮಾರುಕಟ್ಟೆಯಲ್ಲಿ ಅತ್ಯಂತ ಕಡಿಮೆ ದರದಲ್ಲಿ ಸಿಗುವ ಕಾರಣ ಡ್ರೋಣ್ಗೆ ಬೇಡಿಕೆ ಹೆಚ್ಚಾಗಿದೆ. ಪ್ರಪಂಚದಲ್ಲಿ ಕಾರ್ಯಾಚರಣೆ ನಡೆಸುತ್ತಿರುವ ಶೇ.70ರಷ್ಟು ಡ್ರೋಣ್ಗಳನ್ನು ತಯಾರಿಕೆಯಲ್ಲಿ ಪ್ರಮುಖ ಪಾತ್ರವಹಿಸಿರುವುದು ಚೀನಾ ಎಂಬ ಮಾಹಿತಿಯೂ ಇದೆ. ಭಾರತದಲ್ಲಿ ಇಲ್ಲಿಯವರೆಗೂ ಡಾಕ್ಯುಮೆಂಟರಿ ಚಿತ್ರೀಕರಣ, ಸರ್ಕಾರಕ್ಕೆ ಸಂಬಂಧಿಸಿದ ಸರ್ವೇಗಳಿಗೆ (ಖಾಸಗಿ) ಮಾತ್ರ ಡ್ರೋಣ್ ಬಳಕೆಗೆ ಅವಕಾಶ ಇತ್ತು. ಕಳೆದ ಡಿಸೆಂಬರ್ನಲ್ಲಿ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (ಡಿಜಿಸಿಎ) ಈ ನಿಯಮ ಸಡಿಲಿಸಿತು. ಅದೇ ಸಮಯದಲ್ಲಿ ವಾಣಿಜ್ಯ ಡ್ರೋಣ್ ಮೀರಿಸುವ ಸಾಮರ್ಥ್ಯವುಳ್ಳ ಡ್ರೋಣ್ಗಳನ್ನು ಪರಿಗಣನೆಗೆ ತೆಗೆದುಕೊಳ್ಳಲು ಆಸಕ್ತ ಕಂಪನಿಗಳಿಂದ ಮೇನಲ್ಲಿ ಅರ್ಜಿಗಳನ್ನು ಸ್ವೀಕರಿಸಿತು.
ಹೆಚ್ಚು ಸಾಮರ್ಥ್ಯವುಳ್ಳವು ಯಾವುವು?:
ಕೀಟನಾಶಕವನ್ನು ಡ್ರೋನ್ ಮೂಲಕ ಬೆಳೆಗಳ ಮೇಲೆ ಸಿಂಪಡಿಸುವುದರಿಂದ ರೈತರ ಆರೋಗ್ಯದ ಮೇಲೆ ರಾಸಾಯನಿಕ ಪರಿಣಾಮ ಕಡಿಮೆಯಾಗುತ್ತದೆ. ಸರಿಯಾದ ಸಾರಿಗೆ ಇಲ್ಲದ ಪ್ರದೇಶಗಳಿಗೆ ಔಷಧ ಮತ್ತು ರಕ್ತ ಸಾಗಿಸಲು ಇದು ಸುಲಭವಾಗುತ್ತದೆ. ಶಸ್ತ್ರಚಿಕಿತ್ಸೆ ಸಂದರ್ಭದಲ್ಲಿ ಅಂಗಗಳನ್ನು ಚಲಿಸಲು ಡ್ರೋನ್ ಬಳಸಲಾಗುತ್ತದೆ. ಸುಮಾರು 40ಸಾವಿರ ಹಳ್ಳಿಗಳ ಗಡಿ, ಕಾಲುವೆಗಳು ಮತ್ತು ರಸ್ತೆಗಳನ್ನು ಡ್ರೋನ್ ಸಹಾಯದಿಂದ ಗುರುತಿಸಲು ಸಮೀಕ್ಷೆಗಾಗಿ ಕೇಂದ್ರದೊಂದಿಗೆ ಮಹಾರಾಷ್ಟ್ರ ಸರ್ಕಾರ ಒಪ್ಪಂದ ಮಾಡಿಕೊಂಡಿದೆ.
ಡ್ರೋನ್ ತಂತ್ರಜ್ಞಾನವನ್ನು ಹೆಚ್ಚಾಗಿ ಉಪಯೋಗಿಸಿಕೊಳ್ಳುವಲ್ಲಿ ತೆಲುಗು ರಾಜ್ಯಗಳು ಮುಂದಿವೆ. ಆಂಧ್ರಪ್ರದೇಶ ಡ್ರೋನ್ ಕಾರ್ಪೊರೇಷನನ್ನು ಸ್ಥಾಪಿಸಲು ಮುಂದಾಗಿದೆ. ತೆಲಂಗಾಣವು 'ಡ್ರೋನ್ ಸಿಟಿ ಆಫ್ ತೆಲಂಗಾಣ' ಹೆಸರಿನಲ್ಲಿ ಬೆವ್ಲೋಸ್ ಮಾದರಿ ಬಿಡುಗಡೆಗೆ ಈ ವರ್ಷದ ಜುಲೈನಲ್ಲಿ ನಾಗರಿಕ ವಿಮಾನಯಾನ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿದೆ. ಅಷ್ಟೇ ಅಲ್ಲದೆ, ಇನ್ನಷ್ಟು ನೂತನವಾಗಿ ಆವಿಷ್ಕರಿಸುವಲ್ಲಿ ದೇಶದ 50 ಸಂಸ್ಥೆಗಳು ಮಗ್ನವಾಗಿವೆ.
ದೇಶದಲ್ಲಿ ಡ್ರೋಣ್ಗೆ ಬೇಡಿಕೆಗೆ ಹೆಚ್ಚಾದ ಪರಿಣಾಮ ನಾಗರಿಕ ವಿಮಾನಯಾನ 'ಡಿಜಿಟಲ್ ಸ್ಕೈ' ಎಂಬ ವೇದಿಕೆ ರಚಿಸಿದೆ. ನಾಗರಿಕ ಸೇವೆಗಾಗಿ ಡ್ರೋಣ್ ಬಳಸಲು ವೇದಿಕೆ ಅನುಮತಿ ಕಡ್ಡಾಯ. 250 ಗ್ರಾಂಗಿಂತ ಕಡಿಮೆ ತೂಕ ಹೊರಬಲ್ಲ ಹಾಗೂ 50 ಅಡಿಗಳ ಮೇಲೆ ಹಾರಬಲ್ಲ ಡ್ರೋಣ್ಗೆ ಅನುಮತಿ ಬೇಕಿಲ್ಲ. ಇದಕ್ಕಿಂತ ಮಿತಿ ಮೀರಿದಾಗ ಅದು ಅನುಮತಿ ಕಡ್ಡಾಯ. ಮಾರುಕಟ್ಟೆಗೆ ಲಗ್ಗೆ ಇಡುತ್ತಿರುವ ಲಕ್ಷಾಂತರ ಡ್ರೋನ್‌ಗಳಿಂದ ಉಂಟಾಗುವ ಸುರಕ್ಷತಾ ವಿಷಯಗಳ ಬಗ್ಗೆ ಈಗ ಕಳವಳ ವ್ಯಕ್ತವಾಗಿದೆ.
ಹೈದರಾಬಾದಿನ ಕೆಲವು ನಗರಗಳಲ್ಲಿ ರಾಜ್ಯ ನೈಪುಣ್ಯ ಶಿಕ್ಷಣ ಸಂಸ್ಥೆಯ (ಎಸ್ಎಸ್ಟಿಐ) ಮೂಲಕ ಇಲ್ಲಿನ ಸರ್ಕಾರ 'ಡ್ರೋಣ್ ಹೈಲೆಟ್' ಕೋರ್ಸ್ ಪ್ರಾರಂಭಿಸಿದೆ. ಜನನಿಬಿಡ ಪ್ರದೇಶಗಳಲ್ಲಿ ಪ್ರಮಾದ ಎದುರಾಗುವ ಸಂಭವ ಹೆಚ್ಚಿರುತ್ತದೆ. ಇದು ರಾಷ್ಟ್ರ ಮಟ್ಟದ ಸಮಸ್ಯೆ. ಹೀಗಾಗಿ ಭದ್ರತಾ ಸಮಸ್ಯೆಗಳನ್ನು ಪರಿಹರಿಸಲು ಡ್ರೋನ್‌ಗಳ ಬಳಕೆಯ ಕುರಿತು ಸ್ಪಷ್ಟ ನಿಯಮಗಳನ್ನು ರೂಪಿಸುವುದು ಈಗ ಎಲ್ಲದಕ್ಕಿಂತ ಅತ್ಯವಶ್ಯಕವಾಗಿದೆ.
-ಅನಿಲ್ಕುಮಾರ್ ಲೋಡಿ