ಪೂಂಚ್ : ಪಾಕಿಸ್ತಾನ ಸೇನೆಯಿಂದ ಕದನ ವಿರಾಮ ಉಲ್ಲಂಘನೆಯ ಮಧ್ಯೆ, ಮೆಂಧರ್ ವಲಯದಲ್ಲಿ ನಿಯಂತ್ರಣ ರೇಖೆಯ (ಎಲ್‌ಒಸಿ) ಉದ್ದಕ್ಕೂ ಶನಿವಾರ ರಾತ್ರಿ ಡ್ರೋನ್ ಚಲನೆ ಕಂಡು ಬಂದಿದೆ ಎಂದು ಮೂಲಗಳು ತಿಳಿಸಿವೆ.
ಇದಕ್ಕೂ ಮುನ್ನ ಸಾಂಬಾ ಸೆಕ್ಟರ್‌ನಲ್ಲಿ ಅಂತಾರಾಷ್ಟ್ರೀಯ ಗಡಿಯುದ್ದಕ್ಕೂ ಶುಕ್ರವಾರ ಪಾಕ್‌ನ ಕಡೆಯಿಂದ ಬಂದ ಎರಡು ಡ್ರೋನ್‌ಗಳನ್ನು ಗುರುತಿಸಲಾಗಿದೆ. ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಮೂಲಗಳ ಪ್ರಕಾರ, ಎರಡು ಡ್ರೋನ್‌ಗಳು ಪಾಕಿಸ್ತಾನದ ದಿಕ್ಕಿನಿಂದ ಬಂದು ಶುಕ್ರವಾರ ಸಂಜೆ 6 ಗಂಟೆ ಸುಮಾರಿಗೆ ಜಮ್ಮು ಮತ್ತು ಕಾಶ್ಮೀರದ ಸಾಂಬಾ ಸೆಕ್ಟರ್‌ನಲ್ಲಿ ಅಂತಾರಾಷ್ಟ್ರೀಯ ಗಡಿ ದಾಟಿವೆ.
ಬಿಎಸ್ಎಫ್ ಪಡೆಗಳು ಈ ಡ್ರೋನ್ಗಳ ಮೇಲೆ ಗುಂಡು ಹಾರಿಸಿದ್ದಾರೆ.