ನವದೆಹಲಿ: ಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ 2020 ರ ಡಿಸೆಂಬರ್ 30 ರ ವರೆಗೆ ಚಾಲನಾ ಪರವಾನಗಿ ಮತ್ತು ಅಗತ್ಯ ದಾಖಲೆಗಳ ಮಾನ್ಯತೆಯನ್ನು ವಿಸ್ತರಿಸಲು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ನಿರ್ಧರಿಸಿದೆ.

ಸಚಿವಾಲಯವು ಈ ಹಿಂದೆ ದಾಖಲೆಗಳ ಮಾನ್ಯತೆಯನ್ನು ಸೆಪ್ಟೆಂಬರ್ 30 ರವರೆಗೆ ವಿಸ್ತರಿಸಿತ್ತು.
ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಚಾಲನಾ ಪರವಾನಗಿ, ನೋಂದಣಿ ಅಥವಾ ಇತರ ದಾಖಲೆಗಳ ಮಾನ್ಯತೆಯನ್ನು ಮೋಟಾರು ವಾಹನ ಕಾಯ್ದೆ 1988 ಮತ್ತು ಕೇಂದ್ರ ಮೋಟಾರು ವಾಹನ ನಿಯಮಗಳು 1989 ರ ಅಡಿಯಲ್ಲಿ 2020 ರ ಡಿಸೆಂಬರ್ 30 ರವರೆಗೆ ವಿಸ್ತರಿಸಲು ನಿರ್ಧರಿಸಿದೆ ಎಂದು ತಿಳಿಸಿದೆ.