ETV Bharat / bharat

ಮ್ಯಾನ್ಮಾರ್​ನಿಂದ ಸಾಗಿಸುತ್ತಿದ್ದ 2.25 ಕೋಟಿ ರೂ. ಮೌಲ್ಯದ ಚಿನ್ನ ವಶಕ್ಕೆ: ಓರ್ವನ ಬಂಧನ - ಆದಾಯ ಗುಪ್ತಚರ ನಿರ್ದೇಶನಾಲಯ

ಮ್ಯಾನ್ಮಾರ್​ನಿಂದ ಚಿನ್ನವನ್ನು ಕಳ್ಳಸಾಗಣೆ ಮಾಡಲಾಗುತ್ತಿದ್ದ ಓರ್ವನನ್ನು ಬಂಧಿಸಿ, 2.25 ಕೋಟಿ ರೂಪಾಯಿ ಮೊತ್ತದ ಚಿನ್ನವನ್ನು ಪಾಟ್ನಾದಲ್ಲಿ ಜಪ್ತಿ ಮಾಡಲಾಗಿದೆ.

representational image
ಪ್ರಾತಿನಿಧಿಕ ಚಿತ್ರ
author img

By

Published : Dec 6, 2020, 7:43 PM IST

ಪಾಟ್ನಾ (ಬಿಹಾರ): ಆದಾಯ ಗುಪ್ತಚರ ನಿರ್ದೇಶನಾಲಯವು ದೆಹಲಿಯಿಂದ ಹೊರಟಿದ್ದ ರೈಲಿನ ಮೇಲೆ ಪಾಟ್ನಾದಲ್ಲಿ ದಾಳಿ ನಡೆಸಿದ್ದು, ಸುಮಾರು 2.25 ಕೋಟಿ ರೂಪಾಯಿ ಮೊತ್ತದ 4 ಕೆ.ಜಿಯಷ್ಟು ಚಿನ್ನದ ಗಟ್ಟಿಗಳನ್ನು ಜಪ್ತಿ ಮಾಡಿದೆ.

ದಿಬ್ರೂಗಢ-ದೆಹಲಿ ವಿಶೇಷ ರೈಲಿನಲ್ಲಿ ಕಾರ್ಯಾಚರಣೆ ನಡೆಸಿದ ಅಧಿಕಾರಿಗಳು 26 ಚಿನ್ನದ ಗಟ್ಟಿಗಳನ್ನು ವಶಕ್ಕೆ ಪಡೆದಿದ್ದಾರೆ. ಚಿನ್ನ ಅಕ್ರಮ ಸಾಗಾಣಿಕ ಆರೋಪದಲ್ಲಿ ಓರ್ವ ವ್ಯಕ್ತಿಯನ್ನು ಅಧಿಕಾರಿಗಳು ಬಂಧಿಸಿದ್ದು, ವಿಚಾರಣೆಗೆ ಒಳಪಡಿಸಲಾಗಿದೆ.

ಇದನ್ನೂ ಓದಿ: ಏರ್​ಪೋರ್ಟ್​ನಲ್ಲಿ ಚಿನ್ನ, 1.79 ಕೋಟಿ ರೂ. ಮೌಲ್ಯದ ಸಿಗರೇಟ್ ಕಳ್ಳಸಾಗಣೆಗೆ ಯತ್ನ: 6 ಮಂದಿ ಅರೆಸ್ಟ್​

ಬಂಧಿತನು ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಗೆ ಸೇರಿದ್ದು, ಈತ ಸಾಗಿಸುತ್ತಿದ್ದ ಚಿನ್ನದ ಬಗ್ಗೆ ಸರಿಯಾದ ದಾಖಲೆಗಳನ್ನು ನೀಡದ ಕಾರಣಕ್ಕೆ ಆತನನ್ನು ಬಂಧಿಸಲಾಗಿದೆ ಎಂದು ಆದಾಯ ಗುಪ್ತಚರ ನಿರ್ದೇಶನಾಲಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮ್ಯಾನ್ಮಾರ್​ನಿಂದ ಚಿನ್ನವನ್ನು ಕಳ್ಳ ಸಾಗಣೆ ಮಾಡಲಾಗುತ್ತಿತ್ತು ಎಂದು ತಿಳಿದುಬಂದಿದ್ದು, ವಿಚಾರಣೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇತ್ತೀಚೆಗಷ್ಟೇ ಪಾಟಲೀಪುತ್ರ ರೈಲ್ವೆ ನಿಲ್ದಾಣದಲ್ಲಿ 12 ಚಿನ್ನದ ಗಟ್ಟಿಗಳನ್ನು ಜಪ್ತಿ ಮಾಡಲಾಗಿತ್ತು. ಈ ಪ್ರಕರಣದಲ್ಲಿ ಇಬ್ಬರನ್ನು ಬಂಧಿಸಿ, ವಿಚಾರಣೆ ನಡೆಸಲಾಗಿತ್ತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.