ETV Bharat / bharat

ಆರಕ್ಷಕರಿಗೂ ಡ್ರೆಸ್​ ಕೋಡ್: ಜೀನ್ಸ್​, ಟೀ-ಶರ್ಟ್​ ಧರಿಸಿದ್ರೆ ಗಂಭೀರ ಕ್ರಮ - news kannada

ಪೊಲೀಸರು ಕರ್ತವ್ಯ ವೇಳೆ ಜೀನ್ಸ್​, ಟೀ-ಶರ್ಟ್​ಗಳನ್ನು ಧರಿಸಬಾರದೆಂದು ದೆಹಲಿ ಡಿಸಿಪಿ ಕಚೇರಿಯಿಂದ ಸೂಚನೆಯೊಂದು ಹೊರಬಿದ್ದಿದೆ. ಆಯಾ ಪೊಲೀಸ್​ ಇಲಾಖೆಗೆ ಈ ಬಗ್ಗೆ ಪತ್ರ ಬರೆದಿರುವ ಡಿಸಿಪಿ ಅನಂತ್​ ಮಿತ್ತಲ್​ ಫಾರ್ಮಲ್​ ಬಟ್ಟೆಗಳನ್ನಷ್ಟೇ ಧರಿಸಬೇಕೆಂದು ತಿಳಿಸಿದ್ದಾರೆ.

ಆರಕ್ಷಕರಿಗೂ ಡ್ರೆಸ್​ ಕೋಡ್
author img

By

Published : Jul 20, 2019, 2:40 PM IST

ನವದೆಹಲಿ: ಕರ್ತವ್ಯ ನಿರತರಾಗಿರುವ ಪೊಲೀಸರು ಇನ್ನು ಮುಂದೆ ಜೀನ್ಸ್​, ಟೀ-ಶರ್ಟ್​, ಆ್ಯಕ್ಷನ್​ ಶೂಗಳನ್ನು ಧರಿಸುವಂತಿಲ್ಲ. ಹಾಗೊಮ್ಮೆ ಕಂಡುಬಂದ್ರೆ ಶಿಸ್ತು ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಲಾಗಿದೆ.

ದೆಹಲಿ ಡಿಸಿಪಿ ಕಚೇರಿಯಿಂದ ಹೊರಬಿದ್ದಿರುವ ಸೂಚನೆ ಇದಾಗಿದ್ದು, ಇನ್ನುಮುಂದೆ ರಾಜಧಾನಿಯಲ್ಲಿ ಪೊಲೀಸರು ಕರ್ತವ್ಯ ನಿರತರಾಗಿರುವ ವೇಳೆ ಫಾರ್ಮಲ್​ ಬಟ್ಟೆಗಳನ್ನಷ್ಟೇ ಧರಿಸಬೇಕಂತೆ. ಈ ಡ್ರೆಸ್​ಕೋಡ್​ ಪುರುಷ ಸಿಬ್ಬಂದಿಗೆ ಮಾತ್ರ ಸೀಮಿತವಲ್ಲ. ಮಹಿಳಾ ಪೊಲೀಸರಾದರೆ ಸೀರೆ, ಸಲ್ವಾರ್​, ಸೂಟ್​, ಶರ್ಟ್​ಗಳನ್ನು ಧರಿಸುವ ಅವಕಾಶವಿದೆ ಎಂದು ಸೂಚನೆ ನೀಡಲಾಗಿದೆ.

dress code for Delhi police
ದೆಹಲಿ ಡಿಸಿಪಿ ಕಚೇರಿಯಿಂದ ಬಂದ ಪತ್ರ

ಸಿಬ್ಬಂದಿ ಇನ್ನು ಮುಂದೆ ಜೀನ್ಸ್​, ಟೀ-ಶರ್ಟ್​, ಸ್ಪೋಟ್ಸ್​ ಶೂ, ಟಾಪ್​, ಲೇ ವೇಸ್ಟ್​ ಪ್ಯಾಂಟ್​ಗಳನ್ನು ಧರಿಸುವಂತಿಲ್ಲ ಎಂದು ಡಿಸಿಪಿ ಅನಂತ್​ ಮಿತ್ತಲ್​ ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.

Intro:Body:

ಆರಕ್ಷಕರಿಗೂ ಡ್ರೆಸ್​ ಕೋಡ್​.. ಜೀನ್ಸ್​, ಟಿ ಶರ್ಟ್​ ಧರಿಸಿದ್ರೆ ಗಂಭೀರ ಕ್ರಮ

ನವದೆಹಲಿ: ಕರ್ತವ್ಯ ನಿರತವಾಗಿರುವ ಪೊಲೀಸರು ಇನ್ನುಮುಂದೆ ಜೀನ್ಸ್​, ಟಿಶರ್ಟ್​, ಆ್ಯಕ್ಷನ್​ ಶೂಗಳನ್ನು ಧರಿಸುವಂತಿಲ್ಲ. ಹಾಗೊಮ್ಮೆ ಕಂಡುಬಂದ್ರೆ ಶಿಸ್ತು ಕ್ರಮ ಕೈಗೊಳ್ಳಬೇಕಾಗುತ್ತದೆ. 

ದೆಹಲಿ ಡಿಸಿಪಿ ಕಚೇರಿಯಿಂದ ಹೊರಬಿದ್ದಿರುವ ಸೂಚನೆ ಇದಾಗಿದ್ದು, ಇನ್ನುಮುಂದೆ ರಾಜಧಾನಿಯಲ್ಲಿ ಪೊಲೀಸರು ಕರ್ತವ್ಯ ನಿರತರಾಗಿರುವ ವೇಳೆ ಫಾರ್ಮಲ್​ ಬಟ್ಟೆಗಳನ್ನಷ್ಟೇ ಧರಿಸಬೇಕಂತೆ. 

ಈ ಡ್ರೆಸ್​ಕೋಡ್​ ಪುರುಷ ಸಿಬ್ಬಂದಿಗೆ ಮಾತ್ರ ಸೀಮಿತವಲ್ಲ. ಮಹಿಳಾ ಪೊಲೀಸರಾದರೆ ಸೀರೆ, ಸಲ್ವಾರ್​, ಸೂಟ್​, ಶರ್ಟ್​ಗಳನ್ನು ಧರಿಸುವ ಅವಕಾಶವಿದೆ ಎಂದು ಸೂಚನೆ ನೀಡಲಾಗಿದೆ. 

ಸಿಬ್ಬಂದಿ ಇನ್ನುಮುಂದೆ ಜೀನ್ಸ್​, ಟಿಶರ್ಟ್​, ಸ್ಪೋಟ್ಸ್​ ಶೂ, ಟಾಪ್​, ಲೇ ವೇಸ್ಟ್​ ಪ್ಯಾಂಟ್​ಗಳನ್ನು ಧರಿಸುವಂತಿಲ್ಲ ಎಂದು ಡಿಸಿಪಿ  ಅನಂತ್​ ಮಿತ್ತಲ್​ ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.