ಕರ್ನೂಲ್ (ಆಂಧ್ರ ಪ್ರದೇಶ): ಸೈನಿಕರ ಹೆಗಲ ಮೇಲೆ ಹೊತ್ತು ಉಡಾಯಿಸಬಲ್ಲ ದೇಶಿ ನಿರ್ಮಿತ ಹಗುರ ಕ್ಷಿಪಣಿ ಪರೀಕ್ಷಾರ್ಥ ಪ್ರಯೋಗ ಯಶಸ್ವಿಗೊಂಡಿದೆ.
ರಕ್ಷಣಾ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆಯು (ಡಿಆರ್‌ಡಿಒ), ಆಂಧ್ರಪ್ರದೇಶದ ಕರ್ನೂಲ್ನಲ್ಲಿ ಸ್ಥಳೀಯವಾಗಿ ಅಭಿವೃದ್ಧಿಪಡಿಸಲಾದ ಕಡಿಮೆ ತೂಕದ ಕ್ಷಿಪಣಿ ಪ್ರಯೋಗವನ್ನು ಪೋರ್ಟಬಲ್ ಲಾಂಚ್ ಪ್ಯಾಡ್ ಮೂಲಕ ಪ್ರಯೋಗ ನಡೆಸಲಾಗಿದ್ದು, ನಿಖರವಾದ ಗುರಿ ತಲುಪುವಲ್ಲಿ ಯಶಸ್ವಿಯಾಗಿದೆ. ಕ್ಷಿಪಣಿಯು ಉದ್ದೇಶಿತ ಗುರಿಯನ್ನು ತಲುಪಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಎಂಪಿಎಟಿಜಿಎಂನ ಯಶಸ್ವಿ ಪರೀಕ್ಷೆಯ ಮೂರನೇ ಸರಣಿಯಾಗಿದೆ. ಕ್ಷಿಪಣಿಯನ್ನು ಸುಧಾರಿತ ಏವಿಯಾನಿಕ್ಸ್ ಜೊತೆಗೆ ಅತ್ಯಾಧುನಿಕ ಇನ್ಫ್ರಾರೆಡ್ ಇಮೇಜಿಂಗ್ ಸೀಕರ್ನೊಂದಿಗೆ ಸಂಯೋಜಿಸಲಾಗಿದೆ. 3ನೇ ತಲೆಮಾರಿನ ಮ್ಯಾನ್ ಪೋರ್ಟಬಲ್ ಆಂಟಿ- ಟ್ಯಾಂಕ್ ಗೈಡೆಡ್ ಕ್ಷಿಪಣಿಯನ್ನು ಸೈನಿಕರು ಗುಡ್ಡ- ಗಾಡು ಪ್ರದೇಶಗಳ ಮೇಲೆ ಹೊತ್ತೊಯ್ದು ವೈರಿ ಪಡೆಗಳು ಗುರಿಯಾಗಿಸಿ ದಾಳಿ ನಡೆಸಬಹುದು. ಇದರಿಂದ ಭಾರತೀಯ ಸೈನ್ಯೆಗೆ ಇನ್ನಷ್ಟು ಬಲ ತುಂಬಲಿದೆ.
ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ ಈ ಕಾರ್ಯವನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಶ್ಲಾಘಿಸಿದ್ದಾರೆ.