ಡೆಹ್ರಾಡೂನ್(ಉತ್ತರಾಖಂಡ): ಕೊರೊನಾ ವೈರಸ್ ಸಾಂಕ್ರಾಮಿಕ ಹರಡುವುದನ್ನು ತಡೆಯಲು ಸಾಮಾಜಿಕ ದೂರವನ್ನು ಅನುಸರಿಸುವುದು ಮತ್ತು ನೈರ್ಮಲ್ಯೀಕರಣವನ್ನು ಕಾಪಾಡಿಕೊಳ್ಳುವುದು ಕಷ್ಟಕರವಾಗಿರುವ ಸಮಯದಲ್ಲಿ, ನಗರದ ವಿಜ್ಞಾನಿ ಶಬ್ಬೀರ್ ಅಹ್ಮದ್ ಅವರು ಹ್ಯಾಂಡ್‌ವಾಶ್ ಘಟಕವನ್ನು ಅಭಿವೃದ್ಧಿಪಡಿಸಿದ್ದು, ಇದನ್ನು ಕೇವಲ ಕಾಲಿನ ಸಹಾಯದಿಂದಲೇ ನಿರ್ವಹಿಸಬಹುದಾಗಿದೆ.
ಐಐಟಿ - ರೂರ್ಕಿ ಮತ್ತು ಡಿಆರ್‌ಡಿಒಗೆ ಸಂಬಂಧಿಸಿದ ವಿಜ್ಞಾನಿ ಶಬ್ಬೀರ್ ಅಹ್ಮದ್ ವಿಶಿಷ್ಟ ಹ್ಯಾಂಡ್‌ವಾಶ್ ಘಟಕವನ್ನು ಅಭಿವೃದ್ಧಿಪಡಿಸಿದ್ದಾರೆ. ಹಲವು ಬಗೆಯ ಹ್ಯಾಂಡ್‌ವಾಶ್, ಸ್ಯಾನಿಟೈಸರ್ ಉತ್ಪನ್ನಗಳು ಈಗಾಗಲೇ ಮಾರುಕಟ್ಟೆಯಲ್ಲಿ ಲಭ್ಯವಿದಲ್ಲಿದ್ದರೂ, ಅಹ್ಮದ್ ಅವರ ಆವಿಷ್ಕಾರವು ಹೆಚ್ಚು ಬಳಕೆದಾರ ಸ್ನೇಹಿಯಾಗಿದೆ.
ಈ ಕುರಿತು ಈಟಿವಿ ಭಾರತದೊಂದಿಗೆ ಮಾತನಾಡಿದ ಶಬ್ಬೀರ್, " ಹ್ಯಾಂಡ್‌ವಾಶ್ ಬಳಸುವಾಗ ಒಬ್ಬರು ಮುಟ್ಟಿದ ಮುಚ್ಚಳವನ್ನು ಅನೇಕ ಜನರು ಬಳಸುತ್ತಾರೆ. ಇದರಿಂದಾಗಿ ಸೋಂಕಿಗೆ ಒಳಗಾಗುವ ಸಾಧ್ಯತೆಯನ್ನು ಹೆಚ್ಚಿಸುತ್ತದೆ. ಇದನ್ನು ಗಮನದಲ್ಲಿಟ್ಟುಕೊಂಡು, ನಾನು ಕಾಲಿನಿಂದ ಟ್ಯಾಪ್ ಮಾಡಿದಾಗ ಸೋಪಿನ ನೀರು ಹೊರಬರುವ ಘಟಕವನ್ನು ಅಭಿವೃದ್ಧಿಪಡಿಸಿದ್ದೇನೆ" ಎಂದಿದ್ದಾರೆ.
ಹ್ಯಾಂಡ್‌ವಾಶ್ ಘಟಕ 22 ಅಡಿ ಅಗಲ ಮತ್ತು 2 ಅಡಿ ಎತ್ತರ ಮತ್ತು 25 ಕೆಜಿ ತೂಕ ಇದ್ದು, ವಿದ್ಯುತ್ ಸಹಾಯವಿಲ್ಲದೇ ಕಾರ್ಯ ನಿರ್ವಹಿಸುತ್ತದೆ. ಇನ್ನೂ, ಘಟಕದ ಮೊದಲ ಮಾದರಿಯನ್ನು ಶಬ್ಬೀರ್ ಉತ್ತರಾಖಂಡದ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ಅವರಿಗೆ ಪ್ರಸ್ತುತಪಡಿಸುವ ಇಚ್ಛೆ ವ್ಯಕ್ತಪಡಿಸುತ್ತಿದ್ದಾರೆ.