ನವದೆಹಲಿ: ದೇಶದಲ್ಲಿ ಸೌಮ್ಯ ಲಕ್ಷಣದ ಕೋವಿಡ್-19ಗೆ ಚಿಕಿತ್ಸೆ ನೀಡಲು ಅವಿಗನ್ (ಫಾವಿಪಿರವಿರ್) ಮಾತ್ರೆಗಳನ್ನು ಬಿಡುಗಡೆ ಮಾಡುವುದಾಗಿ ಡಾ. ರೆಡ್ಡಿಸ್ ಪ್ರಯೋಗಾಲಯಗಳು ಪ್ರಕಟಿಸಿವೆ.
ಈ ಮಾತ್ರೆ ಬಿಡುಗಡೆಯು ಫ್ಯೂಜಿಫಿಲ್ಮ್ ಟೊಯಾಮಾ ಕೆಮಿಕಲ್ ಕೋ ಲಿಮಿಟೆಡ್‌ನೊಂದಿಗಿನ ಜಾಗತಿಕ ಪರವಾನಗಿ ಒಪ್ಪಂದದ ಒಂದು ಭಾಗವಾಗಿದ್ದು, ಭಾರತದಲ್ಲಿ ಅವಿಗನ್ (ಫಾವಿಪಿರವಿರ್) 200 ಮಿ.ಗ್ರಾಂ ಮಾತ್ರೆಗಳನ್ನು ತಯಾರಿಸಲು, ಮಾರಾಟ ಮಾಡಲು ಹಾಗೂ ವಿತರಿಸಲು ಒಪ್ಪಿಕೊಂಡಿದೆ ಎಂದಿದೆ.
ಸೌಮ್ಯ ಹಾಗೂ ಮಧ್ಯಮ ಲಕ್ಷಣದ ಕೋವಿಡ್ ರೋಗಿಗಳ ಚಿಕಿತ್ಸೆಗಾಗಿ ಅವಿಗನ್ ಅನ್ನು ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (ಡಿಸಿಜಿಐ) ಅನುಮೋದಿಸಿದೆ ಎಂದು ಡಾ. ರೆಡ್ಡಿಸ್ ತಿಳಿಸಿದೆ.
ಉತ್ತಮ ಗುಣಮಟ್ಟದ ಮತ್ತು ಪರಿಣಾಮಕಾರಿತ್ವದ ಅಗತ್ಯತೆ, ಕೈಗೆಟುಕುವ ಸಾಮರ್ಥ್ಯ ಮತ್ತು ಉತ್ತಮ ರೋಗ ನಿರ್ವಹಣೆಯು ನಮ್ಮ ಪ್ರಮುಖ ಆದ್ಯತೆಗಳಾಗಿವೆ. ಭಾರತದಲ್ಲಿ ಕೊರೊನಾ ಪೀಡಿತ ರೋಗಿಗಳಿಗೆ ಅವಿಗನ್ ಪರಿಣಾಮಕಾರಿಯಾದ ಚಿಕಿತ್ಸೆ ಪಡೆಯುವ ಒಂದು ಆಯ್ಕೆಯಾಗಿದೆ ಎಂದು ನಾವು ನಂಬುತ್ತೇವೆ ಎಂದು ಡಾ. ರೆಡ್ಡೀಸ್ ಲ್ಯಾಬೊರೇಟರಿ ಹೇಳಿಕೊಂಡಿದೆ