ಆಗ್ರಾ: ಆಗ್ರಾದಲ್ಲಿ ನಾಪತ್ತೆಯಾದ ವೈದ್ಯರೊಬ್ಬರು ಶವವಾಗಿ ಪತ್ತೆಯಾಗಿದ್ದು, ಸ್ನೇಹಿತನೇ ಕೊಲೆ ಮಾಡಿರುವುದಾಗಿ ಪೊಲೀಸರ ಮುಂದೆ ಒಪ್ಪಿಕೊಂಡಿದ್ದಾನೆ.
ಡಾ.ಯೋಗಿತಾ ಗೌತಮ್ ಮತ್ತು ವೈದ್ಯ ವಿವೇಕ್ ತಿವಾರಿ ಎಸ್.ಎನ್ ವೈದ್ಯಕೀಯ ಕಾಲೇಜಿನಲ್ಲಿ ಕೆಲಸ ಮಾಡುತ್ತಿದ್ದರು. ವಿವೇಕ್ ಯೋಗಿತಾ ಅವರಿಗಿಂತ ಒಂದು ವರ್ಷ ಸಿನೀಯರ್ ಆಗಿದ್ದು, ಇವರಿಬ್ಬರು ಕಳೆದ ಏಳು ವರ್ಷಗಳಿಂದ ಸಂಬಂಧದಲ್ಲಿದ್ದರು.
ಮಂಗಳವಾರ ಕೊಲೆ
ಯೋಗಿತಾ ಮತ್ತು ಗೌತಮ್ ಮಧ್ಯೆ ಆಗಾಗ ಜಗಳಗಳು ನಡೆಯುತ್ತಲೇ ಇದ್ದವು. ಮಂಗಳವಾರದಂದು ಗೌತಮ್ನನ್ನು ಭೇಟಿ ಮಾಡಲು ಯೋಗಿತಾ ತೆರಳಿದ್ದರು. ಇಬ್ಬರು ಕಾರಿನಲ್ಲಿ ತೆರಳಿದ್ದಾರೆ. ಈ ವೇಳೆ ಕಾರಿನಲ್ಲಿ ಮತ್ತೆ ಕಿತ್ತಾಡಿಕೊಂಡಿದ್ದಾರೆ. ಕೋಪಗೊಂಡ ಗೌತಮ್ ಯೋಗಿತಾ ಮೇಲೆ ಹಲ್ಲೆ ಮಾಡಿದ್ದಾನೆ.
ಯೋಗಿತಾ ಮೇಲೆ ಹಲ್ಲೆ ಮಾಡಿದ ಬಳಿಕ ಗೌತಮ್ ಕಾರಿನಲ್ಲಿದ್ದ ಚಾಕುವಿನಿಂದ ಆಕೆಯ ಕತ್ತು ಕೊಯ್ದು ಕೊಲೆ ಮಾಡಿದ್ದಾನೆ. ಯೋಗಿತಾ ಮೃತದೇಹವನ್ನು ಬಮ್ರೌಲಿ ಕತಾರಾ ರಸ್ತೆ ಪಕ್ಕದಲ್ಲಿ ಕಟ್ಟಿಗೆಗಳಿಂದ ಮುಚ್ಚಿ ಹೋಗಿದ್ದಾನೆ.
ಬುಧವಾರ ಶವ ಪತ್ತೆ
ಇನ್ನು ನನ್ನ ಮಗಳು ಕಾಣೆಯಾಗಿದ್ದಾಳೆ ಎಂದು ಯೋಗಿತಾ ಕುಟುಂಬಸ್ಥರು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಕಾರ್ಯಪ್ರವೃತ್ತರಾದ ಪೊಲೀಸರಿಗೆ ಆಗ್ರಾದಿಂದ 20 ಕಿ.ಮೀ ದೂರದಲ್ಲಿ ವೈದ್ಯೆ ಯೋಗಿತಾ ಶವ ದೊರೆತ್ತಿತ್ತು.
ಗೌತಮ್ ವಿರುದ್ಧ ದೂರು
ಮದುವೆ ವಿಚಾರವಾಗಿ ಅವರಿಬ್ಬರ ಮಧ್ಯೆ ಜಗಳ ನಡೆಯುತ್ತಿತ್ತು. ನನ್ನ ಮಗಳನ್ನು ಮದುವೆ ಮಾಡಿಕೊಳ್ಳುವುದಾಗಿ ನಂಬಿಸಿದ್ದನು ಎಂದು ಯೋಗಿತಾ ಪೋಷಕರು ಗೌತಮ್ ವಿರುದ್ಧ ಆರೋಪಿಸಿದ್ದರು. ಬಳಿಕ ಯೋಗಿತಾ ಸಹೋದರ ಮೊಹಿಂದ್ರ್ ಕುಮಾರ್ ಗೌತಮ್ ವಿರುದ್ಧ ಹೆಚ್.ಎಂ ಗೇಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಗುರುವಾರ ಆರೋಪಿ ಅರೆಸ್ಟ್:
ದೂರಿನಿನ್ವಯ ಪೊಲೀಸರು ಜಲೌನ್ನಲ್ಲಿ ಗೌತಮ್ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದರು. ಮೊದಲು ಗೌತಮ್ ತಡಬಡಿಸುತ್ತಲೇ ಪೊಲೀಸರ ಪ್ರಶ್ನೆಗೆ ಉತ್ತರಿಸಿದ್ದಾನೆ. ಬಳಿಕ ಪೊಲೀಸರು ತಮ್ಮದೇ ಆದ ಸ್ಟೈಲ್ನಲ್ಲಿ ವಿಚಾರಿಸಿದಾಗ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.