ಅಲೀಗಢ(ಉ.ಪ್ರದೇಶ) : ಹೋಮಿಯೋಪತಿ ವೈದ್ಯರೊಬ್ಬರನ್ನು ಅಪಹರಣಾಕಾರರು ಕಿಡ್ನಾಪ್ ಮಾಡಿದ್ದು, 20 ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದಾರೆ. ಈ ಘಟನೆ ಥಾನಾ ಪೊಲೀಸ್ ಠಾಣೆಯ ರಾಮ್‌ಘಾಟ್ ರಸ್ತೆಯಲ್ಲಿರುವ ಸಾಕ್ಷಿ ವಿಹಾರ್ ಕಾಲೋನಿಯಲ್ಲಿ ನಡೆದಿದೆ.
ಸಾಕ್ಷಿ ವಿಹಾರ್ ಕಾಲೋನಿ ನಿವಾಸಿ ಡಾ. ಶೈಲೇಂದ್ರ ಸಿಂಗ್ ಅಪಹರಣಕ್ಕೊಳಗಾದ ವೈದ್ಯ. ಇವರು ಆಸ್ಪತ್ರೆಗೆ ತೆರಳುವ ಮಾರ್ಗ ಮಧ್ಯೆ ಈ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ. ಇನ್ನು ಘಟನೆ ನಡೆದ 1 ಗಂಟೆಯಲ್ಲಿ ಶೈಲೇಂದ್ರ ಪತ್ನಿಗೆ ಕರೆ ಬಂದಿದ್ದು, 20 ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದಾರೆ. ಬಳಿಕ ಗಾಬರಿಗೊಂಡ ಆಕೆ ಪೊಲೀಸರಿಗೆ ಮಾಹಿತಿ ನೀಡಿದ್ದು, ತನಿಖೆ ಪ್ರಾರಂಭಿಸಿದ್ದಾರೆ.
ಇನ್ನು ಪ್ರಕರಣ ದಾಖಲಿಸಿಕೊಂಡ ಪೊಲೀಸರು ಸಿಸಿಟಿವಿ ದೃಶ್ಯಗಳನ್ನು ಆಧರಿಸಿ ವೈದ್ಯರ ರಕ್ಷಣೆಗೆ ಮತ್ತು ಅಪಹರಣಕಾರರ ಪತ್ತೆಗೆ ಬಲೆ ಬೀಸಿದ್ದಾರೆ.