ETV Bharat / bharat

600ಕ್ಕೆ 600ರಷ್ಟು ಅಂಕ: ಸಿಬಿಎಸ್​ಇಯಲ್ಲಿ ಶೇ.100ರಷ್ಟು ಫಲಿತಾಂಶ ಪಡೆದ ದಿವ್ಯಾಶ್ರೀ! - ಸಿಬಿಎಸ್​ಇ ಪರೀಕ್ಷೆ

ವಿದ್ಯಾರ್ಥಿನಿವೋರ್ವಳು ಶೇ.100ರಷ್ಟು ಫಲಿತಾಂಶ ಗಳಿಕೆ ಮಾಡುವ ಮೂಲಕ ಸಿಬಿಎಸ್​ಇ ಪರೀಕ್ಷೆಯಲ್ಲಿ ಹೊಸ ದಾಖಲೆ ಬರೆದಿದ್ದಾಳೆ.

Divyanshi Jain
Divyanshi Jain
author img

By

Published : Jul 13, 2020, 6:05 PM IST

ಲಕ್ನೋ: ಸಿಬಿಎಸ್​ಇ 12ನೇ ತರಗತಿ ಫಲಿತಾಂಶ ಇಂದು ಹೊರಬಿದ್ದಿದ್ದು, ಶೇ.88.78ರಷ್ಟು ವಿದ್ಯಾರ್ಥಿಗಳು ಪಾಸ್​ ಆಗಿದ್ದಾರೆ. ಕಳೆದ ವರ್ಷಕ್ಕಿಂತಲೂ ಈ ಸಲ ಅತಿ ಹೆಚ್ಚು ವಿದ್ಯಾರ್ಥಿಗಳು ಪಾಸ್​ ಆಗಿದ್ದಾರೆ.

ಈ ಸಲದ ಪರೀಕ್ಷೆಯಲ್ಲಿ ಉತ್ತರಪ್ರದೇಶ ರಾಜಧಾನಿ ಲಕ್ನೋದ ವಿದ್ಯಾರ್ಥಿನಿವೋರ್ವಳು 600ಕ್ಕೆ 600ರಷ್ಟು ಅಂಕ ಪಡೆದುಕೊಂಡಿದ್ದು, ಶೇ 100ರಷ್ಟು ಫಲಿತಾಂಶಗಳಿಸಿದ್ದಾಳೆ. ದಿವ್ಯಾಶ್ರೀ ಜೈನ್​ ಈ ಸಾಧನೆ ಮಾಡಿರುವ ವಿದ್ಯಾರ್ಥಿನಿ.

ಸಿಬಿಎಸ್​ಇಯಲ್ಲಿ ಶೇ.100ರಷ್ಟು ಫಲಿತಾಂಶ

ಪರೀಕ್ಷೆಗೋಸ್ಕರ ಆರಂಭದಿಂದಲೇ ತಯಾರಿ ನಡೆಸಿದ್ದ ಪರಿಣಾಮವಾಗಿ ಈ ಸಾಧನೆ ಮಾಡಲು ಸಾಧ್ಯವಾಗಿದೆ ಎಂದು ಹೇಳಿಕೊಂಡಿರುವ ದಿವ್ಯಾಶ್ರೀ, ಹಿಂದಿ, ಇಂಗ್ಲಿಷ್​, ಸಂಸ್ಕೃತ,ಇತಿಹಾಸ,ಭೌಗೋಳಶಾಸ್ತ್ರ ಹಾಗೂ ಇನ್ಸೂರೆನ್ಸ್​ ವಿಷಯ ತೆಗೆದುಕೊಂಡಿದ್ದಾಗಿ ತಿಳಿಸಿದ್ದಾಳೆ.

ತಮ್ಮ ಶಿಕ್ಷಣಕ್ಕಾಗಿ ಶಾಲೆಯಲ್ಲಿ ಎಲ್ಲ ಶಿಕ್ಷಕರು ಹಾಗೂ ಪೋಷಕರು ಸಹಾಯ ಮಾಡಿದ್ದು, ಅದರ ಫಲವಾಗಿ ಇಂದು ಇಷ್ಟೊಂದು ಅಂಕಗಳಿಕೆ ಮಾಡಲು ಸಾಧ್ಯವಾಗಿದೆ ಎಂದು ತಿಳಿಸಿದ್ದಾರೆ.ಈ ಸಲದ ಪರೀಕ್ಷೆಯಲ್ಲಿ ಶೇ.92.15ರಷ್ಟು ವಿದ್ಯಾರ್ಥಿನಿಯರು ಹಾಗೂ ಶೇ.86.19ರಷ್ಟು ವಿದ್ಯಾರ್ಥಿಗಳು ಪಾಸ್​ ಆಗಿದ್ದಾರೆ. ಈ ಸಲದ ಪರೀಕ್ಷೆಯಲ್ಲಿ 38,686 ವಿದ್ಯಾರ್ಥಿಗಳು ಶೇ.95ರಷ್ಟು ಫಲಿತಾಂಶಗಳಿಸಿದ್ದುಮ1,57,934 ವಿದ್ಯಾರ್ಥಿಗಳು ಶೇ.90ರಷ್ಟು ಅಂಕ ಪಡೆದುಕೊಂಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.