ETV Bharat / bharat

ಬೆಟ್ಟ, ಗುಡ್ಡ ಹತ್ತಿಳಿದು ಬುಡಕಟ್ಟು ಜನರಿಗೆ ದಿನಸಿ ತಲುಪಿಸಿದ ಜಿಲ್ಲಾಧಿಕಾರಿ, ಶಾಸಕ

author img

By

Published : Apr 4, 2020, 12:29 PM IST

ಲಾಕ್​ಡೌನ್​ನಿಂದಾಗಿ ಕೇವಲ ನಗರವಾಸಿಗಳಿಗೆ ಮಾತ್ರವಲ್ಲ, ಕಾಡಿನಲ್ಲಿ ವಾಸಿಸುವ ಬುಡಕಟ್ಟು ಜನಾಂಗದವರೂ ಸಹ ನಿತ್ಯದ ವಸ್ತುಗಳಿಗೆ ಪರದಾಡುವಂತಾಗಿದೆ. ಕೇರಳದ ಪಥನಮ್​ತಿಟ್ಟ ಜಿಲ್ಲೆಯ ಅಭಯಾರಣ್ಯದಲ್ಲಿ ಆಹಾರವಿಲ್ಲದೇ ಪರದಾಡುತ್ತಿದ್ದ 37 ಬುಡಕಟ್ಟು ಕುಟುಂಬಗಳಿಗೆ ದಿನಸಿ ತಲುಪಿಸಿದ ಜಿಲ್ಲಾಧಿಕಾರಿ ಹಾಗೂ ಶಾಸಕರ ಕಾರ್ಯ ಮಾದರಿಯಾಗಿದೆ.

District Collector and MLA trekked
District Collector and MLA trekked

ಪಥನಮ್​ತಿಟ್ಟ: ಜಿಲ್ಲಾಧಿಕಾರಿ ಮತ್ತು ಶಾಸಕ ಸೇರಿ ಕಿಲೋಮೀಟರಗಟ್ಟಲೆ ಬೆಟ್ಟ ಹತ್ತಿಳಿದು ಬುಡಕಟ್ಟು ಜನರಿಗೆ ಅಕ್ಕಿ ಹಾಗೂ ಇತರ ಅಗತ್ಯ ವಸ್ತುಗಳನ್ನು ತಲುಪಿಸಿದ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಪಥನಮ್​ತಿಟ್ಟ ಡಿಸಿ ಪಿ.ಬಿ. ನೂಹ್ ಮತ್ತು ಶಾಸಕ ಕೆ.ಯು. ಜನೀಶಕುಮಾರ, 3 ಕಿಮೀ ಟ್ರೆಕ್ಕಿಂಗ್​ ಮಾಡಿ ಕಾಡಿನಲ್ಲಿರುವ ಬುಡಕಟ್ಟು ಜನರಿಗೆ ಅಗತ್ಯ ವಸ್ತುಗಳನ್ನು ಒದಗಿಸಿದ್ದಾರೆ.

ಪಥನಮ್​ತಿಟ್ಟ ಜಿಲ್ಲೆಯ ಅವನಿಪ್ಪರಾ ಬುಡಕಟ್ಟು ವಾಸಸ್ಥಾನ ಪೆರಿಯಾರ್ ಅಭಯಾರಣ್ಯದಲ್ಲಿ ಮೀನಾಚಿಲ್​ ನದಿ ದಂಡೆಯಲ್ಲಿದೆ. ಲಾಕ್​ಡೌನ್​ನಿಂದಾಗಿ ಇಲ್ಲಿ ವಾಸಿಸುವ 37 ಬುಡಕಟ್ಟು ಕುಟುಂಬಗಳು ದಿನನಿತ್ಯದ ಅಗತ್ಯ ವಸ್ತು ಸಿಗದೇ ಪರದಾಡುತ್ತಿದ್ದರು.

ಸ್ಥಳೀಯ ವಾರ್ಡ್​ ಸದಸ್ಯರೊಬ್ಬರು ಮಾಹಿತಿ ನೀಡಿದ ಮೇಲಷ್ಟೆ ಇವರ ಕಷ್ಟ ಹೊರಗಿನ ಜಗತ್ತಿಗೆ ತಿಳಿದಿದೆ. ವಿಷಯ ತಿಳಿದ ಇಲ್ಲಿನ ಡಿಸಿ ಪಿ.ಬಿ. ನೂಹ್​, ಸ್ಥಳೀಯ ಶಾಸಕ ಹಾಗೂ ಇನ್ನು ಕೆಲ ಜನರನ್ನು ಜೊತೆಯಾಗಿಸಿಕೊಂಡು ಕಡಿದಾದ ಬೆಟ್ಟ ಗುಡ್ಡದ ಮಾರ್ಗದಲ್ಲಿ ಸಾಗಿ ಬುಡಕಟ್ಟು ಜನರಿಗೆ ಬೇಕಾದ ಅಗತ್ಯ ವಸ್ತುಗಳನ್ನು ನೀಡಿದ್ದಾರೆ. ಈ ಬುಡಕಟ್ಟು ಜನ ವಾಸಿಸುವ ಸ್ಥಳಕ್ಕೆ ತೆರಳುವ ಮೂರು ಕಿಮೀ ಮಾರ್ಗ ಮಧ್ಯೆ ಜಿಲ್ಲಾಧಿಕಾರಿಗಳ ತಂಡ ನಡೆದುಕೊಂಡೇ ನದಿಯೊಂದನ್ನು ಸಹ ದಾಟಿದೆ. ಡಿಸಿ ನೂಹ್​ ಅವರ ಮಾನವೀಯ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.