ವಿಶಾಖಪಟ್ಟಣಂ (ಆಂಧ್ರಪ್ರದೇಶ): ವಿಶಾಖ ಏಜೆನ್ಸಿ ಪ್ರದೆಶದಲ್ಲಿ ನಾಗರಿಕರು ಆಂಧ್ರಪ್ರದೇಶ ಸರ್ಕಾರದ ಕಲ್ಯಾಣ ಯೋಜನೆಗಳ ಫಲ ಪಡೆದುಕೊಳ್ಳಲು ಬೆಟ್ಟ ಹತ್ತುವುದು ಅನಿವಾರ್ಯವಾಗಿದೆ.
ವಿಶಾಖಾ ಏಜೆನ್ಸಿಯ ಹಳ್ಳಿಯಾದ ಗೋಮಾಂಗಿಯಲ್ಲಿ ಯೋಜನೆಯ ಫಲಾನುಭವಿಗಳು ಬೆಟ್ಟ ಹತ್ತಿ ಬಂದು ತಮ್ಮ ಆರ್ಥಿಕ ಸಹಾಯ ಪಡೆಯುತ್ತಿದ್ದಾರೆ.
ಆರ್ಥಿಕ ಪರಿಹಾರಕ್ಕಾಗಿ ಸರ್ಕಾರವು ಬಯೋಮೆಟ್ರಿಕ್ ವ್ಯವಸ್ಥೆ ರದ್ದುಗೊಳಿಸಿ, ಫೋಟೋ ಮೂಲಕ ಗುರುತಿಸುವ ವಿಧಾನ ಅಳವಡಿಸಿಕೊಂಡಿದ್ದರೂ, ಇದಕ್ಕೆ ಉತ್ತಮ ಇಂಟರ್ನೆಟ್ ಸಂಪರ್ಕದ ಅಗತ್ಯವಿದೆ. ಫಲಾನುಭವಿಗಳ ಫೋಟೋ ಅಪ್ಲೋಡ್ ಮಾಡಲು ಉತ್ತಮ ನೆಟ್ವರ್ಕ್ಗಾಗಿ ಬೆಟ್ಟ ಹತ್ತಲೇಬೇಕಿದೆ.
ಇದರ ಪರಿಣಾಮವಾಗಿ, ವಯಸ್ಸಾದವರು ಸೇರಿದಂತೆ ಫಲಾನುಭವಿಗಳು ಕಷ್ಟಪಟ್ಟು ಬೆಟ್ಟ ಏರಬೇಕಾಗಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕಾದ ಪರಿಸ್ಥಿತಿಯಲ್ಲೂ ಜನ ಗುಂಪು ಗುಂಪಾಗಿ ಬೆಟ್ಟ ಏರಿ ಬರುತ್ತಿದ್ದಾರೆ.