ETV Bharat / bharat

ಅನರ್ಹ ಶಾಸಕರ ಪ್ರಕರಣ, ಆಡಿಯೋ ಪರಿಗಣಿಸಿದ ಸುಪ್ರೀಂ: ತೀರ್ಪಷ್ಟೇ ಬಾಕಿ - ಆಡಿಯೋ ಸೋರಿಕೆ ಸುಪ್ರೀಂನಲ್ಲಿ ಪ್ರಸ್ತಾಪ

ಕಾಂಗ್ರೆಸ್ ಪರ ವಕೀಲ ಕಪಿಲ್ ಸಿಬಲ್, ಬಿಎಸ್​ವೈ ಆಡಿಯೋವನ್ನು ಸುಪ್ರೀಂಕೋರ್ಟ್​ ಮುಂದಿಟ್ಟಿದ್ದಾರೆ.

ಸುಪ್ರೀಂ
author img

By

Published : Nov 5, 2019, 10:58 AM IST

Updated : Nov 5, 2019, 11:58 AM IST

ನವದೆಹಲಿ: ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಅಧಿಕಾರ ಕಳೆದುಕೊಳ್ಳಲು ಪ್ರಮುಖ ಕಾರಣವಾಗಿದ್ದ ಕಾಂಗ್ರೆಸ್​​-ಜೆಡಿಎಸ್​ ಅನರ್ಹ ಶಾಸಕರ ಪ್ರಕರಣಕ್ಕೆ ಮಹತ್ವದ ತಿರುವು ಸಿಕ್ಕಿದೆ. ಬಿಎಸ್​ವೈ ಅನರ್ಹರ ಬಗ್ಗೆ ಮಾತನಾಡಿದ್ದಾರೆ ಎನ್ನಲಾದ ಆಡಿಯೋವನ್ನು ಕಾಂಗ್ರೆಸ್ ಸುಪ್ರೀಂಕೋರ್ಟ್​ ಮುಂದಿಟ್ಟಿದೆ.

ಆಡಿಯೋ ವೈರಲ್​ ಆದ ಬಳಿಕ ಕಾಂಗ್ರೆಸ್​​ ಸುಪ್ರೀಂಕೋರ್ಟ್​ಗೆ ಅರ್ಜಿ ಸಲ್ಲಿಸಿ, ಬಿಎಸ್​ವೈ ಮಾಡಿದ್ದಾರೆ ಎನ್ನಲಾದ ವಿಡಿಯೋ ಸಾಕ್ಷ್ಯವಾಗಿ ಪರಿಗಣಿಸುವಂತೆ ಸುಪ್ರೀಂಗೆ ಅರ್ಜಿ ಸಲ್ಲಿಕೆ ಮಾಡಿತ್ತು. ನಿನ್ನೆ ಅರ್ಜಿ ಸ್ವೀಕರಿಸಿದ್ದ ಸುಪ್ರೀಂಕೋರ್ಟ್ ಇಂದು ಆಡಿಯೋ ಪರಿಗಣಿಸುವುದಾಗಿ ಹೇಳಿ, ಕಲಾಪ ಅಂತ್ಯಗೊಳಿಸಿದೆ. ​​

  • Karnataka MLAs: SC to take a call on whether alleged speech of CM BS Yeddyurappa at BJP meeting indicating that resignation of MLAs orchestrated by Amit Shah to be taken on record or not.

    No notice issued but Justice Ramana says, "You have brought it to our notice"

    — Bar & Bench (@barandbench) 5 November 2019 " class="align-text-top noRightClick twitterSection" data=" ">

ಬಿಎಸ್​ವೈ ಮಾತನಾಡಿದ್ದಾರೆ ಎನ್ನಲಾದ ಆಡಿಯೋದಲ್ಲಿ ಅನರ್ಹ ಶಾಸಕರಿಗೆ ಬಿಜೆಪಿ ಭದ್ರತೆ ನೀಡಿತ್ತು ಎನ್ನುವುದು ಸ್ಪಷ್ಟವಾಗಿ ಕೇಳಿಬಂದಿತ್ತು. ಈ ಆಡಿಯೋವನ್ನ ಇಂಗ್ಲಿಷ್​ಗೆ ಭಾಷಾಂತರಿಸಿ, ಕಪಿಲ್​ ಸಿಬಲ್​ ನ್ಯಾ ರಮಣ್ ಪೀಠದಿಂದ ಮುಂದೆ ವಾದ ಮಂಡನೆ ಮಾಡಿದರು. ಈ ವೇಳೆ, ನ್ಯಾ. ರಮಣ್​ ಈ ಆಡಿಯೋವನ್ನು ಪರಿಗಣಿಸುವುದಾಗಿ ಹೇಳಿದರು. ಅಷ್ಟೇ ಅಲ್ಲ, ​​​ ನೀವು ನಮ್ಮ ಗಮನಕ್ಕೆ ತಂದಿದ್ದೀರಿ ಎಂದು ಹೇಳಿ ಕಲಾಪ ಮುಕ್ತಾಯಗೊಳಿಸಿದರು.. ಕಪಿಲ್​ ಸಿಬಲ್​ ವಾದ ಮಂಡನೆ ಸಮಯದಲ್ಲಿ ಮಧ್ಯ ಪ್ರವೇಶಿಸಿದ ನ್ಯಾ.ಖನ್ನಾ ಈ ಎಲ್ಲ ವಿಷಯವನ್ನ ವಾದ- ಪ್ರತಿವಾದದ ವೇಳೆ, ಹೇಳಿದ್ದೀರಿ ಇದನ್ನೆಲ್ಲ ಗಂಭೀರವಾಗಿ ಪರಿಗಣಿಸಿದರೆ ಬಿಎಸ್​ವೈಗೆ ನೋಟಿಸ್​ ನೀಡಬೇಕಾಗುತ್ತದೆ. ತೀರ್ಪು ನೀಡಲು ವಿಳಂಬವಾಗುತ್ತದೆ ಎಂದರು.

ಇವತ್ತು ಕೋರ್ಟ್ ವಾದ - ಪ್ರತಿವಾದ ಆಲಿಸದೇ ಅರ್ಜಿದಾರರ ವಾದ ಆಲಿಸಿ, ಆಡಿಯೋವನ್ನು ಪರಿಗಣಿಸುವುದಾಗಿ ಹೇಳಿ, ಕಲಾಪ ಅಂತ್ಯ ಗೊಳಿಸಿದೆ. ಈಗ ಪ್ರಕರಣದ ತೀರ್ಪಷ್ಟೇ ಹೊರ ಬೀಳಬೇಕಿದೆ. ಹೀಗಾಗಿ ಎಲ್ಲರ ಚಿತ್ತ ಸುಪ್ರೀಂ ತೀರ್ಪಿನತ್ತ ನೆಟ್ಟಿದೆ.

Intro:Body:

ನವದೆಹಲಿ: 

Conclusion:
Last Updated : Nov 5, 2019, 11:58 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.