ETV Bharat / bharat

ಧ್ರುವಾಸ್ತ್ರಗಳ ಅವತಾರ ತಾಳಿದ ನಾಗ್​ ಕ್ಷಿಪಣಿಗಳ ಪ್ರಯೋಗ ಯಶಸ್ವಿ: ವಿಡಿಯೋ

author img

By

Published : Jul 22, 2020, 12:51 PM IST

ನಾಗ್​ ಕ್ಷಿಪಣಿಗಳ ಪರೀಕ್ಷಾರ್ಥ ಪ್ರಯೋಗ ಮತ್ತೊಮ್ಮೆ ಯಶಸ್ವಿಯಾಗಿದ್ದು, ಒಡಿಶಾದ ಬಾಲಸೋರ್​ನಲ್ಲಿ ನಾಗ್​ ಕ್ಷಿಪಣಿ ಪರೀಕ್ಷೆ ನಡೆದಿದೆ.

balasore
ಬಾಲಸೋರ್​

ಬಾಲಾಸೋರ್ (ಒಡಿಶಾ): ಸಮರ ಟ್ಯಾಂಕ್​ಗಳನ್ನು ಧ್ವಂಸ ಮಾಡಬಲ್ಲ ನಾಗ್​ ಕ್ಷಿಪಣಿಗಳ ಪರೀಕ್ಷಾರ್ಥ ಪ್ರಯೋಗ ಮತ್ತೊಮ್ಮೆ ಯಶಸ್ವಿಯಾಗಿದೆ. ಒಡಿಶಾದ ಬಾಲಸೋರ್​ನಲ್ಲಿ ನಾಗ್​ ಕ್ಷಿಪಣಿ ಪರೀಕ್ಷೆ ನಡೆದಿದ್ದು, ಈ ಮಿಸೈಲ್​ ನಿಗದಿತ ಗುರಿ ತಲುಪಿದೆ.

ಬಾಲಸೋರ್​

ಜುಲೈ 15 ಮತ್ತು 16ರಂದು ಈ ಪ್ರಯೋಗಗಳು ನಡೆದಿವೆ. ಯುದ್ಧ ಭೂಮಿಯಲ್ಲಿ ವೈರಿ ಪಡೆಗಳಿಗೆ ಹೆಲಿಕಾಪ್ಟರ್​​ನಿಂದಲೇ ಗುರಿಯಿಟ್ಟು ಛಿದ್ರಗೊಳಿಸುವ ಸಾಮರ್ಥ್ಯ ಈ ನಾಗ್​ ಕ್ಷಿಪಣಿಗಿದೆ. ಭೂಮಿಯಿಂದಲೂ ದಾಳಿ ನಡೆಸುವ ಬಲವನ್ನು ಇದು ಹೊಂದಿದೆ. ಈ ಸಲದ ಪರೀಕ್ಷೆಯಲ್ಲಿ ಹೆಲಿಕಾಪ್ಟರ್​ ಇಲ್ಲದೆ ಭೂಮಿಯಿಂದಲೇ ಈ ಕ್ಷಿಪಣಿ ನಿಗದಿತ ಗುರಿಯನ್ನು ಛಿದ್ರಗೊಳಿಸಿದೆ.

ನೇರ ದಿಕ್ಕಿನಲ್ಲಿ ಮತ್ತು ಎತ್ತರಕ್ಕೆ ಚಿಮ್ಮಿ ಅಲ್ಲಿಂದ ಗುರಿಯನ್ನು ಭೇದಿಸಿದೆ. ಈ ಕ್ಷಿಪಣಿಗಳು ಅತ್ಯಾಧುನಿಕವಾಗಿದ್ದು, ಹಗಲು-ರಾತ್ರಿ ಕೆಲಸ ಮಾಡುವ ಸಾಮರ್ಥ್ಯ ಹೊಂದಿವೆ. ಈ ಕ್ಷಿಪಣಿ ವ್ಯವಸ್ಥೆಯನ್ನು ಡಿಆರ್​ಡಿಒ ಅಭಿವೃದ್ಧಿ ಪಡಿಸಿದೆ. ನಾಗ್​ ಕ್ಷಿಪಣಿಗೆ ಈಗ ಮರುನಾಮಕರಣ ಮಾಡಲಾಗಿದ್ದು 'ಧ್ರುವಾಸ್ತ್ರ' ಎಂದು ಕರೆಯಲಾಗುತ್ತದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.