ETV Bharat / bharat

ಭಕ್ತರಿಗೆ ಸಿಹಿ ಸುದ್ದಿ: ನಾಳೆಯಿಂದ ಅಯ್ಯಪ್ಪಸ್ವಾಮಿ ದರ್ಶನಕ್ಕೆ ಅವಕಾಶ - ಶಬರಿಮಲೆ ಅಯ್ಯಪ್ಪನ ದರ್ಶನ ಭಾಗ್ಯ

ಕೋವಿಡ್​ ಹಿನ್ನೆಲೆ ಮಾರ್ಚ್ 24ರ ಲಾಕ್‌ಡೌನ್ ನಂತರ ಇದೇ ಮೊದಲ ಬಾರಿಗೆ ಶಬರಿಮಲೆ ಅಯ್ಯಪ್ಪನ ದೇವಾಲಯ ಪ್ರವೇಶಕ್ಕೆ ಅನುಮತಿ ದೊರೆತಿದ್ದು, ತಿಂಗಳಲ್ಲಿ 5 ದಿನಗಳ ಕಾಲ ನಡೆಯಲಿರುವ ಪೂಜಾ ಕೈಂಕರ್ಯ ಶನಿವಾರದಿಂದ ಪ್ರಾರಂಭವಾಗಲಿದೆ.

Devotees to be allowed at Sabarimala from Oct 17
ಅಯ್ಯಪ್ಪನ ಭಕ್ತರಿಗೆ ಸಿಹಿ ಸುದ್ದಿ: ಅಕ್ಟೋಬರ್ 17 ರಿಂದ ಶಬರಿಮಲೆಗೆ ಅವಕಾಶ
author img

By

Published : Oct 16, 2020, 7:58 AM IST

ತಿರುವನಂತಪುರಂ: ಆರು ತಿಂಗಳ ನಂತರ ಭಕ್ತರಿಗೆ ಮತ್ತೆ ಶಬರಿಮಲೆ ಅಯ್ಯಪ್ಪನ ದರ್ಶನ ಭಾಗ್ಯ ದೊರೆತಿದೆ. ಕೋವಿಡ್​ ಹಿನ್ನೆಲೆ ಮಾರ್ಚ್ 24ರ ರಾಷ್ಟ್ರವ್ಯಾಪಿ ಲಾಕ್‌ಡೌನ್ ನಂತರ ಇದೇ ಮೊದಲ ಬಾರಿಗೆ ದೇವಾಲಯ ಪ್ರವೇಶಕ್ಕೆ ಅನುಮತಿ ದೊರೆತಿದ್ದು, ತಿಂಗಳಲ್ಲಿ 5 ದಿನಗಳ ಕಾಲ ನಡೆಯಲಿರುವ ಪೂಜಾ ಕೈಂಕರ್ಯ ಶನಿವಾರದಿಂದ ಪ್ರಾರಂಭವಾಗಲಿದೆ.

ಶುಕ್ರವಾರ ಸಂಜೆ 5 ಗಂಟೆಗೆ ದೇವಾಲಯ ತೆರೆಯಲಿದೆ. ಆದರೆ ಮಲಯಾಳಂ ತಿಂಗಳ ಮೊದಲ ದಿನವಾದ ''ಥುಲಂ''ನಂದು ಅಂದರೆ ಶನಿವಾರ ಬೆಳಗ್ಗೆ 5 ಗಂಟೆಯಿಂದ ಭಕ್ತರ ಪ್ರವೇಶಕ್ಕೆ ಅವಕಾಶವಿದೆ ಎಂದು ತಿರುವಾಂಕೂರು ದೇವಸ್ವಂ ಮಂಡಳಿಯ(ಟಿಡಿಬಿ) ಮೂಲಗಳು ತಿಳಿಸಿವೆ.

ದೇವಾಲಯಕ್ಕೆ ಬರುವ ಭಕ್ತಾದಿಗಳು 48 ಗಂಟೆಗಳ ಮೊದಲು ಪರೀಕ್ಷೆ ನಡೆಸಿ ಕೋವಿಡ್​-19 ನೆಗೆಟಿವ್​ ಪ್ರಮಾಣಪತ್ರವನ್ನು ಕಡ್ಡಾಯವಾಗಿ ಒಯ್ಯಬೇಕು ಮತ್ತು ವರ್ಚುವಲ್ ಕ್ಯೂ ವ್ಯವಸ್ಥೆಯ ಮೂಲಕ ದರ್ಶನ ಸಮಯ ಮತ್ತು ದಿನವನ್ನು ಕಾಯ್ದಿರಿಸಬೇಕು ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸುದ್ದಿಗಾರರಿಗೆ ತಿಳಿಸಿದರು.

ಕೋವಿಡ್​-19 ಹಿನ್ನೆಲೆ ಯಾತ್ರಿಕರಿಗೆ ನೀಲಕ್ಕಲೋರ್ ಪಂಬಾದ ಸನ್ನಿಧನಂನಲ್ಲಿ ಉಳಿಯಲು ಅನುಮತಿ ಇರುವುದಿಲ್ಲ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.